Breaking News

ಅನಾಥೆಯ ಬಾಳಲ್ಲಿ ಬೆಳಕಾದ ಯುವಕ

Written by 
Published: 01 December 2017
33 times Last modified on Friday, 01 December 2017 12:13

ಕೆ.ಎನ್.ಪಿ.ವಾರ್ತೆ,ಕಲಬುರಗಿ,ಡಿ.02;

ಅನಾತೆಯೊಂದಿಗೆ ಸಪ್ತಪದಿ ತುಳಿಯುವ ಮೂಲಕ ಯುವತಿಯ ಬಾಳಲ್ಲಿ ಬೆಳಕಾದ ಯುವಕ.

ಸಾಮಾನ್ಯವಾಗಿ ಪರಸ್ಪರ ಒಪ್ಪಿಗೆ ಸೂಚಿಸುವ ಮೂಲಕ ಹಿಂದು-ಮುಸ್ಲಿಂ ಮದುವೆಗಳು ನಡೆಯೋದು ಅಪರೂಪ. ಆದ್ರೆ, ಇಲ್ಲಿನ ರಾಜ್ಯ ಮಹಿಳಾ ನಿಲಯದಲ್ಲಿ ಹಿಂದು ಯುವಕ, ಮುಸ್ಲಿಂ ಯುವತಿ ಪರಸ್ಪರ ಒಪ್ಪಿಕೊಂಡು ಮದುವೆ ಆಗಿರೋದು ವಿಶೇಷವಾಗಿದೆ. ಮದುವೆಗೆ ಜಿಲ್ಲಾಧಿಕಾರಿ ಆರ್ ವೆಂಕಟೇಶಕಯಮಾರ್ ಸೇರಿದಂತೆ ಅನೇಕರು ಆಗಮಿಸಿ ವಧು-ವರರಿಗೆ ಆಶೀರ್ವದಿಸಿದ್ರು. ಅಂತಹ ಅಪರೂಪದ ಮದುವೆಗೆ ಕಲಬುರಗಿಯ ರಾಜ್ಯ ಮಹಿಳಾ ನಿಲಯ ಅಪರೂಪದ ಮದುವೆಯೊಂದಕ್ಕೆ ಸಾಕ್ಷಿಯಾಯ್ತು. 

 

ಅವ್ಳು ಅನಾಥೆ. ಚಿಕ್ಕ ವಯಸ್ಸಿನಲ್ಲಿಯೇ ತನ್ನವರನ್ನು ಕಳೆದುಕೊಂಡು ಹಲವು ವರ್ಷಗಳಿಂದ ರಾಜ್ಯ ಮಹಿಳಾ ನಿಲಯದಲ್ಲಿ ವಾಸವಾಗಿದ್ದಳು. ಆಕೆಗೆ ಈಗ ಮದುವೆ ವಯಸ್ಸು ಆಗಿರೋದ್ರಿಂದ ಮದುವೆಯ ಸುಯೋಗ ಕುಡಿ ಬಂದಿದ್ದು ಆ ಅನಾಥೆಯ ಬಾಳಲ್ಲಿಗ ಹೊಸ ಬೆಳಕು ಮೂಡಿದೆ. ಯುವಕನೊಬ್ಬ ಆಕೆಯನ್ನು ಮದುವೆ ಆಗುವ ಮೂಲಕ ಬಾಳು ನೀಡಿದ್ದಾನೆ. ಅವ್ರಿಬ್ಬರ ಮದುವೆ ಜಿಲ್ಲಾಧಿಕಾರಿ ಸೇರಿದಂತೆ ಅನೇಕರು ಪಾಲ್ಗೊಂಡು ಆಶೀರ್ವದಿಸಿದ್ರು.

 

ಅನಾಥೆಯ ಬಾಳಲ್ಲಿ ಹೊಸ ಬೆಳಕು....ಅನಾಥೆಯೊಂದಿಗೆ ಸಪ್ತಪದಿ ತುಳಿದ ಯುವಕ....ಮದುವೆಗೆ ಸಾಕ್ಷಿಯಾದ ಕುಟುಂಬಸ್ಥರು ಹಾಗೂ ಹಿರಿಯ ಅಧಿಕಾರಿಗಳು..ಹೌದು, ಹೀಗೊಂದು ಸಂತಸದ ಕ್ಷಣ ಕಂಡು ಬಂದಿರೋದು ಕಲಬುರಗಿಯ ರಾಜ್ಯ ಮಹಿಳಾ ನಿಲಯದಲ್ಲಿ. ಹೀಗೆ, ಅನಾಥ ಯುವತಿಗೆ ಬಾಳು ನೀಡಿರೋ ಯುವಕನ ಹೆಸರು ರಾಮಚಂದ್ರ ಕುಲಕರ್ಣಿ. ಬಿಎಸ್ ಸಿ ಪದವೀಧರನಾಗಿರುವ ರಾಮಚಂದ್ರ ಕಲಬುರಗಿಯ ಬ್ರಹ್ಮಪೂರ ಕಾಲೋನಿ ನಿವಾಸಿಯಾಗಿದ್ದು ಮೆಡಿಕಲ್ ರಿಪ್ರಜೆಂಟಿವ್ ಆಗಿ ಕೆಲಸ ಮಾಡ್ತಿದ್ದಾರೆ. ಅನಾಥೆಯನ್ನೆ ಮದುವೆ ಆಗ್ಬೇಕು ಎಂದು ಕನಸ್ಸು ಕಟ್ಟಿಕೊಂಡಿದ್ದ ರಾಮಚಂದ್ರ ತಂದೆ-ತಾಯಿಯೊಂದಿಗೆ ರಾಜ್ಯ ಮಹಿಳಾ ನಿಲಯಕ್ಕೆ ಆಗಮಿಸಿ ಮುಸ್ಲಿಂ ಯುವತಿಯನ್ನು ನೋಡಿ ಮೆಚ್ಚಿ ಮದುವೆ ಆಗುತ್ತಿದ್ದಾರೆ. ಕಲಬುರಗಿಯ ರಾಜ್ಯ ಮಹಿಳಾ ನಿಲಯದಲ್ಲಿ ವಾಸವಾಗಿರುವ ಅನಾಥೆ ಯಾಸ್ಮಿನ್ ಳೊಂದಿಗೆ ಇಂದು ಮದುವೆ ಆಗಿ ಆಕೆಯ ಬಾಳಲ್ಲಿ ಬೆಳಕು ನೀಡಿದ್ದಾನೆ. ಈಗ ಯಾಸ್ಮಿನ್ ಳೊಂದಿಗೆ ಹಿರಿಯರ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಹಿಂದು ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾನೆ.

ರಾಮಚಂದ್ರ ಕುಲಕರ್ಣಿ ಅನಾಥೆಗೆ ಬಾಳು ಕೊಟ್ಟಾತ :

ಯಾಸ್ಮಿನ್, ಚಿಕ್ಕವಳಿರುವಾಗಲೇ ಪೋಷಕರನ್ನು ಕಳೆದುಕೊಂಡಿದ್ದಳು, ಹೀಗಾಗಿ, ಆಕೆ ಕಳೆದ ಇಪ್ಪತ್ತು ವರ್ಷಗಳಿಂದ ಕಲಬುರಗಿಯ ರಾಜ್ಯ ಮಹಿಳಾ ನಿಲಯದಲ್ಲಿಯೇ ವಾಸವಾಗಿದ್ಳು. ಈಗ ಆಕೆಗೆ ಮದುವೆ ವಯಸ್ಸು ಆಗಿರೋದ್ರಿಂದ ರಾಮಚಂದ್ರ, ಮದುವೆ ಆಗಲು ಮುಂದೇ ಬಂದಿರೋದ್ರಿಂದ ಅವರ ಮನೆಯವರನ್ನು ಒಪ್ಪಿಸಿ, ರಾಜ್ಯ ಮಹಿಳಾ ನಿಲಯದ ಅಧಿಕಾರಿಗಳ ಪರವಾನಗಿಯನ್ನು ಪಡೆದು ಇಬ್ಬರು ಪರಸ್ಪರ ಒಪ್ಪಿಗೆ ಸೂಚಿಸಿದ ನಂತರ ಇಂದು ಅಧಿಕಾರಿಗಳು ಹಾಗೂ ಹಿರಿಯರು ಸಮ್ಮುಖದಲ್ಲಿ ಹಿಂದು ಸಂಪ್ರದಾಯದಂತೆ ಮದುವೆ ಕೈಂಕಾರ್ಯಗಳನ್ನು ನೆರವೇರಿಸಲಾಯಿತು. ಇನ್ನು ಯಾಸ್ಮಿನ್ ಮತ್ತು ರಾಮಚಂದ್ರನ ಮದುವೆಗೆ ಜಿಲ್ಲಾಧಿಕಾರಿ ವೆಂಕಟೇಶಕುಮಾರ್ ಆಗಮಿಸಿ ವಧು-ವರರಿಗೆ ಆಶೀರ್ವಾದದ ಜೊತೆಗೆ ಉಡುಗೋರೆಯನ್ನು ನೀಡಿ ಹಾರೈಸಿದ್ರು. ಈಗ ಮದುವೆ ಆಗಿರುವ ಯುವ ಜೋಡಿಗಳಿಗೆ ಸರಕಾರ ಯೋಜನೆ ಅಡಿಯಲ್ಲಿ ಸೌಲಭ್ಯದ ಜೊತೆಗೆ ಅವರಿಗೆ ಉದ್ಯೋಗ  ಕಲ್ಪಿಸಲಾಗುವುದು ಎಂದು ಹೇಳಿದ್ರು.

ಶಿಲ್ಪಾ ಹಿರೇಮಠ, ರಾಜ್ಯ ಮಹಿಳಾ ನಿಲಯದ ನಿರ್ದೇಶಕಿ ಮಾತನಾಡಿ, ಒಟ್ಟಾರೆಯಾಗಿ ಅನಾಥೆಯ ಬಾಳಲ್ಲಿ ಬೆಳಕು ನೀಡಿದ ರಾಮಚಂದ್ರ ಕುಲಕರ್ಣಿ ಬದುಕು ಸದಾ ಬೆಳಗಲಿ ಎನ್ನೋದೇ ನಮ್ಮ ಆಶಯವಾಗಿದೆ ಎಂದರು. ಈ ವೇಳೆ ಆರ್ ವೆಂಕಟೇಶಕುಮಾರ್, ಜಿಲ್ಲಾಧಿಕಾರಿ ಉಪಪಸ್ಥಿತರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770784
Today
Yesterday
This Week
Last Week
This Month
Last Month
All days
5956
14978
20934
3647859
197011
189062
3770784
Your IP: 54.221.76.68
2017-12-18 08:49