Breaking News

ಅ.7ರಂದು ರೈತ ಪ್ರಶಸ್ತಿ ಪ್ರಧಾನ ಸಮಾರಂಭ

Written by 
Published: 03 October 2017
48 times Last modified on Tuesday, 03 October 2017 17:42

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಅ.03;

ಅ.7ಕ್ಕೆ ಸಮಗ್ರ ಕೃಷಿ ಪದ್ದತಿ ರೈತ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಎ. ಮಂಜು ಉದ್ಘಾಟಿಸಲಿದ್ದಾರೆ.

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಅಲುಮ್ನಿ ಅಸೋಸಿಯೇಷನ್, ಡಾ.ಜಿ.ಕೆ.ವೀರೇಶ ದತ್ತಿನಿಧಿ ಅಂಗವಾಗಿ ಸಮಗ್ರ ಕೃಷಿ ಪದ್ದತಿ ರೈತ ಪ್ರಶಸ್ತಿ ಸಮಾರಂಭವನ್ನು ಏರ್ಪಡಿಸಲಾಗಿದೆ. ಬೆಳಿಗ್ಗೆ 10:30ಕ್ಕೆ ಸಮಾರಂಭ ಪ್ರಾರಂಭವಾಗಲಿದೆ. 

ಈ ಸಮಾರಂಭಕ್ಕೆ ಲೋಕಸಭಾ ಸದಸ್ಯರುಗಳಾದ ಎಸ್.ಪಿ.ಮುದ್ದಹನುಮೇಗೌಡ, ಆರ್. ದೃವನಾರಾಯಣ, ಬೆಂಗಳೂರು ಕೃಷಿ ವಿವಿಯ ಕುಲಪತಿಗಳಾದ ಡಾ.ಎಚ್.ಶಿವಣ್ಣ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಹೆಚ್.ಪಿ.ಮೋಹನ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕೃಷಿ ವಿವಿಯ ವಿಶ್ರಾಂತ ಕುಲಪತಿಗಳಾದ ಡಾ.ಜಿ.ಕೆ.ವೀರೇಶ ರವರು ದತ್ತಿ ನಿಧಿ ಸ್ಥಾಪಕರ ನುಡಿಗಳನ್ನಾಡಲಿದ್ದಾರೆ. ಅಲುಮ್ನಿ‌ ಅಸೋಸಿಯೇಷನ್ ಅಧ್ಯಕ್ಷರಾದ ಡಾ.ಕೆ.ನಾರಾಯಣಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರಶಸ್ತಿಗೆ ಭಾಜನರಾದ ರೈತರು :

ಹೆಚ್.ಸದಾನಂದ -ಬೆಂಗಳೂರು

ರಾಮಕೃಷ್ಣ ಶವಟ್ಟಿ -ರಾಯಚೂರು

ದುರ್ಗಪ್ಪ ಅಂಗಡಿ -ಶಿವಮೊಗ್ಗ

ಶಬರೀಶ ಸುವರ್ಣ -  ಉಡುಪಿ

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3750289
Today
Yesterday
This Week
Last Week
This Month
Last Month
All days
439
13442
102430
3588738
176516
189062
3750289
Your IP: 23.22.136.56
2017-12-17 00:38