Breaking News

ಅ.2 ರಿಂದ ಪ್ರಾಂತೀಯ ಜ್ಞಾನ-ವಿಜ್ಞಾನಮೇಳ-2017

Written by 
Published: 28 September 2017
44 times Last modified on Thursday, 28 September 2017 16:44

ವರದಿ : ಟಿ.ಗಣೇಶ್

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಸೆ.28;

ಇಂದು ಬೆಳಿಗ್ಗೆ ಭಾಲಭಾರತಿ ಸಮೂಹ ಸಂಸ್ಥೆಯ ವತಿಯಿಂದ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾಭಾರತಿಯ ರಾಜ್ಯಕಾರ್ಯದರ್ಶಿಗಳಾದ ವಸಂತ ಮಾದವ, ಯುವ ವಿಜ್ಞಾನಿಗಳ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳಿಂದ ಅವಲೋಕನ, ಅನ್ವೇಷಣಾ, ಮತ್ತು ಸಂಶ್ಲೇಷಣಾ ಪ್ರವೃತ್ತಿಯನ್ನು ಬೆಳೆಸುವುದು ಈ ಜ್ಞಾನ ವಿಜ್ಞಾನಮೇಳದ ಉದ್ದೇಶವಾಗಿದೆ ಎಂದು ತಿಳಿಸಿದರು.

ಮಕ್ಕಳಲ್ಲಿ ಜ್ಞಾನ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಮೂಡಿಸುವುದು. ವಿಜ್ಞಾನ ಕ್ಷೇತ್ರದಲ್ಲಿ ಪ್ರಾಚೀನ ಮತ್ತು ಇತ್ತೀಚಿನ ಅಧುನಿಕ ವೈಜ್ಞಾನಿಕ ಬೆಳವಣಿಗೆ ಹಾಗೂ ಸಾಧನೆಗಳ ಪರಿಚಯ ಮಾಡಿಸುವುದು. ವಿಜ್ಞಾನ ಕ್ಷೇತ್ರದಲ್ಲಿ ಕ್ರಿಯಾಶೀಲ ಅಧ್ಯಾಯನ, ಅವಲೋಕನ, ಅನ್ವೇಷಣಾ ಮತ್ತು ಸಂಶ್ಲೇಷಣಾ ಪ್ರವೃತ್ತಿಯನ್ನು ಬೆಳೆಸುವುದು.

ಜ್ಞಾನ ವಿಜ್ಞಾನಮೇಳದಲ್ಲಿ 10 ಪ್ರಕಾರದ ಸ್ಪರ್ಧೆಗಳಿರುತ್ತವೆ. ವಿಜ್ಞಾನ ಪ್ರದರ್ಶನ, ವಿಜ್ಞಾನ ರಸಪ್ರಶ್ನೆ, ವಿಜ್ಞಾನ ಪ್ರಬಂಧವಾಚಕ, ವಿಜ್ಞಾನಪ್ರಯೋಗಗಳು, ವೇಧಗಣಿತ ರಸಪ್ರಶ್ನೆ, ವೈಧಿಕಗಣಿತ ಪತ್ರವಾಚನ, ಗಣಿತಚಾರ್ಟ್ ಪ್ರದರ್ಶನ, ಸಂಸ್ಕೃತಿಕ ಜ್ಞಾನರಸಪ್ರಶ್ನೆ, ಸರಸ್ವತಿಜ್ಞಾನ ಪ್ರಬಂಧವಾಚಕ, ಕಂಪ್ಯೂಟರ್‍ ಪ್ರದರ್ಶನ ಮತ್ತು ರಸಪ್ರಶ್ನೆ

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇದರಲ್ಲಿ ವರ್ಗೀಕರಣ ಮಾಡಲಾಗಿದೆ. ಶಿಶುವರ್ಗ:- 4ನೇತರಗತಿಯಿಂದ 5ನೇ ತರಗತಿಯ ವಿದ್ಯಾರ್ಥಿಗಳು, ಬಾಲವರ್ಗ:- 6, 7,ಮತ್ತು 8ನೇ ತರಗತಿ ವಿದ್ಯಾರ್ಥಿಗಳು, ಕಿಶೋರ್ ವರ್ಗ:- 9ಮತ್ತು 10ನೇ ತರಗತಿ ವಿದ್ಯಾರ್ಥಿಗಳು, ತರುಣವರ್ಗ:- ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುತ್ತಾರೆ. ಜಿಲ್ಲೆ ಮತ್ತು ರಾಜ್ಯ ಕ್ಷೇತ್ರ ಹಾಗೂ ಅಖಿಲ ಭಾರತ ಮಟ್ಟದ ವಿವಿಧ ಹಂತಗಳಲ್ಲಿ ಈ ಸ್ಪರ್ಧೆಗಳು ನಡೆಯುತ್ತವೆ.

ಈ ಎಲ್ಲಾ ಸ್ಪರ್ಧೆಗಳಲ್ಲಿ ರಾಜ್ಯಾಧ್ಯಂತ 10ಸಾವಿರಕ್ಕಿಂತ ಹೆಚ್ಚು ಮಕ್ಕಳು ಪ್ರತ್ಯಾಕ್ಷಿಕವಾಗಿ ಭಾಗವಹಿಸುತ್ತಾರೆ. ಅಕ್ಟೋಬರ್ 2,3,ಮತ್ತು 4ರಂದು ಬಾಲಭಾರತಿ ಕೇಂದ್ರೀಯ ವಿದ್ಯಾಲಯದಲ್ಲಿ ನಡೆಯಲಿದೆ. ರಾಜ್ಯದ 20 ಜಿಲ್ಲೆಗಳಿಂದ 600ಕ್ಕೂ ಹೆಚ್ಚು ಸ್ಪರ್ಧಾಳುಗಳು 3ದಿನಗಳು ನಡೆಯುವ ಈ ಸ್ಪರ್ಧೆಯಲ್ಲಿ ಭಾಗವಹಿಸುವರು ಎಂದು ವಿವರಿಸಿದರು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಉಪಪರಿಯೋಜನ ನಿರ್ದೇಶಕರು, ಇಸ್ರೋ ಉಪಗ್ರಹಕೇಂದ್ರ ಬೆಂಗಳೂರಿನ ಶ್ರೀಮತಿ ಫರಾನ್ಹ ತಬಸ್ಸಮ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆ ರಾಜ್ಯಕಾರ್ಯದರ್ಶಿಗಳು ವಿಧ್ಯಾಭಾರತಿಯ ವಸಂತ ಮಾದವ ವಹಿಸಲಿದ್ದಾರೆ. ಮತ್ತು ಸಮಾರೋಪ ಸಮಾರಂಭವನ್ನು ಬಿಹೆಚ್,ಎಂ,ದಾರುಕೇಶ ಉಪಪ್ರದಾನರು ಥಿನ್ಫಲ್ಮ್ಸ್ ವಿಭಾಗ,ಇಸ್ರೋ ಉಪಗ್ರಹ ಕೇಂದ್ರ ಬೆಂಗಳೂರು. ಮತ್ತು ಅಧ್ಯಕ್ಷತೆ ಪ್ರಾಂತೀಯ ವಿಜ್ಞಾನಪ್ರಮುಖ,ವಿದ್ಯಾಭಾರತಿ ಇವರ ಅಧ್ಯಕ್ಷತೆಯಲ್ಲಿ ಸಮಾರೋಪಗೊಳ್ಳಲಿದೆ ಎಂದು ಮಾದವ ತಿಳಿಸಿದರು. ಈ ಸಂದರ್ಭದಲ್ಲಿ ಸಿ.ಎ.ಬಾಗ್ರೇಚ ಅಖಿಲ ಭಾರತೀಯ ಕಾರ್ಯಕಾರಣಿ ಸದಸ್ಯರು, ನರೇಶ್ ಚಿರಾನಿಯ, ಪಲ್ಲವಿ, ಸೈಜೂ, ಸತೀಶ್ ಹಿರೇಮಠ್, ರೂಪಶ್ರೀ,ಇತರರು ಭಾಗವಹಿಸಿದ್ದರು.

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3273921
Today
Yesterday
This Week
Last Week
This Month
Last Month
All days
2442
6468
22764
3222209
98411
263209
3273921
Your IP: 54.158.55.5
2017-10-18 09:08