Breaking News

ಅಮಿತಾಬ್ ಗೆ 'ವರ್ಷದ ವ್ಯಕ್ತಿತ್ವ ಪ್ರಶಸ್ತಿ'

Written by 
Published: 20 November 2017
29 times Last modified on Monday, 20 November 2017 09:26

ಕೆ.ಎನ್.ಪಿ.ವಾರ್ತೆ,ಬಾಲಿವುಡ್,ನ.20;
 
48ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ನ ಪ್ರಸಿದ್ದ ನಟ ಅಮಿತಾಬ್ ಬಚ್ಚನ್ ಅವರಿಗೆ 'ವರ್ಷದ ವ್ಯಕ್ತಿತ್ವ ಪ್ರಶಸ್ತಿ' ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೂಲಗಳು ತಿಳಿಸಿವೆ.

ಗೋವಾದಲ್ಲಿ ನಡೆಯುತ್ತಿರುವ ಈ ಬಾರಿಯ 48ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ಚಾಲನೆ ಸಿಗಲಿದೆ. ಬಾಲಿವುಡ್ ನ ಕಿಂಗ್ ಖಾನ್ ಶಾರುಖ್, ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಎಂಟು ದಿನಗಳ ಕಾಲ ಅಂದರೆ ಇಂದಿನಿಂದೆ 28ರವರೆಗೆ ಚಲನಚಿತ್ರೋತ್ಸವ ನಡೆಯಲಿದೆ. ಈ ಸಿನಿಮೋತ್ಸವದಲ್ಲಿ ಸಾಕಷ್ಟು ಸಿನಿಮಾಗಳು ಪ್ರದರ್ಶನವಾಗಲಿದೆ. ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ರಿಗೆ ಚಿತ್ರೋತ್ಸವದ ಮುಕ್ತಾಯದ ಸಮಾರಂಭದ ದಿನ 'ವರ್ಷದ ವ್ಯಕ್ತಿತ್ವ ಪ್ರಶಸ್ತಿ' ನೀಡಿ ಸನ್ಮಾನಿಸಲಾಗುವುದು.

ಭಾರತೀಯ ಸಿನಿಮಾರಂಗಕ್ಕೆ ಅಮಿತಾಬ್ ಬಚ್ಚನ್ ನೀಡಿರುವ ಕೊಡುಗೆಯನ್ನು ಪರಿಗಣಿಸಿ, ಈ ಪ್ರಶಸ್ತಿಯನ್ನು ನೀಡಿಲಾಗುತ್ತಿದ್ದು, ಇದೇ ಪ್ರಶಸ್ತಿಯನ್ನು ಅಮಿತಾಬ್ ಬಚ್ಚನ್ 2014ರಲ್ಲಿ ರಜನಿಕಾಂತ್ ರಿಗೆ ನೀಡಿದ್ದರು. 75 ವರ್ಷ ವಯಸ್ಸಿನ ಬಚ್ಚನ್, 190ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದು, ನಾಲ್ಕು ದಶಕಗಳಿಂದ ತಮ್ಮ ಚಿತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಾ ಬಂದಿದ್ದಾರೆ.

ಅಮಿತಾಬ್ ಇಲ್ಲಿಯವರೆಗೂ ಭಾರತದಲ್ಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮ ವಿಭೂಷಣ ಒಳಗೊಂಡಂತೆ ಇನ್ನೂ ಅನೇಕ ಪ್ರಶಸ್ತಿಗಳನ್ನ ಪಡೆದುಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಅವರನ್ನು ಭಾರತೀಯ ಸಿನಿಮಾರಂಗದಲ್ಲಿ ಅತ್ಯಂತ ಪ್ರಭಾವಿ ಕಲಾವಿದರನ್ನಾಗಿ ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770684
Today
Yesterday
This Week
Last Week
This Month
Last Month
All days
5856
14978
20834
3647859
196911
189062
3770684
Your IP: 54.221.76.68
2017-12-18 08:41