Breaking News

ಅನಾಮಧೇಯ ವ್ಯಕ್ತಿ ಆತ್ಮಹತ್ಯೆಗೆ ಶರಣು

Written by 
Published: 05 December 2017
50 times Last modified on Tuesday, 05 December 2017 10:08

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಡಿ.05;

ವರದಿ : ಬಸವರಾಜ್ ಪೂಜಾರ್

ಅನಾಮಧೇಯ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಚ್ಚಂಗಿದುರ್ಗದಲ್ಲಿ ನಡೆದಿದೆ.

ಹರಪ್ಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ ದೇವಿಯ ದರ್ಶನ ಪಡೆದು, ನಂತರ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನಿನ್ನೆ ಸಂಭವಿಸಿದೆ. ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. 

ಉಚ್ಚoಗಿದುರ್ಗವು ಧಾರ್ಮಿಕ ಪ್ರಸಿದ್ದ ಕ್ಷೇತ್ರವಾಗಿದ್ದು, ಇಲ್ಲಿಗೆ ಲಕ್ಷಾಂತರ ಜನ ಭಕ್ತರು ಬರುತ್ತಾರೆ. ಅಂತೆಯೇ ಇವರು ಸಹ ಬೇರೆ ಯಾವುದೋ ಊರಿನಿಂದ ಬಂದು, ದೇವಿಯ ದರ್ಶನ ಪಡೆದು, ಬಳಿಕ ಉಚ್ಚoಗಿದುರ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಅರಸಿಕೆರೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತು ಎಲ್ಲ ಪೊಲೀಸ್ ಠಾಣೆಗಳಿಗೆ ಮತ್ತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಮೃತ ವ್ಯಕ್ತಿ ಬಳಿ ಯಾವುದೇ ಗುರುತಿನ ಚೀಟಿ ಸಿಕ್ಕಿಲ್ಲ. ಇವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬಂಧುಗಳು ಯಾರಾದರೂ ಇದ್ದರೆ ಅರಸೀಕೆರೆ ಪೊಲೀಸ್ ಠಾಣೆಗೆ ಸoಪರ್ಕಿಸಬೇಕಾಗಿ ಪ್ರಕಟಣೆಯಲ್ಲಿ ಕೋರಲಾಗಿದೆ. ಇದುವರೆಗೂ ಸತ್ತ ವ್ಯಕ್ತಿಯ ಕಡೆಯವರು ಯಾರು ಬರದ ಕಾರಣ ಮೃತದೇಹವನ್ನು ದಾವಣಗೆರೆ ಜಿಲ್ಲೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770815
Today
Yesterday
This Week
Last Week
This Month
Last Month
All days
5987
14978
20965
3647859
197042
189062
3770815
Your IP: 54.221.76.68
2017-12-18 08:52