Breaking News

ನಾಗಚೈತನ್ಯ-ಸಮಂತಾ ವೆಡ್ಡಿಂಗ್

Written by 

ಕೆ.ಎನ್.ಪಿ.ವಾರ್ತೆ,ಸಿನಿಸಮಾಚಾರ;

ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದ ಈ ಜೋಡಿಯ ಪ್ರೇಮಕ್ಕೆ ಅಧಿಕೃತ ಮುದ್ರೆ ಬಿದ್ದಂತಾಗಿದೆ. ಗೋವಾದ ಕಡಲತೀರದಲ್ಲಿ ಅಕ್ಟೋಬರ್ 6ರಂದು ನಾಗಚೈತನ್ಯ ಹಾಗೂ ಸಮಂತಾ ವಿವಾಹ ಮಹೋತ್ಸವ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನೆರವೇರಿತು. ಬಳಿಕ ಅಕ್ಟೋಬರ್ 7ರಂದು ಶನಿವಾರ ಕ್ರೈಸ್ತ ಸಂಪ್ರದಾಯದಂತೆ ಈ ಜೋಡಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು.

ವಿವಾಹವು ಗೋವಾದ ಪ್ರತಿಷ್ಟಿತ ಹೋಟೆಲ್ ಒಂದರಲ್ಲಿ ಇವರ ಕ್ರಿಶ್ಚಿಯನ್ ವೆಡ್ಡಿಂಗ್ ಅದ್ಧೂರಿಯಾಗಿ ನಡೆಯಿತು. ಸಮಂತಾ ಬೆರಳಿಗೆ ನಾಗಚೈತನ್ಯ ಉಂಗುರ ತೊಡಿಸಿದರು. ಸಮಂತಾ ಬಿಳಿ ಬಣ್ಣದ ವೆಡ್ಡಿಂಗ್ ಗೌನ್ ಧರಿಸಿದ್ದರು. ನಾಗಚೈತನ್ಯ ಬಿಳಿ ಶರ್ಟ್, ಕಪ್ಪು ಬಣ್ಣದ ಸೂಟ್ ಧರಿಸಿದ್ದರು. 

ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯದಂತೆ ನಡೆದ ನಾಗ ಚೈತನ್ಯ-ಸಮಂತಾ ಮದುವೆಗೆ ಬಂಧು-ಮಿತ್ರರಿಗಷ್ಟೇ ಆಹ್ವಾನ ನೀಡಲಾಗಿತ್ತು. ಅಕ್ಟೋಬರ್ 15ರಂದು ಹೈದರಾಬಾದ್ ನಲ್ಲಿ ನಡೆಯುವ ಅದ್ಧೂರಿ ಆರತಕ್ಷತೆಯಲ್ಲಿ ಟಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3278843
Today
Yesterday
This Week
Last Week
This Month
Last Month
All days
1038
6326
27686
3222209
103333
263209
3278843
Your IP: 54.80.236.48
2017-10-19 03:26