Breaking News

35ಲಕ್ಷ ನಗದು ಅರ್ಧ ಕೇಜಿಗೂ ಹೆಚ್ಚು ಚಿನ್ನಾಭರಣ ಕಳುವು

Written by 
Published: 21 November 2017
35 times Last modified on Thursday, 14 December 2017 13:47

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ನ.21;

ವರದಿ : ಟಿ.ಗಣೇಶ್

35ಲಕ್ಷ ನಗದು ಅರ್ಧ ಕೇಜಿಗೂ ಹೆಚ್ಚು ಚಿನ್ನಾಭರಣ ಕಳುವಾಗಿರುವ ಘಟನೆ ಸಂಭವಿಸಿದೆ.

ಮನೆಯಲ್ಲಿ ಯಾರು ಇಲ್ಲದ ವೇಳೆ ಮೂವತ್ತೈದು‌ ಲಕ್ಷ ನಗದು, ಅರ್ಧ ಕೆಜಿಗೂ ಹೆಚ್ಚು ಚಿನ್ನಾಭರಣ ದೋಚಿ, ಕದೀಮರು  ಪರಾರಿಯಾದ ಘಟನೆ ಬಳ್ಳಾರಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ಬಳ್ಳಾರಿ ಪಟೇಲ್ ನಗರದ ಕೌಶೀಕ್ ಅಪಾರ್ಟಮೆಂಟ್ ನಿವಾಸಿಗಳಾದ ಚಿನ್ನದ ವ್ಯಾಪಾರಿ ಮತ್ತು ಗಾರ್ಮಿಂಟ್ ಉದ್ಯಮಿ ಕಾಂತಿಲಾಲ್ ಸಂಬಂಧಿಕರೊಬ್ವರ ಅನಾರೋಗ್ಯದ ಹಿನ್ನಲೆ ಬೆಂಗಳೂರು ಆಸ್ಪತ್ರೆಗೆ ತೆರಳಿದ್ದಾರೆ.

ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿದ ಕಳ್ಳರು ನಿನ್ನೆ ಮನೆಯಲ್ಲಿದ್ದ ನಗದು, ಬಂಗಾರ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.

ಮನೆ ಮಾಲೀಕ ಬೆಳಿಗ್ಗೆ ಬಂದು ನೋಡಿದಾಗ ಮನೆಬಾಗಿಲು ತೆರೆದಿದ್ದು, ಸಾಮಾಗ್ರಿಗಳೆಲ್ಲ  ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಗಮನಿಸಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಎಸ್.ಪಿ. ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಶೇಷ ಎಂದರೆ ಇದೊಂದು‌ ಬೃಹತ್ ಅಪಾರ್ಟ್ಮೆಂಟ್ ಆಗಿದ್ದು, ಕಳ್ಳತನ ಹೇಗೆ ನಡೆಯಿತು ಅನ್ನೋದು ಹಲವು ಅನುಮಾನಗಳಿಗೆ ಏಡೆಮಾಡಿಕೊಟ್ಟಿದೆ.

shivakumar h

There is will There is way 

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770740
Today
Yesterday
This Week
Last Week
This Month
Last Month
All days
5912
14978
20890
3647859
196967
189062
3770740
Your IP: 54.221.76.68
2017-12-18 08:45