Breaking News

ಹೆಲಿಕ್ಯಾಪ್ಟರ್ ಗೆ ಹಕ್ಕಿ ಡಿಕ್ಕಿ

Written by 
Published: 01 October 2017
62 times Last modified on Sunday, 01 October 2017 09:02

ಕೆ.ಎನ್.ಪಿ.ವಾರ್ತೆ,ಮೈಸೂರು,ಅ.1;

ಹಕ್ಕಿ ಬಡಿದ ಪರಿಣಾಮ ಜಾಲಿರೈಡ್ ಹೆಲಿಕ್ಯಾಪ್ಟರ್ ತುರ್ತಾಗಿ ಭೂ ಸ್ಪರ್ಶ ಮಾಡಿದೆ.

ಮೈಸೂರು ದಸರಾ ಪ್ರಯುಕ್ತ ಆಯೋಜಿಸಿರುವ ಹೆಲಿಕ್ಯಾಪ್ಟರ್‌ ರೈಡ್‌ ವೇಳೆ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ ಮೈಸೂರಿನ ಚಾಮುಂಡಿಬೆಟ್ಟದ ಲಲಿತ ಮಹಲ್ ಹೆಲಿಪ್ಯಾಡ್ ಬಳಿ ಜಾಲಿರೈಡ್ ಹಾರಾಟ ನಡೆಸುತ್ತಿದ್ದ ಹೆಲಿಕ್ಯಾಪ್ಟರ್ ಗಾಜಿಗೆ ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ಗಾಜು ಪುಡಿಯಾಗಿದೆ. ಆದರೆ, ಒಳಗಡೆ ಇದ್ದ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗಿಲ್ಲ.

ಸಮಯ ಪ್ರಜ್ಞೆ ಮೆರದ ಪೈಲೆಟ್ ಸುರಕ್ಷಿತವಾಗಿ ಹೆಲಿಕ್ಯಾಪ್ಟರ್ ಅನ್ನು ಲ್ಯಾಂಡ್ ಮಾಡಿದ್ದಾರೆ. ಸುರಕ್ಷಿತವಾಗಿ ಹೆಲಿಕ್ಯಾಪ್ಟರ್ ಲ್ಯಾಂಡ್ ಆಗಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಮೈಸೂರು ದಸರಾಕ್ಕೆ ನಿನ್ನೆ ವಿದ್ಯುಕ್ತವಾದ ತೆರೆ ಬಿದ್ದಿದ್ದು, ಹೆಲಿಕ್ಯಾಪ್ಟರ್ ಸೇವೆ ಇಂದು ಸಂಜೆ ಅಂತ್ಯಗೊಳ್ಳಲಿದೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3750265
Today
Yesterday
This Week
Last Week
This Month
Last Month
All days
415
13442
102406
3588738
176492
189062
3750265
Your IP: 23.22.136.56
2017-12-17 00:37