Breaking News

ಆನಂದ.ಡಿ.ಕೆ.ಚೊಚ್ಚಲ ನಿರ್ದೇಶನದ 'ರಾಂಗ್‍ಟರ್ನ್' ಕನ್ನಡ ಚಲನಚಿತ್ರದ ಚಿತ್ರೀಕರಣ

Written by 
Published: 12 December 2017
442 times Last modified on Tuesday, 12 December 2017 11:26

ಕೆ.ಎನ್.ಪಿ.ವಾರ್ತೆ,ಹೂವಿನಹಡಗಲಿ,ಡಿ.12;

ವರದಿ:  ಕೋಗಳಿ ಶೇಖರ್

ನಿನ್ನೆ ಸಂಜೆ ಹೂವಿನಹಡಗಲಿ ತಾಲೂಕಿನ ಮದಲಗಟ್ಟಿ ಅರಣ್ಯ ಪ್ರದೇಶದಲ್ಲಿ 'ರಾಂಗ್‍ಟರ್ನ್' ಕನ್ನಡ ಚಲನಚಿತ್ರದ ಚಿತ್ರೀಕರಣ ನಡೆಯಿತು.

ಚಿತ್ರೀಕರಣದ ವೇಳೆ ಮಾತನಾಡಿದ ಚಿತ್ರದ ನಿರ್ದೇಶಕರಾದ ಆನಂದ.ಡಿ.ಕೆ, ಈ ಚಿತ್ರವು ಆರು ಜನ ಸ್ನೇಹಿತರ ನಡುವೆ ನಡೆಯುವಂತ ಯೂತ್ ಓರೆಂಟೆಡ್ ಸಸ್ಪೆಂನ್ಸ್ ತ್ರಿಲ್ಲರ್ ಸ್ಟೋರಿ ಇದಾಗಿದೆ. ಸುಭಾಷಿಣಿ ಹರಿಕೃಷ್ಣ ಬೆಂಗಳೂರು ಇವರು ಚಿತ್ರದ ನಿರ್ಮಾಪಕರಾಗಿದ್ದಾರೆ. 

ಈ ಚಿತ್ರದ ಛಾಯಾಗ್ರಾಹಕರಾದ (ಕ್ಯಾಮರಮ್ಯಾನ್) ಗೌರಿ ವೆಂಕಟೇಶ, ಅಧ್ಬುತವಾದ ಕ್ಯಾಮರಮ್ಯಾನ್ ಆಗಿದ್ದು, 25-30 ವರ್ಷದ ಅನುಭವ ಹೊಂದಿದ್ದಾರೆ. ಜೊತೆಗೆ ಇತ್ತೀಚೆಗೆ ತೆರೆಕಂಡ 'ನುಗ್ಗೇಕಾಯಿ' ಚಿತ್ರದ ಸಂಗೀತ ನಿರ್ದೇಶಕರಾದ ಸುರೇಶಚಂದುರವರು ಈ ಚಿತ್ರದ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

ಒಟ್ಟಾರೆ ಈ ಚಿತ್ರವು ಕಾಲೇಜು ಗೆಳೆಯರ ಸ್ಟೋರಿ ಆಗಿದ್ದು, ಈ ಚಿತ್ರ ನೋಡಿದ ಮೇಲೆ ಇದರ ಸಾರಾಂಶ ನಿಮಗೆ ತಿಳಿಯಲಿದೆ. ಮೊದಲೆ ಹೇಳುವುದು ಬೇಡ ಎಂದರು. ಈ ಚಿತ್ರದಲ್ಲಿ ಹೊಸಬರಿಗೆ ಅವಕಾಶ ಮಾಡಿ ಕೊಡಲಾಗಿದೆ. ಈ ಚಿತ್ರ ಸಮಾಜಕ್ಕೆ , ಪ್ರೇಕ್ಷಕರಿಗೆ ಒಳ್ಳೆಯ ಸಂದೇಶವನ್ನು ಸಾರಲಿಕ್ಕೆ ಸಹಕಾರಿಯಾಗಲಿದೆ ಎಂದರು.

ಮುಖ್ಯವಾಗಿ, ಈ ಚಿತ್ರದಲ್ಲಿ ಉದಯ್ ನಾಯಕನಟರಾಗಿ ನಟಿಸಲಿದ್ದಾರೆ. ಜೊತೆಗೆ ರವಿ, ಹಾಗೂ ವಿಲಾಸ್ ಅಕ್ಷತ್ ಹಾಗೂ ನಾಯಕಿಯರಾಗಿ ಶಾಕುಂತಲ, ಸಂಧ್ಯಾ ಮತ್ತು ಖುಷಿ ನಟಿಸಲಿದ್ದಾರೆ. ಇನ್ನೂ ಮೂರು ದಿನಗಳ ಕಾಲ ಮದಲಗಟ್ಟಿ, ಹಗರಿಬೊಮ್ಮನಹಳ್ಳಿ ಹಾಗೂ ಹಂಪಿಯಲ್ಲಿ ಚಿತ್ರದ ಹಾಡುಗಳ ಚಿತ್ರೀಕರಣ  ನಡೆಯಲಿದೆ. ಈಗಾಗಲೇ ಶೇಕಡಾ 30ರಷ್ಟು ಚಿತ್ರೀಕರಣ ಆಗಿದೆ. ಇನ್ನೂ ಚಿತ್ರಕ್ಕೆ ಬೇಕಾದ ಬೇರೆ ಬೇರೆ ಲೋಕೇಷನ್ ನಲ್ಲಿ ಚಿತ್ರೀಕರಣ ಮಾಡಬೇಕಾಗಿದೆ ಎಂದು ಹೇಳಿದರು.

ನಿರ್ದೇಶಕ ಆನಂದ.ಡಿ.ಕೆ ಪರಿಚಯ : 

'ರಾಂಗ್ ಟರ್ನ್' ಚಿತ್ರದ ನಿರ್ದೇಶಕರಾದ ಆನಂದ.ಡಿ.ಕೆ ಅವರು ಮೂಲತಃ ಹಗರಿಬೊಮ್ಮನಹಳ್ಳಿಯವರಾಗಿದ್ದು, ಈ ಚಿತ್ರ ಅವರ ಮೊದಲ ನಿರ್ದೇಶನವಾಗಿದೆ. ಆನಂದ.ಡಿ.ಕೆ ರವರು ಹಲವಾರು ಷಾರ್ಟ್‍ಫಿಲ್ಮ ಹಾಗೂ ಡಾಕುಮೆಂಟ್ರಿ ಫಿಲ್ಮ್ ಗಳನ್ನು ಮಾಡಿದ್ದಾರೆ.

ಹಾಗೂ ಲಂಬಾಣಿ ಎಂಬ ಡಾಕುಮೆಂಟ್ರಿ ಫಿಲೀಮ್ ಗಿನ್ನಿಸ್ ವರ್ಡ್‍ ದಾಖಲೆಗೆ ಆಯ್ಕೆಯಾಗಿದೆ. ಅಂತೆಯೇ ಸ್ಯಾಂಟ್‍ಫ್ಯಾನ್ಸಿಸ್ ಆವಾರ್ಡ್ ಕ್ಯಾರ್ಲಿಫೋನಿಯದಿಂದ ಲಂಬಾಣಿ ಎಂಬ ಡಾಕುಮೆಂಟ್ರಿ ಫಿಲೀಮ್‍ಗೆ ಹಾಲಿವುಡ್ ಅವಾರ್ಡ್ ಸಹ ಲಭಿಸಿದೆ. ಈ ಅವಾರ್ಡ್ ನಿಂದ  ಕರ್ನಾಟಕದ ಮೊದಲ ನಿರ್ದೇಶಕ ಅಂತ ಕೆಲವು ಪತ್ರಿಕೆಯಲ್ಲಿ ಪರಿಚಯಿಸಿಕೊಂಡಿದ್ದಾರೆ.

ರಾಘವೇಂದ್ರ ಮಹಿಮೆ, ಅರುಂಧತಿ, ಹಾಗೂ ವಸುಂಧರ ಹೀಗೆ ಹಲವು ಧಾರಾವಾಹಿಗಳಲ್ಲಿಯೂ ಸಹ ಇವರು ನಟಿಸಿದ್ದಾರೆ. ಇಂತಹ ಯುವ ನಿರ್ದೇಶಕ ಹಗರಿಬೊಮ್ಮನಹಳ್ಳಿಯ ಆನಂದ ಡಿ.ಕೆ.ಯವರ ನಿರ್ದೇಶನ, ಕಥೆ ಮತ್ತು ಇವರದೇ ಸಂಭಾಷಣೆಯಲ್ಲಿ ಮೂಡಿಬರುತ್ತಿರುವ ರಾಂಗ್‍ಟರ್ನ್ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

ಒಟ್ಟಾರೆ ಹಗರಿಬೊಮ್ಮನಹಳ್ಳಿಯ ಯುವ ತರುಣ ಹಾಗೂ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಇದು ತಾಲೂಕಿನ ಜನತೆಗೆ ಸಂತಸ ತಂದಿದೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250484
Today
Yesterday
This Week
Last Week
This Month
Last Month
All days
9891
16742
76212
4062809
281579
395132
4250484
Your IP: 54.234.190.237
2018-01-18 15:57