Breaking News

ಆನಗೋಡಿನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ

Written by 
Published: 04 January 2018
66 times Last modified on Thursday, 04 January 2018 05:58

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಜ.04;

ವರದಿ : ಬಸವರಾಜ್ ಪೂಜಾರ್

ಆನಗೋಡಿನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ನಡೆಯಿತು.

ದಾವಣಗೆರೆ ತಾಲ್ಲೂಕ್ ಆನಗೋಡಿನಲ್ಲಿ, ಮಾಯಕೊಂಡ ವಿಧಾನಸಭಾ ಕ್ಷೇತ್ರದ ಎಲ್ಲಾ ಕಾರ್ಯಕರ್ತರು ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಮ್ಮುಖದಲ್ಲಿ ಪರಿವರ್ತನಾ ಯಾತ್ರೆ ನಡೆಯಿತು. ಹಲವಾರು ಜನ ಟಿಕೆಟ್ ಆಕಾಂಕ್ಷಿಗಳೆಲ್ಲರೂ ಒಟ್ಟುಗೂಡಿ ಪರಿವರ್ತನಾ ಯಾತ್ರೆಯ ಮಾಡಿದ್ದು ವಿಶೇಷವಾಗಿತ್ತು. 

ಈ ಪರಿವರ್ತನಾ ಯಾತ್ರೆಯು ಮಾಜಿ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪನವರ ನೇತೃತ್ವದಲ್ಲಿ ಅನಗೋಡಿಗೆ ಆಗಮಿಸಿತು. ಯಡಿಯೂರಪ್ಪನವರನ್ನು, ಬಿಜೆಪಿಯ ಎಲ್ಲ ಕಾರ್ಯಕರ್ತರು ವಿವಿಧ ವಾದ್ಯಗಳೊಂದಿಗೆ, ಮೆರವಣಿಗೆ ಹಾಗೂ ಮಹಿಳೆಯರ ಕುಂಭಮೇಳದೊಂದಿಗೆ  ಅದ್ದೂರಿಯಾಗಿ ವೇದಿಕೆಗೆ ಕರೆತಂದರು. 

ಅಲ್ಲದೆ ಸುತ್ತಮುತ್ತಲಿನ ಊರಿನ ಕಾರ್ಯಕರ್ತರು ಬೈಕ್ ಗಳ ಮೂಲಕ ಯಾತ್ರೆಗೆ ಆಗಮಿಸಿದರು. ಈ ವೇಳೆ ನೆರದಿದ್ದ ಮುಖಂಡರು, ಕಾರ್ಯಕರ್ತರು ತಮ್ಮ ತಮ್ಮ ಆಕಾಂಕ್ಷಿಗಳಿಗೆ ಟಿಕೆಟ್ ಬೇಕು ಎಂದು ರಾಜ್ಯಾಧ್ಯಕ್ಷರಾದ ಯಡಿಯೂರಪ್ಪನವರನ್ನು ಕೇಳಿದಾಗ, ಇದಕ್ಕೆ ಉತ್ತರಿಸಿದ ಅವರು, ಮುಂದಿನ ದಿನಗಳಲ್ಲಿ ಅಮಿತ್ ಶಾ ಹಾಗೂ ನಾವು ಒಂದು ಸಮೀಕ್ಷೆ ಮಾಡಿ, ಗೆಲ್ಲುವ ಅಬ್ಯರ್ಥಿಗೆ  ಟಿಕೆಟ್ ನೀಡುತ್ತೇವೆ. ಎಲ್ಲರೂ ಅವರನ್ನು ಬೆoಬಲಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಸಚಿವರಾದ ಎಸ್.ರವೀಂದ್ರನಾಥ್, ಸಂಸದರಾದ ಜಿಎಂ ಸಿದ್ದೇಶ್, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಬಸವರಾಜನಾಯ್ಕ, ಆನಂದಪ್ಪ,  ನಾಗರತ್ನ ನಾಯಕ,  ಹನುಮಂತನಾಯಕ್,  ಪ್ರೊಫೆಸರ್ ಲಿಂಗಪ್ಪ ಉಪಸ್ಥಿತರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4274328
Today
Yesterday
This Week
Last Week
This Month
Last Month
All days
763
15484
100056
4062809
305423
395132
4274328
Your IP: 54.167.126.106
2018-01-20 01:14