Breaking News

ಅ.6ರಿಂದ ಅಂತರ್ ಕಾಲೇಜು ಯುವಜನೋತ್ಸವ

Written by 
Published: 05 October 2017
51 times Last modified on Thursday, 05 October 2017 16:31

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.05;

ವರದಿ : ಟಿ.ಗಣೇಶ್

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಎಲ್ಲಾ ಮಹಾವಿದ್ಯಾಲಯಗಳ, ಶಿಕ್ಷಣ ಮಹಾ ವಿದ್ಯಾಲಯಗಳ, ಮತ್ತು ಸ್ನಾತಕೋತ್ತರ ಕೇಂದ್ರಗಳ ವಿದ್ಯಾರ್ಥಿಗಳಿಗಾಗಿ ಅಕ್ಟೋಬರ್ 6 ಮತ್ತು 7ರಂದು ಅಂತರ್ ಕಾಲೇಜು ಯುವಜನೋತ್ಸವ ನಡೆಯಲಿದೆ.

ಇದರಲ್ಲಿ ಸುಮಾರು 40 ಕಾಲೇಜುಗಳಿಂದ ಒಟ್ಟು 600ಕ್ಕಿಂತ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟು 27 ವಿವಿಧ ಸ್ಪರ್ದೆಗಳು ನಡೆಯಲಿದ್ದು, ಈ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದ 40 ಜನ ವಿದ್ಯಾರ್ಥಿಗಳ ತಂಡ ಇದೇ ಡಿಸೆಂಬರ್ ತಿಂಗಳಲ್ಲಿ ನಡೆಯುವ ದಕ್ಷಿಣ ವಲಯ ಯುವಜನೋತ್ಸವ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. 

ನಾಳೆ ನಡೆಯುವ  ಉದ್ಘಾಟನಾ ಸಮಾರಂಭವನ್ನು ನಾಡಿನ ಖ್ಯಾತ ಹಾಸ್ಯ ಲೇಖಕ ಮತ್ತು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಉದ್ಘಾಟನೆ ಮಾಡಲಿದ್ದಾರೆ ಎಂದು ಮಾನ್ಯ ಕುಲಪತಿಗಳ ಪರವಾಗಿ ಕುಲಸಚಿವರಾದ ಪ್ರೊ ಎಸ್.ಎ.ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3750274
Today
Yesterday
This Week
Last Week
This Month
Last Month
All days
424
13442
102415
3588738
176501
189062
3750274
Your IP: 23.22.136.56
2017-12-17 00:38