Breaking News

ಅಂಧ ಕ್ರೀಡಾಪಟುಗಳ ರಾಜ್ಯಮಟ್ಟದ ಕ್ರೀಡಾಕೂಟ ಉದ್ಘಾಟನೆ

Written by 
Published: 05 October 2017
386 times Last modified on Friday, 06 October 2017 02:52ಅಂಧತ್ವ ಎಂದು ನನಗೆ ಸಮಸ್ಯೆ ಎನಿಸಿಲ್ಲ ಅದು ನನಗೆ ಸವಾಲೆನಿನಸಿದೆ - ಮಹಂತೇಶ್ ಜಿ.ಕೆ.

ಬಳ್ಳಾರಿ.ಅ.05. ಅಂಧರಿಗೆ ಕ್ರಿಕೆಟ್ ಏಕೆ? ನಾನು ಅಂಧನಾಗಿದ್ದು ಇಂದು ನಾನು ನಿಮ್ಮ ಮುಂದೆ ನಿಂತು ಮಾತನಾಡುವುದಕ್ಕೆ ಕ್ರಿಕೆಟ್ ಕಾರಣ ಕ್ರಿಕೆಟ್ ಮೂಲಕ ಅಂಧರಲ್ಲಿರುವ ಪ್ರತಿಭೆಯನ್ನು ಹೊರತರುವ ಪ್ರಯತ್ನ ಅಂಧರು ಕ್ರಿಕೆಟ್ ಆಡಬಲ್ಲರು ಎಂದು ಹೇಳಿದರು. ನಾನು ಒಬ್ಬಪುಟ್ಟಗ್ರಾಮದಲ್ಲಿ ಬೆಳೆದ ವ್ಯೆಕ್ತಿ ನನಗೆ ಅಂಧತ್ವ ಎಂದು ಸಮಸ್ಯೆ ಎನಿಸಿಲ್ಲ ಅದು ನನಗೆ ಸವಾಲೆನಿಸಿದೆ ಎಂದು ವಿಶ್ವದ ಅಂಧರ ಕ್ರಿಕೆಟ್ ಕೌಸಿಲ್ ಸಂಸ್ಥೆಯ ಅಧ್ಯಕ್ಷ ಜಿ.ಕೆ.ಮಹಂತೇಶ್ ಹೇಳಿದರು.

ಗುರುವಾರ ಬೆಳಿಗ್ಗೆ ವಿಮ್ಸ್ ಮೈಧಾನದಲ್ಲಿ ರಾಜ್ಯಮಟ್ಟದ ಅಂಧರ ಕ್ರಿಕೆಟ್ ಪಂಧ್ಯಾವಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು. 2010-11 ರಿಂದ ನಾನು ಅಂಧರ ಕ್ರಿಕೆಟ್‍ನ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿ ಕೊಂಡಾಗಿನಿಂದ ಇದುವರೆಗೂ ಎಂದು ಭಾರತ ಅಂಧರ ಕ್ರಿಕೆಟ್ ಪಂಧ್ಯಗಳಲ್ಲಿ ಸೋಲನ್ನು ಕಂಡೇ ಇಲ್ಲ ಎಂದು ನುಡಿದರು. 4 ಭಾರಿ ಅಂತರ ರಾಷ್ಟ್ರೀಯ ಪಂಧ್ಯಾವಳಿಯಲ್ಲಿ, 2012 ಮತ್ತು 14 ರಲ್ಲಿ ಪಾಕಿಸ್ತಾನದ ವಿರುದ್ದ ಭಾರತ ಜಯಗಳಿಸಿ ಓಡಿಐ ಚಾಂಪಿಯನ್‍ಶಿಪ್ ತಂದು ಕೋಟ್ಟಿದೆ. ಕೇಂದ್ರ ಸರ್ಕಾರದ  ಮಂತ್ರಿಗಳು ಇದನ್ನು ಶ್ಲಾಘಿಸಿ ಸನ್ಮಾನಿಸಿದರು. ಪ್ರಧಾನಮಂತ್ರಿಗಳು ನಮ್ಮನ್ನು  ಬೇಟಿಮಾಡಿ ಶುಭ ಕೊರಿದ್ದಾರೆ. ಇಂದು  ಬೇರೆ ಬೇರೆ ದೇಶದಲ್ಲಿ  ಅಂಧರು ತಮ್ಮ ಸ್ಥಾನ ಮಾನವನ್ನು ಈ ಕ್ರಿಕೆಟ್ ಆಟದಿಂದ ಗುರುತಿಸಿ ಕೊಂಡಿದ್ದರೆ ಎಂದು ತಿಳಿಸಿದರು.

ವಿವಿಧ ಜಿಲ್ಲೆಗಳಿಂದ ಬಂದ ಕ್ರೀಡಾಪಟುಗಳಿಗೆ ನೀವು ಶ್ರಧ್ದೆಯಿಂದ ಕ್ರಿಕೆಟ್‍ಆಡಿ ಇಲ್ಲರು ಮುಂದಿನ ಹಂತಕ್ಕೆ ಬೆಳೆಯಬೇಕು ಕೂನೆಯಸಾರಿ 2 ಕ್ರೀಡಾಪಟುಗಳು ಮಾತ್ರ ರಾಜ್ಯದಿಂದ ಅಂತರ ರಾಜ್ಯ ತಂಡಕ್ಕೆ ಸೇರ್ಪಡೆಯಾಗಿದ್ದರು ಈಭಾರಿ ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕದವರೇ ಆ ತಂಡದಲ್ಲಿ ಇರಬೇಕು ಎಂದರು.

ಅಂಧ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿ:- ರಾಜ್ಯ ಸರ್ಕಾರವು ಮುಂದೆ ಬಂದು ಕ್ರೀಡೆಯಲ್ಲಿ ಭಾಗವಹಿಸಿದ ಅಂಧ ಕ್ರೀಡಾಪಟುಗಳಿಗೆ ಸರ್ಕಾರಿ ಕಚೇರಿಗಳಲ್ಲಿ ನೌಕರಿಯನ್ನು ಕೊಡಬೇಕೆಂದು ಇದೇ ವೇಧಿಕೆಯ ಮೂಲಕ ಮನವಿ ಮಾಡಿದರು. ಮತ್ತು ಸದ್ಯದಲ್ಲೆ ಅಂಧರ ಸ್ಕೂಲ್ ಟೋರ್ನಮೆಂಟೆ ಮಾಡಲು ಇಚ್ಚಿಸಿದ್ದೇನೆ ಎಂದರು. ಪ್ರತಿ ಜಿಲ್ಲೆಯಿಂದಲು ಒಂದು ತಂಡವು ಭಾಗವಹಿಸಬೇಕು ಎಂದು ಹೇಳಿದರು.

ಕ್ರಿಕೆಟ್ ಮೂಲಕ ಎಲ್ಲಾ ಅಂಧರು ಸ್ವಾವಲಂಭಿಗಳಾಗಬೇಕು, ಸರ್ಕಾರದಿಂದ ಕೆಲಸಗಳನ್ನು ಕಡೆಯಬೇಕು, ಪೆನ್ಷನ್ ಹಣಡೆಯುವ ಆಲೋಚನೆ ಮಾಡದೆ. ಟ್ಯಾಕ್ಸ್‍ಪೇಯರ್(ತೆರಿಗೆಕಟ್ಟುವವರು) ಆಗಬೇಕು. ಹಾಗಿದ್ದರೆ ಸಮಾಜ ನಿಮಗೆ ಗೌರವವಾಗಿ ಕಾಣುತ್ತದೆ. ಎಂದು ಅಂಧರಲ್ಲಿರುವ ಆತ್ಮಬಲವನ್ನು ಬಡಿದೆಬ್ಬಿಸಿದರು.

ಈ ಕಾರ್ಯಕ್ರಮದ ಸಂಯೋಜಕರು ಮತ್ತು ಆಯೋಜಕರಾಗಿರುವಂತಹ ಬಳ್ಳಾರಿ ರೆಡ್ ಕ್ರಾಸ್ ಸಂಸ್ಥೆ, ಸಮರ್ತನಾ ಟ್ರಸ್ಟ್, ಇತರ ಸಂಘಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂಧರ್ಬದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆರ್.ಚೇತನ್, ಡಾ|| ಬಿಕೆ.ಎಸ್.ಮೂರ್ತಿ, ಡಾ|| ಪ್ರಬಂಜನ್, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಧರ್ಶಿ.ಎಂ.ಎ. ಶಕೀಭ್. ರೆಟ್ ಕ್ರಾಸ್ ಸಂಸ್ಥೆಯ ಖಾಜಾಂಜಿ ಪೋಲಾರಾಧಕೃಷ್ಣ, ರವಿಂಧ್ರ ಬೈಲಿಹಾಲ್. ಶ್ರೀಮತಿ ಸಾಧÀನಾಹಿರೇಮಠ್, ಡಾ||ಮಿತೇಶ್‍ಕಾಂತರೀಯ, ಅಧ್ಯಕ್ಷರು ಮತ್ತು ಸಂಯೋಜಕರು ಸಮಥರ್Àನಾಟ್ರಸ್ಟ್, ಮತ್ತು ವಿವಿಧ ಜಿಲ್ಲೆಗಳಿಮದ ಆಗಮಿಸಿದ ಅಂಧ ಕ್ರೀಡಾಪಟುಗಳ ತಂಡದವರು ಭಾಗವಹಿಸಿದ್ದರು.

 

ಫೋಟೋ.05.ಬಿಎಲ್.ಆರ್.02 ಜ್ಯೋತಿಬೆಳಗಿಸುವ ಮೂಲಕ ಅಂಧರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡುತ್ತಿರುವ ಚಿತ್ರ.

05-ಬಿಎಲ್.ಆರ್.02(1) ಕ್ರೀಡೆಯಲ್ಲಿ ಭಾಗವಹಿಸಲು ಆಗಮಿಸಿದ ವಿವಿಧ ಜಿಲ್ಲೆಗಳಿಂದ ಬಂದಿರುವ ಅಂಧ ಕ್ರೀಡಾಪಟುಗಳು.

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3750252
Today
Yesterday
This Week
Last Week
This Month
Last Month
All days
402
13442
102393
3588738
176479
189062
3750252
Your IP: 23.22.136.56
2017-12-17 00:37