Breaking News
ಕೆ.ಎನ್.ಪಿ.ವಾರ್ತೆ,ಬಾಗಲಕೋಟೆ,ಅ.1; ನಗರದ ಕಸಾಪ ಭವನದಲ್ಲಿ ಅ.02ರಂದು ಗಾಂಧಿಜಯಂತಿ ಜರುಗಲಿದೆ.
ವರದಿ : ಮಹಮ್ಮದ್ ಅಬ್ದುಲ್ ರಖೀಬ್ ಕೆ.ಎನ್.ಪಿ.ವಾರ್ತೆ,ಜಗಳೂರು,ಜು.12; ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಶಾಸಕ ಹೆಚ್.ಪಿ‌.ರಾಜೇಶ್ ಅವರ 52ನೇ ಹುಟ್ಟು ಹಬ್ಬದ ಪ್ರಯುಕ್ತ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ರಕ್ತದಾನ ಶಿಬಿರವನ್ನು ನಿನ್ನೆ ಆಯೋಜಿಸಲಾಗಿತ್ತು.
ಕೆ.ಎನ್.ಪಿ.ವಾರ್ತೆ,ಬೆಂಗಳೂರು, ಫೆ.27; 5 ಕಿ.ಮೀ ವ್ಯಾಪ್ತಿಗೊಂದು ಪೊಲೀಸ್ ಠಾಣೆ ಪುನರ್ ವಿಂಗಡಿಸಲಾಗುತ್ತಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಗುಬ್ಬಿ ಅಮಾನವೀಯ ಪ್ರಕರಣ : ದೌರ್ಜನ್ಯಕ್ಕೊಳಗಾದ ಅಭಿಷೇಕ್‍’ಗೆ 1 ಲಕ್ಷ ರೂ.ನೆರವು. ತುಮಕೂರು, ಜ.19-ಗುಬ್ಬಿಯಲ್ಲಿ ಯುವತಿಯನ್ನು ಚುಡಾಯಿಸಿದ್ದಕ್ಕೆ ಅಮಾನವೀಯವಾಗಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಕುಟುಂಬಕ್ಕೆ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ 1 ಲಕ್ಷ ರೂ. ನೆರವು ನೀಡಿದ್ದು, ಮುಂಗಡವಾಗಿ 25 ಸಾವಿರ ರೂ.ಗಳ ಚೆಕ್‍ನ್ನು ಅವರ ಕುಟುಂಬಕ್ಕೆ ಪರಿಶಿಷ್ಟ ಜಾತಿ ಪಂಗಡ ಆಯೋಗದ ಅಧ್ಯಕ್ಷ ಮುನಿಯಪ್ಪ ವಿತರಿಸಿದರು. ಗುಬ್ಬಿ ಪಟ್ಟಣದಲ್ಲಿ ಜ.16ರಂದು ಯುವತಿಯನ್ನು ಚುಡಾಯಿಸಿದ್ದ ಎಂಬ ಕಾರಣಕ್ಕೆ ಯುವಕ ಅಭಿಷೇಕ್‍ನನ್ನು ತೋಟದ ಮನೆಗೆ ಕರೆದೊಯ್ದು ಬೆತ್ತಲುಗೊಳಿಸಿ ಹಲ್ಲೆ ನಡೆಸಿದ್ದ ಹಿನ್ನಲೆಯಲ್ಲಿ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಭಿಷೇಕ್‍ನ ಆರೋಗ್ಯ ವಿಚಾರಿಸಲು ಆಗಮಿಸಿದ ಆಯೋಗದ ಅಧ್ಯಕ್ಷರು ಯುವಕನ ಆರೋಗ್ಯ ವಿಚಾರಿಸಿ ಅವರ ಕುಟುಂಬಕ್ಕೆ 25 ಸಾವಿರ ರೂ.ಗಳ ಚೆಕ್ ವಿತರಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಇದೊಂದು ಹೇಯ ಕೃತ್ಯವಾಗಿದೆ. ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದರು. ಹಲ್ಲೆಗೊಳಗಾದ ಯುವಕನ ಕುಟುಂಬಕ್ಕೆ ಈಗಾಗಲೇ 1 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಈ ಸಂಬಂಧ ಇಂದು 25 ಸಾವಿರ ರೂ. ಮುಂಗಡವಾಗಿ ಅವರ ಕುಟುಂಬಕ್ಕೆ ನೀಡಿದ್ದು, ಜಿಲ್ಲಾಡಳಿತದಿಂದ ಈ ಕುಟುಂಬಕ್ಕೆ ಎರಡು ಪ್ರವಾಸಿ ಟ್ಯಾಕ್ಸಿಗಳನ್ನು ಕೊಡಿಸುವ ಭರವಸೆ ನೀಡಿದರು.
ಕೆ.ಎನ್.ಪಿ.ವಾರ್ತೆ,ಬಾಗಲಕೋಟೆ,ಡಿ.28; ಪ್ಯಾಂಟ್ ಜೇಬಿನಲ್ಲಿಟ್ಟಿದ್ದ ಮೊಬೈಲ್ ಸಿಡಿದು ಯುವಕನೊಬ್ಬ ಗಾಯಗೊಂಡಿರುವ ಘಟನೆ ಗದ್ದನಕೇರಿ ಗ್ರಾಮದಲ್ಲಿ ಸಂಭವಿಸಿದೆ.
ಕೆ.ಎನ್.ಪಿ.ವಾರ್ತೆ,ಗದಗ,ಡಿ.23; ಟಂ ಟಂ ಹಾಗೂ ಬೈಕ್ ನಡುವೆ ಡಿಕ್ಕಿ, ಬೈಕ್ ಸವಾರರಿಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಗದಗ ತಾಲೂಕಿನ ಲಕ್ಕುಂಡಿ ಬಳಿ ಶನಿವಾರ ಸ೦ಭವಿಸಿದೆ. ಮೃತರು ಹುಬ್ಬಳ್ಳಿ ಮೂಲದವರಾಗಿದ್ದು, ಹೆಸರು ತಿಳಿದು ಬಂದಿಲ್ಲ. ಹುಬ್ಬಳ್ಳಿ ಯಿಂದ ಹೊಸಪೇಟೆ ಗೆ ಮದುವೆಗೆ ಹೊಗುವ ಸಂದರ್ಭದಲ್ಲಿ ದಾರಿ ಮಧ್ಯ ದುರ್ಘಟನೆ ನಡೆದಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Search For News

Cartoon Post

NewsLetter

Visitors Counter

3273971
Today
Yesterday
This Week
Last Week
This Month
Last Month
All days
2492
6468
22814
3222209
98461
263209
3273971
Your IP: 54.158.55.5
2017-10-18 09:14