Breaking News

ಅ.15ರಂದು ವಿವಿಸಂಘದ ಕಾರ್ಯಕಾರಿ ಸಮಿತಿಯ ಚುನಾವಣೆ - 2017

Written by 
Published: 08 October 2017
51 times Last modified on Sunday, 08 October 2017 15:54

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.08;

ವರದಿ : ಟಿ.ಗಣೇಶ್

ಬಳ್ಳಾರಿಯಲ್ಲಿ ವಿವಿಸಂಘದ ಕಾರ್ಯಕಾರಿ ಸಮಿತಿಯ ಚುನಾವಣೆಯು ಅಕ್ಬೋಬರ್ 15ರಂದು ನಡೆಯಲಿದೆ.

ಈ ಚುನಾವಣೆಯಲ್ಲಿ ಹಿರಿಯರ ತಂಡ ಜಯಗಳಿಸಲಿದೆ ಎಂದು ವಿವಿಸಂಘದ ಕಾರ್ಯದರ್ಶಿ ಉಡೇದ ಬಸವರಾಜ್ ತಿಳಿಸಿದರು. ಇಂದು ನಗರದ ಕಪಗಲ್ ರಸ್ತೆಯಲ್ಲಿ ಚುನಾವಣೆಯ ಪ್ರಯುಕ್ತ ಅಬ್ಬರದ ಪ್ರಚಾರದಲ್ಲಿ ತೊಡಗಿದ ಬಸರಾಜ್, ನಾವು ಈ ಹಿಂದೆ ಮಾಡಿರುವ ಸೇವೆಗಳನ್ನು ಮತ್ತು ಇನ್ನು ಮುಂದಿನ ದಿನಗಳಲ್ಲಿ  ಮಾಡಲಿರುವ ಸಂಘದದಲ್ಲಿನ ಕೆಲವು ದ್ಯೇಯೋದ್ದೇಶಗಳನ್ನು ಎಲ್ಲಾ ಸಂಘದ ಮತದಾರರಿಗೂ ತಿಳಿಸಿ ಹೇಳಲಾಗಿದೆ.

ಈ ಎಲ್ಲಾ ರೀತಿಯ ಸೇವೆಗಳನ್ನು ಸಂಘದ ಸದಸ್ಯರು ಮೆಚ್ಚಿರುವುದರಿಂದ ಹಾಗೂ ಅನುಭವಿ ಹಿರಿಯರು ಸಂಘದಲ್ಲಿ ಅನೇಕ ರೀತಿಯ ಸೇವೆ ಸಲ್ಲಿಸಿದ್ದನ್ನು ಮನಗಂಡ ಸಂಘದ ಮತದಾರರು ನಮಗೆ ಮತಚಲಾಯಿಸಿ ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡಲಿದ್ದಾರೆಂದು ಉಡೇದ ಬಸವರಾಜ್ ವಿಶ್ವಾಸದಿಂದ ತಿಳಿಸಿದರು.

ಈಗಾಗಲೆ ಚುನಾವಣಾ ಪ್ರಚಾರಕ್ಕೆಂದು ಮನೆಮನೆಗೆ ತೆರಳಿ ಸಂಘದ ಸದಸ್ಯರನ್ನು ಮತ ಕೋರಲಾಗಿದೆ. ಅವರಿಂದ ಒಳ್ಳೆಯ ಬೆಂಬಲವು ದೊರೆತಿದೆ ಎಂದು ತಿಳಿಸಿದರು. ಈಗಾಗಲೆ ನಮ್ಮ ಹಿರಿಯರ ತಂಡದಲ್ಲಿ 2 ತಂಡಗಳನ್ನಾಗಿ ಮಾಡಲಾಗಿದ್ದು ಒಂದು ತಂಡ ನಗರ ಪ್ರದೇಶದಲ್ಲಿ ಸ್ಪರ್ಧಿಸಲಿದೆ. ಅದರಲ್ಲಿ ಒಟ್ಟು 16 ಸದಸ್ಯರು ಚುನಾವಣೆಯಲ್ಲಿ ಸ್ಪರ್ದಿಸಿದ್ದಾರೆ. ಮತ್ತೊಂದು ತಂಡ ಗ್ರಾಮೀಣ ಭಾಗದಲ್ಲಿ ಸ್ಪರ್ಧಿಸಲಿದೆ ಆ ತಂಡದಲ್ಲಿ ಒಟ್ಟು 14 ಜನ ಸದಸ್ಯರು ಸ್ಪರ್ದಿಸಿದ್ದಾರೆಂದು ವಿವರಿಸಿದರು.

2017ರ ದ್ಯೇಯೋದ್ದೇಶಗಳು:- ಶಿಕ್ಷಣಕ್ಷೇತ್ರದ ಸುಧಾರಣೆಗಾಗಿ ಅಕ್ಯಾಡೆಮಿಕ್ ಕೌಸಿಲ್ ರಚನೆ, ಕೇಂದ್ರೀಕೃತ ಅಕೌಂಟಿಂಗ ವ್ಯವಸ್ಥೆಜಾರಿಗೆ ತರುವುದು, ಸಂಘದ ಆಡಳಿತ ನಿಯಮಾವಳಿ ಮತ್ತು ಆರ್ಥಿಕ ನಿಯಮಾವಳಿ ರೂಪಿಸುವುದು. ಡ್ರೀಮ್ಢ್ ವಿಶ್ವವಿದ್ಯಾಲಯದತ್ತ ನಮ್ಮಹೆಜ್ಜೆ,  ಈಗಿರುವ ಕಿಂಡರ್ ಗಾರ್ಟನ್ ಶಾಲೆಗಳನ್ನು ಪ್ರತಿ ತಾಲೂಕಿನಲ್ಲಿಯೂ ಸ್ಥಾಪಿಸುವ ಯೋಜನೆ ಹೊಂದಿದೆ. ಕುಂದುಕೊರತೆಗಳ ವಿಭಾಗ ರಚನೆ, ಮೆಡಿಕಲ್ ಕಾಲೇಜು ಸ್ಥಾಪನೆಗೆ ರೂಪುರೇಷೆ ರಚಿಸಿ ಮುನ್ನೆಡೆ. ಹೀಗೆ ಈಗಿನ ಉದ್ದೇಶಗಳನ್ನು ಚುನಾವಣೆಗೆ ಪ್ರಮುಖವಾಗಿ ಬೆಂಬಲಿಸಲು ಸಹಕಾರಿಯಾಗಲಿವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿವಿಸಂಘದ ಉಡೇದ ಬಸವರಾಜ್, ಟಿ.ಕೊಟ್ರಪ್ಪ, ನಿವೃತ್ತ ಉಪನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿಕ ಇಲಾಖೆ, ಹಾಗೂ ಇತರ ಅನೇಕ ಸದಸ್ಯರು, ಸ್ಪರ್ಧಿಗಳು ಭಾಗವಹಿಸಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3750219
Today
Yesterday
This Week
Last Week
This Month
Last Month
All days
369
13442
102360
3588738
176446
189062
3750219
Your IP: 23.22.136.56
2017-12-17 00:35