Breaking News

ಅಂದ ಕ್ರೀಡಾಪಟುಗಳಿಂದ ರಾಜ್ಯ ಮಟ್ಟದ ಕ್ರಿಕೇಟ್ ಪಂದ್ಯಾವಳಿ

Written by 
Published: 03 October 2017
23 times Last modified on Tuesday, 03 October 2017 16:48

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.03;                       

ವರದಿ : ಟಿ.ಗಣೇಶ್

ಅಕ್ಟೋಬರ್ 5ರಿಂದ ಬಳ್ಳಾರಿಯಲ್ಲಿ ಪ್ರಥಮ ಬಾರಿಗೆ ಅಂಧರಿಗಾಗಿ ರಾಜ್ಯ ಮಟ್ಟದ ಕ್ರಿಕೇಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಸಮರ್ಥನಂ ಸಂಸ್ಥೆಯ ಅಧ್ಯಕ್ಷರು ತಿಳಿಸಿದರು.

ಇಂದು ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಪ್ರಥಮ ಬಾರಿಗೆ ಸಮರ್ಥನಂ ಅಂಗವಿಕಲರ ಸಂಸ್ಥೆ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಅಂಧರಿಗಾಗಿ ರಾಜ್ಯ ಮಟ್ಟದ ಕ್ರಿಕೇಟ್ ಪಂದ್ಯಾವಳಿಯನ್ನು ಇದೆ ಅಕ್ಟೋಬರ್ 5, 6, ಮತ್ತು 7ರವರೆಗೆ  ನಗರದಲ್ಲಿ ಏರ್ಪಡಿಸಲಾಗಿದೆ ಎಂದರು.

ಈ ಕ್ರಿಕೇಟ್ ಸ್ಪರ್ಧೆಗಳು ನಗರದ ವಿಮ್ಸ್ ಮೈದಾನದಲ್ಲಿ ಜರುಗಲಿವೆ. ಪಂದ್ಯದ ಉದ್ಘಾಟನೆಯು ಬೆಳಿಗ್ಗೆ 9ಗಂಟೆಗೆ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳ 12 ಅಂಧರ ಕ್ರಿಕೇಟ್ ತಂಡಗಳು  ಸ್ಥಳೀಯರಿಗೆ ವಿಶೇಷ ಅನುಭವವನ್ನು ನೀಡಲಿದೆ.

ಈ ಸ್ಪರ್ಧೆಗಾಗಿ ಆಯೋಜಕರು ಪೂರ್ವಭಾವಿ ತಯಾರಿ ನಡೆಸುತ್ತಿದ್ದು, ಕ್ರೀಡಾಕೂಟಕ್ಕೆ 10 ಲಕ್ಷ ಖರ್ಚಾಗುವ ಅಂದಾಜು ಮಾಡಲಾಗಿದೆ. ಈ ಕ್ರೀಡಾಸ್ಪರ್ಧೆಗಳನ್ನು ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ವೀಕ್ಷಿಸುವ ಮೂಲಕ ಕ್ರೀಡಾಪಟುಗಳನ್ನು ಉತ್ತೇಜಿಸಬೇಕಾಗಿ ಸಂಸ್ಥೆ ವಿನಂತಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಕಿವುಡಸಣ್ಣವರ ಫೌಂಡರ್ ಮ್ಯಾನೇಜೌಂಗ್ ಟ್ರಸ್ಟೀಯಾದ ಮಹಾಂತೇಶ ಜಿ, ಸಮರ್ಥನಂ ಅಂಗವಿಕಲರ ಸಂಸ್ಥೆ ಅಧ್ಯಕ್ಷರು, ಕ್ರಿಕೇಟ್ ಅಸೊಸಿಯೇಷನ್ ಫಾರ್ ದಿ ಬ್ಲೌಂಡ್ ಡಾ. ಮಿಥೆಶ್ ಕಟಾರಿಯಾ ಅಧ್ಯಕ್ಷರು, ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಂಯೋಜಕ ಮತ್ತು ಇತರರು ಭಾಗವಹಿಸಿದ್ದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ರಾಜೇಂದ್ರ: 9480812138
 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3273986
Today
Yesterday
This Week
Last Week
This Month
Last Month
All days
2507
6468
22829
3222209
98476
263209
3273986
Your IP: 54.158.55.5
2017-10-18 09:15