Breaking News
ಕೆ.ಎನ್.ಪಿ.ದಿನದ ಕವಿತೆ,ಜ.02; ಕೆ.ಎನ್.ಪಿ.ಯ ದಿನದಕವಿತೆ ವಿಭಾಗದಲ್ಲಿ ಇಂದು ಎಸ್.ಎಸ್.ಮಕಾನದಾರ ಅವರ "ಭ್ರಮೆ" ಎಂಬ ಕವಿತೆಯನ್ನ ಪ್ರಕಟಿಸಲಾಗಿದೆ ಓದಿರಿ. ತಮ್ಮ ಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.
ಕೆ.ಎನ್.ಪಿ.ಅಂಕಣ; ಆತ್ಮೀಯರೆ, ಜೀವಪರ ಬರಹಗಾರರಲ್ಲಿ ಡಾ.ಎಚ್.ಎಸ್.ಅನುಪಮಾ ಒಬ್ಬರು. ಅವರ "ಮುಳ್ಳ ಮೇಲಿನ ಸೆರಗು" (ಅತ್ಯಾಚಾರ ಮತ್ತು ಕಾನೂನು: ಇಣುಕು ನೋಟ) ಕೃತಿಯ ಆಯ್ದ ಲೇಖನಗಳಲ್ಲಿ 'ಎರಡು ಕಾಲಿನ ಜೀವಿ!' ಲೇಖನವನ್ನು ನಿಮಗಾಗಿ ಕೆ.ಎನ್.ಪಿ.ಯಲ್ಲಿ ಪ್ರಕಟಿಸಿದೆ ತಪ್ಪದೆ ಓದಿರಿ. ಮತ್ತು ನಿಮ್ಮ ಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಬಾಕ್ಸ್ನಲ್ಲಿ ಬರೆಯಿರಿ.
ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣದ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಕಾಲೇಜು, ವಿಶ್ವವಿದ್ಯಾಲಯಗಳು ಶಿಕ್ಷಣವನ್ನು ನೀಡುವ ವಿದ್ಯಾಮಂದಿರಗಳಾಗಿದ್ದವು, ಆದರೆ ಇಂದು ಜಾತಿ, ಧರ್ಮ, ಭ್ರಷ್ಟಾಚಾರ, ಜಾತಿ ರಾಜಕಾರಣದ ಹಿನ್ನಲೆಯಲ್ಲಿ ತನ್ನ ಮೂಲ ನೆಲೆ ಕಳೆದುಕೊಳ್ಳುತ್ತಿರುವುದು ದುರಂತ ಮತ್ತು ಆತಂಕಕಾರಿ ವಿಷಯವಾಗಿದೆ.
ಅಕ್ಷರದ ಸಾಲುಗಳ ಬೆನ್ನಟ್ಟಿದ ನಮಗೆ ಭೌತಿಕ ಸುಖದ ಅನುಭವಗಳೇ ಪ್ರಧಾನವೆನಿಸುತ್ತವೆ. ಲೋಕದ ಸಂಗತಿಯೊಂದನ್ನ ಪ್ರಶ್ನಿಸದೇ ಒಪ್ಪಲಾಗದ ಮನಸ್ಥಿತಿ ಓದುವವರದು.
ಕಾವೇರಿ ನದಿಗೆ ಆಣೆಕಟ್ಟು: ಟಿಪ್ಪುವಿನ ಕನಸು 1931ರಲ್ಲಿ ನಡೆದ ಇರ್ವಿನ್ ನಾಲಾ ಚಳವಳಿಗೆ ಪ್ರಮುಖವಾಗಿ ಮೂರು ಕಾರಣಗಳು ಇದ್ದವು. ಅವು ಯಾವುವೆಂದರೆ ಇರ್ವಿನ್ ನಾಲಾ ಪ್ರದೇಶದಲ್ಲಿನ ರೈತರು,1. ಅನುಸರಿಸಬೇಕಾದ ಬ್ಲಾಕ್ ಸಿಸ್ಟಂ ವ್ಯವಸಾಯ ಕ್ರಮ2. ನೀರಾವರಿಯಾಗುವ ಜಮೀನುಗಳಿಗೆ ಕೊಡಬೇಕಾದ ಕಂದಾಯ3. ಕಾಂಟ್ರಿಬ್ಯೂಷನ್ ಕಟ್ಟಲು ತಡವಾದರೆ ಅದಕ್ಕೆ ಕೊಡಬೇಕಾದ ಬಡ್ಡಿ ಇವು ರೈತರಿಗೆ ಮಾರಣಾಂತಿಕವಾಗಿ ತೋರಿದವು. ವಿಶ್ವೇಶ್ವರಯ್ಯ ಸಮಿತಿ 80-100 ರೂ. ಕಾಂಟ್ರಿಬ್ಯೂಷನ್ ಹಣ ನಿಗದಿ ಮಾಡಿತ್ತು. ಅದನ್ನು ಸರ್ಕಾರ 100-150 ರೂ.ಗಳಿಗೆ ಏರಿಸಿತ್ತು. ಇದರಿಂದ ರೈತರು ಆಕ್ರೋಶಕ್ಕೀಡಾಗಿದ್ದರು. ಬ್ಲಾಕ್ ಸಿಸ್ಟಂ ವ್ಯವಸಾಯ ಪದ್ಧತಿಯು ಪ್ರಾದೇಶಿಕ ಜಾಯಮಾನಕ್ಕೆ ಹೊಂದುವಂತಿರಲಿಲ್ಲ. ಇದನ್ನು ಪ್ರತಿಭಟಿಸಲು ಎಚ್.ಕೆ.ವೀರಣ್ಣಗೌಡ, ಇಂಡುವಾಳು ಎಚ್.ಹೊನ್ನಯ್ಯ, ಹೊನಗಾನಹಳ್ಳಿ ಎಚ್.ಕೆ.ಪುಟ್ಟಣ್ಣ ಅವರ ನೇತೃತ್ವದಲ್ಲಿ ಸಂಘಟಿತರಾಗಿ 31.12.1931ರಂದು ಮದ್ದೂರಿನಿಂದ ಬೆಂಗಳೂರಿಗೆ ಕಾಲ್ನಡಿಗೆ ಜಾಥಾ ಹೊರಟರು. ಸುಮಾರು 4000 ಜನರಷ್ಟಿದ್ದ ಜಾಥಾ ಶಿಸ್ತಿನಿಂದ ಬೆಂಗಳೂರಿಗೆ ತಲುಪಿ ದಿವಾನರಿಗೆ ಮನವಿ ಸಲ್ಲಿಸಿತು. ದಿವಾನರು ರೈತರ ಮನವಿಗೆ ಸ್ಪಂದಿಸಿ, ಖುದ್ದು ಮಂಡ್ಯಕ್ಕೆ ಬಂದು ವಿಷಯ ಪರಿಶೀಲಿಸುವುದಾಗಿ ತಿಳಿಸಿದರು. ದಿವಾನರು ಮಂಡ್ಯಕ್ಕೆ ಬರುವುದಾಗಿ ತಿಳಿಸಿದ್ದರೂ, ಅವರ ಉದ್ದೇಶ ಬೇರೆಯದ್ದೇ ಆಗಿತ್ತು. ತನಗೆ ಅನುಕೂಲಕರವಾಗಿದ್ದ ರೈತರ ಸಭೆ ನಡೆಸಿ, ಸರ್ಕಾರದ ಹುಕುಂಗೆ ಬೆಂಬಲ ಪಡೆಯುವ ಹುನ್ನಾರ ಅದರಲ್ಲಡಗಿತ್ತು. ಗುಟ್ಟಿನಲ್ಲಿ ಸಭೆ ಕರೆದಿರುವುದು ಹೇಗೋ ರೈತ ನಾಯಕರಿಗೆ ತಿಳಿಯಿತು. ದಿವಾನರು ಬರುವ ದಿವಸ ಮಂಡ್ಯದ ಮುಸಾಫಿರ್ ಖಾನೆಯ ಎದುರು ಸುಮಾರು 10,000 ರೈತರು ಸೇರಿದ್ದರು! ಅವರ ಕೈಯ್ಯಲ್ಲಿ ಒಂದು ಕರಪತ್ರವಿತ್ತು. ಕೃಷ್ಣರಾಜಸಾಗರದ ಮಂಟಪದಲ್ಲಿರುವ ಟಿಪ್ಪು ಸುಲ್ತಾನರ ಶಾಸನದ ಕನ್ನಡ ಭಾಷಾಂತರ ಪ್ರತಿ ಅದಾಗಿತ್ತು!! ಈ ಶಾಸನದ ಪ್ರತಿ ಹಿಡಿದಿದ್ದ ರೈತರ ಆಕ್ರೋಶ ಮುಗಿಲು ಮುಟ್ಟಿತ್ತು. ಸರ್ಕಾರಕ್ಕೆ ಇದು ಇರಿಸು ಮುರಿಸು ತಂದಿತ್ತು. ಅಂಥಾದ್ದು ಏನಿತ್ತು ಆ ಶಾಸನದಲ್ಲಿ? (ಮುಂದುವರೆಯುವುದು) ಹುತಾತ್ಮ ಟಿಪ್ಪುವಿನ ಕುರಿತಾದ ಸರಣಿ ಲೇಖನಮಾಲೆ ನಿಮ್ಮ ಕೆ.ಎನ್.ಪಿ.ಯಲ್ಲಿ ಪ್ರಕಟಗೊಳ್ಳುತ್ತಿದೆ. ತಪ್ಪದೇ ಓದಿರಿ. ಸಹಕಾರ: ಸಮಾಜ ವಿಜ್ಞಾನ ಅಧ್ಯಯನ ಸಂಸ್ಥೆ. ಹುತಾತ್ಮ ಟಿಪ್ಪುಸುಲ್ತಾನ್ ಭಾಗ -10 ಟಿಪ್ಪುವಿನ ಸಾಧನೆ-ವಿಶೇಇಲ್ಲಿ ಕ್ಲಿಕ್ಕಿಸಿಷತೆಗಳು ಓದಲು
"ವಾಟ್ಸ್ಅಪ್ ಅಂಬೋಣ..!" ಕೇಂದ್ರ ಸರ್ಕಾರದ 500 ಮತ್ತು 1000 ರೂ ಮುಖಬೆಲೆ ನೋಟುಗಳ ರದ್ದತಿಗೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವ ವಿಚಾರ ಈಗ ಹಳೆಯದು. ಸಾಮಾಜಿಕ ಜಾಲತಾಣಗಳಲ್ಲಿ ಪುಟಗಟ್ಟಲೇ ವರದಿಗಳ ಮಹಾಪೂರವೇ ಹರಿಯುತ್ತಿವೆ. ಒಂದು ರೀತಿಯಲ್ಲಿ ಮೆಸೇಜ್ ವಾರ್ ಶುರುವಾದಂತೆ ಎರಡು ಕಡೆಯಿಂದ ಹೊಗಳಿಕೆ, ತೆಗಳಿಕೆ...! ಒಂದೆಡೆ ಈ ಕ್ರಮ ಅರ್ಥಕ್ರಾಂತಿಯೆಂದು ಬಣ್ಣಿಸಿದರೆ, ಬಲ್ಲವರು ಮಾತ್ರ 'ಅರ್ಥತುರ್ತು' ಎನ್ನುತ್ತಿದ್ದಾರೆ. ಅದೇನೆ ಇರಲಿ ಜನಸಾಮಾನ್ಯನಿಗೆ ಮಾತ್ರ ಪರದಾಟ ತಪ್ಪಿಲ್ಲ. ಹೀಗೆ ವಾಟ್ಸ್ಅಪ್ನಲ್ಲಿ ಹರಿದಾಡುತ್ತಿರುವ ಮಸೇಜ್ ವಾರ್ ಪೈಕಿ ಒಂದು ಮೆಸೇಜ್ ಅನ್ನು ಯಥಾವತ್ತಾಗಿ ನಿಮ್ಮ ಮುಂದಿಡುವ ಪ್ರಯತ್ನ ಮಾತ್ರ ನಮ್ಮದು.

Search For News

Cartoon Post

NewsLetter

Visitors Counter

3273914
Today
Yesterday
This Week
Last Week
This Month
Last Month
All days
2435
6468
22757
3222209
98404
263209
3273914
Your IP: 54.158.55.5
2017-10-18 09:07