Breaking News

ಊಟ ಬಿಟ್ಟರೆ ತೂಕ ಇಳಿಸಿಕೊಳ್ಳಲಾಗದು

Written by 
Published: 20 December 2017
89 times Last modified on Wednesday, 20 December 2017 09:09

ಕೆ.ಎನ್.ಪಿ.ಜೀವನಶೈಲಿ

ಊಟ ಬಿಟ್ಟರೆ ತೂಕ ಇಳಿಸಿಕೊಳ್ಳಬಹುದು ಎಂಬುದು ನಿಮ್ಮ ತಪ್ಪು ಕಲ್ಪನೆ.

ಹೊಟ್ಟೆ ತುಂಬುವುದರ ಜೊತೆ ಬೊಜ್ಜು ಸೇರಿಕೊಳ್ಳದಂತೆ ಮತ್ತು ಬೊಜ್ಜನ್ನು ಕರಗುವಂತೆ ಮಾಡುವ ಕೆಲವು ತರಕಾರಿಗಳನ್ನು ಸೇವಿಸಿದರೆ ಆರೋಗ್ಯದೊಂದಿಗೆ ಅನೇಕ ಉಪಯೋಗಗಳನ್ನೂ ಪಡೆಯಬಹುದು. ಬೊಜ್ಜನ್ನು ನಿಯಂತ್ರಿಸುವ ಕೆಲವು ತರಕಾರಿಗಳನ್ನು ಇಲ್ಲಿ ನೀಡಲಾಗಿದೆ. 

ತೂಕ ಇಳಿಸುವ ಐದು ರೀತಿಯ ತರಕಾರಿಗಳು :

ಸೋರೆಕಾಯಿ: ಸೋರೆಕಾಯಿಯಲ್ಲಿ ಕಡಿಮೆ ಕ್ಯಾಲೊರಿ ಇರುವುದರಿಂದ ಈ ತರಕಾರಿಗೆ ಹೆಚ್ಚು ಪ್ರಾಮುಖ್ಯತೆಯಿದೆ. ಸೋರೆಕಾಯಿಯಲ್ಲಿ ಫೈಬರ್ ಮತ್ತು ನೀರಿನಂಶ ಹೆಚ್ಚಿದೆ. ಸೋರೆಕಾಯಿ ಜ್ಯೂಸನ್ನು ಬೆಳಗ್ಗಿನ ಜಾವ ಸೇವಿಸಿದರೆ ಹೆಚ್ಚು ಉಪಯೋಗ ಹೊಂದಬಹುದು. ಇದರಲ್ಲಿನ ಫೈಬರ್ ಅಂಶ ದೇಹದಲ್ಲಿ ಬೊಜ್ಜು ಉಳಿಯದಂತೆ ತಡೆಯುತ್ತದೆ.

ಬೂದುಗುಂಬಳಕಾಯಿ : ಬೂದುಗುಂಬಳಕಾಯಿ ತೂಕವನ್ನು ಬೇಗ ಇಳಿಸುತ್ತೆ. ಇದರಲ್ಲಿ ಅನೇಕ ರೀತಿಯ ಪೋಷಕಾಂಶ ಮತ್ತು ಔಷಧೀಯ ಗುಣಗಳೂ ಇದೆ. ಬೂದುಗುಂಬಳ ಬೀಜ ಮತ್ತು ತಿರುಳಿನಲ್ಲಿ ಆರೋಗ್ಯಕ್ಕೆ ಅನುವಾಗುವ ಅಂಶಗಳಿವೆ. ಬೂದುಗುಂಬಳಕಾಯಿಯನ್ನು ಸೇವಿಸುವುದರಿಂದ ಹೊಟ್ಟೆ ತುಂಬುವುದಷ್ಟೇ ಅಲ್ಲ, ದೇಹದಲ್ಲಿ ನೀರಿನಂಶ ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ.

ಸಿಹಿ ಕುಂಬಳಕಾಯಿ : ಸಿಹಿ ಕುಂಬಳಕಾಯಿಯದು ರುಚಿಯಲ್ಲೂ ಮೇಲುಗೈ. ಈ ಜ್ಯೂಸನ್ನು ಬೆಳಗ್ಗೆ ಹೊತ್ತು ಸೇವಿಸಿದರೆ ಹೆಚ್ಚು ಉಪಯೋಗ. ಸಿಹಿ ಕುಂಬಳಕಾಯಿ ಯಾವ ಕಾಲದಲ್ಲಿ ಬೇಕಾದರೂ ಸೇವಿಸಬಹುದು. ಇದರಿಂದ ತೂಕವನ್ನು ಬೇಗನೆ ಇಳಿಸಿಕೊಳ್ಳಬಹುದು. ಇದರಲ್ಲಿರುವ ಬೆಟಾ ಕೆರೊಟಿನ್ ದೇಹದಲ್ಲಿ ವಿಟಮಿನ್ ಆಗಿ ಪರಿವರ್ತನೆಗೊಳ್ಳುತ್ತದೆ. ಇದನ್ನು ಸಲಾಡ್ ಮಾಡಿ ತಿಂದರೆ ಹೊಟ್ಟೆ ಸಂಬಂಧಿ ಸಮಸ್ಯೆಗಳೂ ದೂರವಿರುತ್ತದೆ.

ಸೌತೆಕಾಯಿ : ಸೌತೆಕಾಯಿ ಕಡಿಮೆ ಕ್ಯಾಲೊರಿ ತರಕಾರಿ. ತುಂಬಾ ಸುಲಭವಾಗಿ ದೊರೆಯುವ ಈ ತರಕಾರಿಯಲ್ಲಿ ಶೇಕಡಾ 90 ರಷ್ಟು ನೀರಿನಂಶವಿದೆ. ಇದರ ಸೇವನೆಯಿಂದ ಆರೋಗ್ಯವೂ ಹಗುರವಾಗಿರುತ್ತದೆ. ಆದರೆ ಸೌತೆಕಾಯಿ ಸಿಪ್ಪೆಯನ್ನು ತೆಗೆಯದೆ ತಿಂದರೆ ಸಂಪೂರ್ಣ ಪೋಷಕಾಂಶ ನಿಮ್ಮದಾಗುತ್ತದೆ.

ಹಾಗಲಕಾಯಿ : ಹಾಗಲಕಾಯಿ ರುಚಿಯಲ್ಲಿ ಕಹಿ ಇದ್ದರೂ ಬೊಜ್ಜನ್ನು ಕರಗಿಸುವಲ್ಲಿ ತುಂಬಾ ಉಪಯೋಗಕ್ಕೆ ಬರುತ್ತದೆ. ಅಷ್ಟೇ ಅಲ್ಲ, ರಕ್ತದಲ್ಲಿನ ಸಕ್ಕರೆ ಅಂಶ ಮತ್ತು ಇನ್ಸುಲಿನ್ ಮಟ್ಟವನ್ನೂ ನಿಯಂತ್ರಿಸುತ್ತದೆ. ಡಯಟ್ ಪಿಲ್ಸ್ ಗಿಂತ ಹಾಗಲಕಾಯಿ ರಸವನ್ನು ಬೆಳಗ್ಗೆ ಹೊತ್ತು ಸೇವಿಸಿದರೆ ತುಂಬಾ ಒಳ್ಳೆಯದು. 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250611
Today
Yesterday
This Week
Last Week
This Month
Last Month
All days
10018
16742
76339
4062809
281706
395132
4250611
Your IP: 54.234.190.237
2018-01-18 16:05