Breaking News

ಅಧಿಕಾರಿಗಳ ಉದ್ಧಟತನ : ನಡವಿ ನಾಗರಾಜ್ ಆರೋಪ

Written by 
Published: 21 November 2017
44 times Last modified on Tuesday, 21 November 2017 16:33
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು.

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ನ.21;

ವರದಿ : ಟಿ.ಗಣೇಶ

ಮಹಾನಗರ ಪಾಲಿಕೆ ಅಧಿಕಾರಿಗಳು ದಡ್ಡತನವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ನಡವಿ ನಾಗರಾಜ್ ಆರೋಪ.

ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಒಳಚರಂಡಿ ವ್ಯವಸ್ಥ ಸರಿಪಡಿಸಲು 27ನೇ ವಾರ್ಡನ ಸಾರ್ವಜನಿಕರು ಮನವಿ ಮಾಡಿದಾಗ ಅಧಿಕಾರಿಗಳು ಸಮಂಜಸವಲ್ಲದ ಉತ್ತರಗಳನ್ನು ನೀಡುತ್ತಿದ್ದಾರೆ. ಮತ್ತು ತಾತ್ಕಾಲಿಕವಾಗಿ ಬೇಕಾಬಿಟ್ಟಿ ಕೆಲಸಗಳನ್ನು ಮಾಡಿ, ಒಳಚರಂಡಿಯಲ್ಲಿ ನೀರು ಹರಿಯದಂತಾಗಿ ದುರ್ವಾಸನೆ ಹರಡುತ್ತಿದೆ. ಈ ಬಗ್ಗೆ ವಾರ್ಡಿನ ನಿವಾಸಿಗಳು ಸಮಸ್ಯೆ ಬಗ್ಗೆ ಪಾಲಿಕೆ ಅಧಿಕಾರಿ ಮಹಮ್ಮದ್ ಹಾಜಿ ಎಂಬುವರಲ್ಲಿ ಮಾತನಾಡಿದರೆ ಅಸಡ್ಡೆಯಿಂದ ಉತ್ತರಿಸುತ್ತಾರೆ ಎಂದು ಆಮ್ ಆದ್ಮಿ ಪಾರ್ಟಿಯ ನಗರ ಸಂಚಾಲಕ ನಡವಿ ನಾಗರಾಜ್ ಆರೋಪಿಸಿದರು.

ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾಗರಾಜ್ ಅಧಿಕಾರಿಗಳ ನಿರ್ಲಕ್ಷ ಧೋರಣೆಯನ್ನು ವಿವರಿಸುತ್ತಾ, 27ನೇ ವಾರ್ಡನಲ್ಲಿ ತಗ್ಗು ಪ್ರದೇಶದಿಂದ ಎತ್ತರ ಪ್ರದೇಶಕ್ಕೆ ಹರಿಯುವಂತೆ ಒಳಚರಂಡಿಯ ಚೆಂಬರ್‍ಗಳನ್ನು ನಿರ್ಮಿಸಿದ್ದಾರೆ. ಇದರಿಂದ ಒಂದೇ ಒಂದು ಹನಿ ನೀರು ಹರಿದುಹೋಗುತ್ತಿಲ್ಲ. ಇದನ್ನು ಪಾಲಿಕೆಯ ಅಧಿಕಾರಿಗಳಾದ ಮಹಮ್ಮದ್ ಹಾಜಿ ಸ್ಥಳಪರಿಶೀಲನೆಗೆ ಬಂದಾಗ ಕೇಳಿದರೆ. ನೀವು ಕೆಲಸ ಮಾಡುವವರೆಗೆ ಸುಮ್ಮನಿದ್ದು ಈಗ ನಮ್ಮನ್ನು ಪ್ರಶ್ನಿಸಲು ನಾಚಿಕೆಯಾಗುವುದಿಲ್ಲವೇ ಎಂದು ದರ್ಪದಿಂದ ಮಾತನಾಡುತ್ತಾರೆ ಎಂದರು.


ನಂತರ ಪಾಲಿಕೆಯ ಜೆ.ಇ. ರಾಜೇಂದ್ರ ಸ್ಥಳಪರಿಶೀಲನೆ ಮಾಡಿ ಕೊನೆಯ ಚೇಂಬರ್ ‍ಗೆ ಟ್ಯೂಬನ್ನು ಕೊರೆದು 4” ಇಂಚಿನ ಪೈಪ್ ಅಳವಡಿಸಿ ಅದನ್ನು ರಾಜಕಾಲುವೆಗೆ ಕೊಟ್ಟಿರುತ್ತಾರೆ. ಆದರು ನೀರು ಹರಿಯುವುದಿಲ್ಲ. ಮಲಮೂತ್ರಗಳು ತೆರೆದ ಚರಂಡಿಗೆ ಸೇರಬಾರದೆಂದು, ರೋಗರುಜಿನೆಗಳು ಜಾಸ್ತಿಯಾಗುತ್ತದೆಂದು ಒಳಚರಂಡಿ ವ್ಯವಸ್ಥೆ ಮಾಡಿರುತ್ತಾರೆ. ಆದರೆ ಪಾಲಿಕೆಯ ಇಂಜಿನಿಯರ್‍ಗಳೇ ಒಳಚರಂಡಿಯಿಂದ ತೆರೆದ ಕಾಲುವೆಗೆ ಸಂಪರ್ಕ ಕೊಡುತ್ತಿದ್ದಾರೆ. ಇದು ಪಾಲಿಕೆಯ ದಡ್ದತನದ ಪ್ರದರ್ಶನ ಎಂದರು. ಈ ಸಂಧರ್ಭದಲ್ಲಿ ಆಮ್ ಆದ್ಮಿ ಪಾರ್ಟಿಯ ಸಾಗರ್, ಇನಾಯತ್, ಜಕ್ರಿಯ, ಪಂಪಾಪತಿ ಇತರರು ಭಾಗವಹಿಸಿದ್ದರು.

 

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770825
Today
Yesterday
This Week
Last Week
This Month
Last Month
All days
5997
14978
20975
3647859
197052
189062
3770825
Your IP: 54.221.76.68
2017-12-18 08:52