Breaking News

ಅಣಜಿಗೆರೆಯಲ್ಲಿ ನೀರಿಗಾಗಿ ಪರದಾಟ

Written by 
Published: 08 January 2018
208 times Last modified on Monday, 08 January 2018 14:11

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಜ.08;

ವರದಿ : ಬಸವರಾಜ್ ಪೂಜಾರ್

# ಅಣಜಿಗೆರೆ ಗ್ರಾಮದಲ್ಲಿ ನೀರಿಗಾಗಿ ಆಹಾಕಾರ.

# ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ. 

# ಬೀದಿಗಳ ತುಂಬಾ ಖಾಲಿ ಕೊಡ.!

ಅಣಜಿಗೆರೆಯ ಬೀದಿಗಳ ತುಂಬ ಇಂದು ಬರೀ ಖಾಲಿ ಕೊಡಗಳದ್ದೇ ಸುದ್ದಿ. ಯಾವ ಬೀದಿಗೋದರು ಖಾಲಿ ಕೊಡಗಳು ಬರಮಾಡಿಕೊಂಡವು. ಅರೆ ಇದೇನಿದು ಕೊಡಗಳ ಸುದ್ದಿ ಅನ್ಕೊಂಡ್ರಾ? ಹೌದು ಇದು ಕೊಡಗಳ ಸುದ್ದಿ. ಅಣಜಿಗೆರೆಯಲ್ಲಿಂದು ಗ್ರಾಮಸ್ಥರು ಕುಡಿಯುವ ನೀರಿಗಾಗಿ ಖಾಲಿ ಕೊಡಗಳನ್ನಿಡಿದು ಬೀದಿಗಿಳಿದಿದ್ದಾರೆ. 

ಹರಪನಹಳ್ಳಿ ತಾಲೂಕಿನ ಅಣಜಿಗೆರೆ ಗ್ರಾಮದ ಗ್ರಾಮಸ್ಥರು ಬಹಳ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಅಲ್ಲಿನ ಗ್ರಾಮ ಪಂಚಾಯಿತಿ ಮಾತ್ರ ನೀರಿನ ಸಮಸ್ಯೆಯನ್ನು ಬಗೆಹರಿಸದೆ ಇದ್ದ ಕಾರಣ ಇಂದು ಅಣಜಿಗೆರೆ ಗ್ರಾಮಸ್ಥರು ಖಾಲಿ ಕೊಡಗಳನ್ನು ಹಿಡಿದು ಬೀದಿಗಿಳಿದು ನೀರಿನ ಸಮಸ್ಯೆ ಪರಿಹಾರಕ್ಕಾಗಿ ಪ್ರತಿಭಟಿಸಿದರು. 

ಬೆಳ್ಳಂಬೆಳಗ್ಗೆ ಅಣಜಿಗೆರೆ ಗ್ರಾಮಸ್ಥರು ಏಕಾಏಕಿ ಖಾಲಿ ಕೊಡಗಳನ್ನು ಪಂಚಾಯಿತಿ ಮುಂದಿಟ್ಟು ಧರಣಿ ಪ್ರಾರಂಭಿಸಿದರು. ಅಲ್ಲದೇ ಗ್ರಾಮದ ಎಲ್ಲಾ ಬೀದಿಗಳಲ್ಲಿ ಸಾಲುಸಾಲು ಖಾಲಿ ಕೊಡಗಳನ್ನಿಟ್ಟು ನೀರಿನ ಅಭಾವದಿಂದಾಗಿ ಗ್ರಾಮಸ್ಥರ ಪರದಾಟವನ್ನು ಅಲ್ಲಿನ ಜನಪ್ರತಿನಿಧಿಗಳಿಗೆ ತಿಳಿಯುವಂತೆ ಪ್ರತಿಭಟಿಸಿದರು. 

ಇದು ಮೊದಲೇನಲ್ಲ. ಈ ಮುಂಚೆ ಗ್ರಾಮಸ್ಥರು ಅನೇಕ ಬಾರಿ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ನೀರಿನ ಸಮಸ್ಯೆ ಬಗ್ಗೆ ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ವಿಷಯದಲ್ಲಿ ಕೇವಲ ಭರವಸೆಯ ಮಾತುಗಳನ್ನಾಡಿದರೆ ಹೊರತು ಸಮಸ್ಯೆ ಪರಿಹಾರಕ್ಕೆ ಮುಂದಾಗಲಿಲ್ಲ. ಜನರ ಮೂಲಭೂತ ಸೌಕರ್ಯಗಳ ವಿಚಾರದಲ್ಲಿ ಇವರು ತೋರುವ  ತಾತ್ಸಾರ ಮನೋಭಾವ ಖಂಡನೀಯ ಎಂದು ಪ್ರತಿಭಟನಾ ನಿರತ ಗ್ರಾಮಸ್ಥರು ಆರೋಪಿಸಿದರು. 

ಈ ಹಿಂದೆಯು ಕೂಡ ಗ್ರಾಮಸ್ಥರು ನೀರಿಗಾಗಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿ ತಿಂಗಳುಗಳು ಕಳೆದರು, ಇಲ್ಲಿಯ ಆಡಳಿತ ವ್ಯವಸ್ಥೆಯು ಬರಿ ಭರವಸೆಗೆ ಸೀಮಿತವಾಗಿದೆ ಹೊರತು ಸಮಸ್ಯೆಗೆ ಪರಿಹಾರವನ್ನು ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ  ಎಂದು ಆಕ್ರೋಶ ವ್ಯಕ್ತಪಡಿಸಿದರು.      

ಗ್ರಾಮಸ್ಥರ ಪ್ರತಿಭಟನೆಗೆ ಸ್ಪಂದಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾತನಾಡಿ, ಗ್ರಾಮ ಪಂಚಾಯಿತಿಯ ವಿವಿಧ ಅನುದಾನಗಳಲ್ಲಿ ಹನ್ನೊಂದು ಬೋರ್ವೆಲ್ಗಳನ್ನು ಕೊರೆಸಿದ್ದರೂ ನೀರು ಬರದಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಅಲ್ಲದೇ ಟ್ಯಾಂಕರ್ ನಿಂದ ನೀರು ತರಿಸಲು ಆಗುತ್ತಿಲ್ಲ. ಅದಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಪರವಾನಿಗೆ ತೆಗೆದುಕೊಳ್ಳಬೇಕು. ಸದ್ಯ ಟ್ಯಾಂಕರ್ ನಿಂದ ನೀರು ತರಿಸುವ ವ್ಯವಸ್ಥೆ ಮಾಡಲಾಗುವುದು. ಮತ್ತು ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅವರ ನಿರ್ದೇಶನದಂತೆ ಕ್ರಮಕೈಗೊಳ್ಳಲಾಗುವುದು ಎಂದು ಪ್ರತಿಭಟನಾ ನಿರತರ ಮನವೊಲಿಸಿದರು. 

ಈ ವೇಳೆ ವಿವಿಧ ಸಂಘಟನೆಗಳ ಮುಖಂಡರಾದ ಗುಡಿಹಳ್ಳಿ ಹಲ್ಲೇಶ, ಸಂತೋಷ, ಅಂಜಿನಪ್ಪ, ಕೊಲ್ಲಪ್ಪ, ವಿದ್ಯಾರ್ಥಿ ಮುಖಂಡರಾದ ನವೀನ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು. 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250563
Today
Yesterday
This Week
Last Week
This Month
Last Month
All days
9970
16742
76291
4062809
281658
395132
4250563
Your IP: 54.234.190.237
2018-01-18 16:02