Breaking News

6ನೇ ದಿನದ ಉಚಿತ ರಂಗ ತರಬೇತಿ ಶಿಬಿರ : ಮುಟ್ಟಿಸಿಕೊಂಡವನು ನಾಟಕ ತಾಲೀಮು ಮತ್ತು ರಂಗ ಪರಿಕರಗಳ ತಯಾರಿ

Written by 
Published: 25 November 2017
113 times Last modified on Saturday, 25 November 2017 14:37

ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.25;

ತಾಲೂಕಿನ ಕಸಾಪ ಭವನದಲ್ಲಿ "ಮುಟ್ಟಿಸಿಕೊಂಡವನು" ನಾಟಕ ತಾಲೀಮು ಮತ್ತು ರಂಗ ಪರಿಕರಗಳ ತಯಾರಿಯು ಇಂದು ನಡೆಯಿತು.

ದೀಪ ಸಮಾಜ ಸೇವಾ ಕೇಂದ್ರ ಮತ್ತು ಜನಪದ ರಂಗ ಶಾಲೆ ವತಿಯಿಂದ ಹಮ್ಮಿಕೊಳ್ಳಲಾದ 2ನೇ ಉಚಿತ ರಂಗ ತರಬೇತಿ ಶಿಬಿರದ 6ನೇ ದಿನವಾದ ಇಂದು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶಿಬಿರಾರ್ಥಿಗಳಿಗೆ ಪಿ.ಯು.ಸಿ ಪಠ್ಯವಾದ “ಮುಟ್ಟಿಸಿಕೊಂಡವನು” ನಾಟಕ ತಾಲೀಮು ನಡೆಸಲಾಯಿತು. "ಮುಟ್ಟಿಸಿಕೊಂಡವನು" ಇದೊಂದು ಪಿ.ಯು.ಸಿ ಪಠ್ಯವಾಗಿದ್ದು, ಸಾಹಿತಿಗಳಾದ ರಮೇಶ್ ಗಬ್ಬೂರ್ ಅದಕ್ಕೆ ನಾಟಕ ರೂಪ ನೀಡಿದ್ದಾರೆ.

ಅವರು ರೂಪಾಂತರಗೊಳಿಸಿದ ಆ ನಾಟಕವನ್ನು ತಾಲೀಮು ನಡೆಸಲಾಗುತ್ತಿದೆ. ನಾಟಕ ತಾಲೀಮು ವೇಳೆ ಶಿಬಿರಾರ್ಥಿಗಳು ಉತ್ಸಾಹದಿಂದ ಅಭಿನಯಿಸಿದ್ದು ಕಂಡುಬಂತು. ಇದರ ಜೊತೆಗೆ ನಿರ್ದೇಶಕರ ಮಾರ್ಗದರ್ಶನದ ಮೇರೆಗೆ ಶಿಬಿರಾರ್ಥಿಗಳು ನಾಟಕಕ್ಕೆ ಬೇಕಾಗುವ ಅಗತ್ಯ ರಂಗ ಪರಿಕರಗಳನ್ನು ಮತ್ತು ವಸ್ತ್ರ ವಿನ್ಯಾಸಗಳನ್ನು ಸಿದ್ದಪಡಿಸಿಕೊಂಡರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770752
Today
Yesterday
This Week
Last Week
This Month
Last Month
All days
5924
14978
20902
3647859
196979
189062
3770752
Your IP: 54.221.76.68
2017-12-18 08:46