Breaking News

ಉದ್ಯೋಗಕ್ಕೆ ಓಟು ಆಂದೋಲನ : ರಾಷ್ಟ್ರೀಯ ಸಂಚಾಲಕ ಚಂದ್ರ ಮಿಶ್ರ ಮೇಲೆ ಹಲ್ಲೆ

Written by 
Published: 11 January 2018
28 times Last modified on Thursday, 11 January 2018 10:42

ಕೆ.ಎನ್.ಪಿ.ವಾರ್ತೆ,ಮೈಸೂರು,ಜ.11;

ಉದ್ಯೋಗಕ್ಕೆ ಓಟು ಆಂದೋಲನ (ನೋ ಜಾಬ್ ನೋ ವೋಟ್) ಅಭಿಯಾನದ ರಾಷ್ಟೀಯ ಸಂಚಾಲಕರಾದ ಚಂದ್ರ ಮಿಶ್ರ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಇಂದು ಹಲ್ಲೆ ನಡೆಸಿದ್ದಾರೆ.

ನಗರದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದ ಬಳಿ ಈ ದಾಳಿ ನಡೆದಿದ್ದು, ಪಾಲಿಕೆ ಸದಸ್ಯ ಪ್ರಶಾಂತ್ ಗೌಡ ಹಾಗೂ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ. ಇಂದು ಬೆಳಿಗ್ಗೆ ಅಭಿಯಾನದ ಸದಸ್ಯರೊಂದಿಗೆ ಪ್ರಚಾರ ಕೈಗೊಂಡಾಗ ಸ್ಥಳಕ್ಕೆ ಧಾವಿಸಿದ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಿದ್ದು, ಚಂದ್ರ ಮಿಶ್ರ ಅವರ ಮೂಗು ಹಾಗೂ ಬಾಯಿಯಿಂದ ರಕ್ತ ಸುರಿಯುವಂತೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಲಕ್ಷ್ಮಿಪುರಂ ಠಾಣೆಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ವಿಧಾನಸಭೆ ಕ್ಷೇತ್ರದಲ್ಲಿ ಅಭಿಯಾನ ನಡೆಸಲು ಉದ್ದೇಶಿಸಿದ್ದರು. ಅಲ್ಲದೆ ರಾಜ್ಯದ ಹಲವೆಡೆ ಅಭಿಯಾನದ ಅಂಗವಾಗಿ, ಉದ್ಯೋಗ ನೀಡುವವರಿಗೆ ಮಾತ್ರ ಓಟು ನೀಡಲು ಮನವಿ ಮಾಡಲಾಗುತ್ತಿತ್ತು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250603
Today
Yesterday
This Week
Last Week
This Month
Last Month
All days
10010
16742
76331
4062809
281698
395132
4250603
Your IP: 54.234.190.237
2018-01-18 16:04