Breaking News

3ದಿನಗಳ ಕಾಲ ಉಚಿತ ಯೋಗಚಿಕಿತ್ಸೆ ಮತ್ತು ಧ್ಯಾನ ಶಿಬಿರ

Written by 
Published: 07 January 2018
42 times Last modified on Sunday, 07 January 2018 16:59

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಜ.07;

ವರದಿ : ಟಿ.ಗಣೇಶ್

ಯೋಗ ಗುರು ರಾಮ್‍ದೇವ್‍ಜೀ ಅವರಿಂದ 3ದಿನಗಳ ಕಾಲ ಉಚಿತ ಯೋಗಚಿಕಿತ್ಸೆ ಮತ್ತು ಧ್ಯಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಫೆಬ್ರವರಿ 4,5,ಮತ್ತು 6ರಂದು ಬಳ್ಳಾರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 3ದಿನಗಳ ಕಾಲ  ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ 7:30 ರವರೆಗೆ ಈ ಶಿಬಿರ ನಡೆಯಲಿದೆ. ಯೋಗ ಗುರು ರಾಮ್‍ದೇವ್‍ಜೀ ಅವರಿಂದ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರವನ್ನು ನಡೆಸಿ ಕೊಡಲಾಗುತ್ತದೆ ಎಂದು ಪ್ರಭಾರಿ  ಕರ್ನಾಟಕ ರಾಜ್ಯದ ಉಸ್ತುವಾರಿ ಭವರ್‍ಲಾಲ್ ಆಚಾರ್ಯ ತಿಳಿಸಿದರು.

ಇಂದು ನಗರದ ಖಾಸಗಿ ಹೊಟೆಲ್‍ನಲ್ಲಿ ನಡೆಸಿದ ಸುಧ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತಂಜಲಿ ಯೋಗಸಮಿತಿ, ಮಹಿಳಾ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ್, ಯುವಭಾರತ, ಪತಂಜಲಿ ಕಿಸಾನ್ ಸೇವಾ ಸಮಿತಿಗಳ ಸಹಯೋಗದಲ್ಲಿ ಈ ಶಿಬಿರನ್ನು ಆಯೋಜಿಸಲಾಗಿದೆ ಎಂದರು. ಈ ಯೋಗಾಸನ ಶಿಬಿರವು ಫೆಭ್ರವರಿ 4ರಿಂದ ಪ್ರಾರಂಭವಾಗುತ್ತದೆ. 3ದಿನಗಳ ಕಾಲ ಉಚಿತ ಯೋಗಚಿಕಿತ್ಸೆ ಮತ್ತು ಧ್ಯಾನ ಶಿಬಿರವನ್ನು ರಾಮದೇವ್ ಗುರುಜೀ ಅವರಿಂದ ನೆರವೇರಿಸಲಾಗುವುದು.

ಮಹಿಳೆಯರಿಗಾಗಿ ವಿಶೇಷ ಯೋಗ:-

ಮಹಿಳೆಯರಿಗೆ, ಮಕ್ಕಳಿಗಾಗಿ ವಿಶೇಷ ಯೋಗವನ್ನು ಫೆ.5ರಂದು ಸಂಜೆ 4 ಗಂಟೆಗೆ ಹೇಳಿಕೊಡಲಾಗುತ್ತದೆ. ಈ ಯೋಗ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ,  ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಡಬೇಕೆಂದು ಕೋರಿದರು. ಮತ್ತು ಇದರ ಉಪಯೋಗವನ್ನು ಪಡೆದು ಆರೋಗ್ಯವಂತರಾಗಬೇಕು ಎಂದು ಮನವಿ ಮಾಡಿದರು.

ಫುಡ್ ಪಾರ್ಕ್ ನಿರ್ಮಾಣಕ್ಕೆ ಚಿಂತನೆ :-

ದಕ್ಷಿಣ ಭಾರತದಲ್ಲಿ ಫುಡ್ ಪಾರ್ಕ್ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಆ ಪುಡ್‍ಪಾರ್ಕ್ ಉತ್ತರ ಕರ್ನಾಟಕದ ಭಾಗದಲ್ಲಿ ಆಗಬೇಕು ಮತ್ತು ಅದು ಬಳ್ಳಾರಿ ಜಿಲ್ಲೆಯಲ್ಲಿಯೇ ಆಗಬೇಕು ಎಂದು ನನ್ನ ಆಸೆಯು ಇದೆ ಎಂದು ಭವರ್‍ಲಾಲ್ ಆಚಾರ್ಯ ಹೇಳಿದರು. ಈ ಪಾರ್ಕ್ ಸ್ಥಾಪನೆಗೆ ಈಗಾಗಲೆ ಸರ್ಕಾರದ ಮಟ್ಟದಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ 200 ಎಕರೆ ಪ್ರದೇಶದ ಸ್ಥಳವಕಾಶ ಬೇಕು, ಮತ್ತು ಇಲ್ಲಿ ನೀರು ,ಸಂಚಾರ ವ್ಯವಸ್ಥೆ, ವಿದ್ಯತ್ ವ್ಯವಸ್ಥೆಗಳನ್ನು ಹೊಂದಿರುವಂತದು ಪ್ರಮುಖವಾಗಿದೆ ಎಂದರು. ಈಗಾಗಲೆ ಈ ಪಾರ್ಕ್ ವಿಚಾರವಾಗಿ ಅನೇಕ ರಾಜಕೀಯ ಮುಖಂಡರನ್ನು ಹಾಗೂ ಉದ್ಯಮಿಗಳನ್ನು, ಎಪಿಎಂಸಿಯ ಮುಂಖಂಡರನ್ನು ಕರೆದು ಮಾತುಕತೆ ನಡೆಸಲಾಗಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಅನೇಕ ಮುಖಂಡರು, ಗುರುಗಳಾದ ಕಲ್ಯಾಣಸ್ವಾಮಿಗಳು, ಇಸ್ವಿ ಪಂಪಾಪತಿ, ಪಿ.ಎಂ.ನಟರಾಜ್, ಅಶೋಕ್ ದಿನ್ನಿ, ಸಂತೋಷ್‍ಮೇಹತ್, ಲಕ್ಷ್ಮೀರೆಡ್ಡಿ, ಜಿಲ್ಲಾ ಪ್ರಭಾರಿ, ಯುವ ಭಾರತ ಸಮಿತಿ, ಸುನಿತಾ ಹೊರಾವತ್, ತಿಪ್ಪಯ್ಯಶೆಟ್ಟಿ, ಚನ್ನ ಬಸವನಗೌಡ, ಇತರರು ಭಾಗವಹಿಸಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250536
Today
Yesterday
This Week
Last Week
This Month
Last Month
All days
9943
16742
76264
4062809
281631
395132
4250536
Your IP: 54.234.190.237
2018-01-18 16:01