Breaking News

ಅಂಧತ್ವ ಎಂದು ನನಗೆ ಸಮಸ್ಯೆ ಎನಿಸಿಲ್ಲ ಅದು ನನಗೆ ಸವಾಲೆನಿಸಿದೆ : ಮಹಂತೇಶ್ ಜಿ.ಕೆ.

Written by 
Published: 06 October 2017
45 times Last modified on Friday, 06 October 2017 03:00

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.05;

ವರದಿ : ಟಿ.ಗಣೇಶ್

ಅಂಧರಿಗೆ ಕ್ರಿಕೇಟ್ ಏಕೆ? ನಾನು ಅಂಧನಾಗಿದ್ದು, ಇಂದು ನಾನು ನಿಮ್ಮ ಮುಂದೆ ನಿಂತು ಮಾತನಾಡುವುದಕ್ಕೆ, ಕ್ರಿಕೇಟ್ ಕಾರಣ. ಕ್ರಿಕೇಟ್ ಮೂಲಕ ಅಂಧರಲ್ಲಿರುವ ಪ್ರತಿಭೆಯನ್ನು ಹೊರತರುವ ಪ್ರಯತ್ನ. ಅಂಧರು ಕ್ರಿಕೇಟ್ ಆಡಬಲ್ಲರು ಎಂದು ಹೇಳಿದರು. ನಾನು ಒಬ್ಬ ಪುಟ್ಟಗ್ರಾಮದಲ್ಲಿ ಬೆಳೆದ ವ್ಯಕ್ತಿ. ನನಗೆ ಅಂಧತ್ವ ಎಂದೂ ಸಮಸ್ಯೆ ಎನಿಸಿಲ್ಲ, ಅದು ನನಗೆ ಸವಾಲೆನಿಸಿದೆ ಎಂದು ವಿಶ್ವದ ಅಂಧರ ಕ್ರಿಕೇಟ್ ಕೌಸಿಲ್ ಸಂಸ್ಥೆಯ ಅಧ್ಯಕ್ಷ ಜಿ.ಕೆ.ಮಹಂತೇಶ್ ಹೇಳಿದರು.

ಇಂದು ಬೆಳಿಗ್ಗೆ ವಿಮ್ಸ್ ಮೈದಾನದಲ್ಲಿ ರಾಜ್ಯಮಟ್ಟದ ಅಂಧರ ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, 2010-11ರಿಂದ ನಾನು ಅಂಧರ ಕ್ರಿಕೇಟ್‍ನ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿ ಕೊಂಡಾಗಿನಿಂದ ಇದುವರೆಗೂ ಎಂದೂ ಭಾರತ ಅಂಧರ ಕ್ರಿಕೇಟ್ ಪಂದ್ಯಗಳಲ್ಲಿ ಸೋಲನ್ನು ಕಂಡೇ ಇಲ್ಲ ಎಂದು ನುಡಿದರು.

4ಭಾರಿ ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲಿ, 2012 ಮತ್ತು 14ರಲ್ಲಿ ಪಾಕಿಸ್ತಾನದ ವಿರುದ್ದ ಭಾರತ ಜಯಗಳಿಸಿ ಓಡಿಐ ಚಾಂಪಿಯನ್‍ಶಿಪ್ ತಂದು ಕೊಟ್ಟಿದೆ. ಕೇಂದ್ರ ಸರ್ಕಾರದ  ಮಂತ್ರಿಗಳು ಇದನ್ನು ಶ್ಲಾಘಿಸಿ ಸನ್ಮಾನಿಸಿದರು. ಪ್ರಧಾನಮಂತ್ರಿಗಳು ನಮ್ಮನ್ನು  ಭೇಟಿಮಾಡಿ ಶುಭ ಕೋರಿದ್ದಾರೆ. ಇಂದು  ಬೇರೆ ಬೇರೆ ದೇಶದಲ್ಲಿ ಅಂಧರು ತಮ್ಮ ಸ್ಥಾನಮಾನವನ್ನು ಈ ಕ್ರಿಕೇಟ್ ಆಟದಿಂದ ಗುರುತಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ವಿವಿಧ ಜಿಲ್ಲೆಗಳಿಂದ ಬಂದ ಕ್ರೀಡಾಪಟುಗಳಿಗೆ, ನೀವು ಶ್ರಧ್ದೆಯಿಂದ ಕ್ರಿಕೇಟ್ ಆಡಿ ಎಲ್ಲರು ಮುಂದಿನ ಹಂತಕ್ಕೆ ಬೆಳೆಯಬೇಕು. ಕೊನೆಯಸಾರಿ 2 ಕ್ರೀಡಾಪಟುಗಳು ಮಾತ್ರ ರಾಜ್ಯದಿಂದ ಅಂತರ ರಾಜ್ಯ ತಂಡಕ್ಕೆ ಸೇರ್ಪಡೆಯಾಗಿದ್ದರು. ಈ ಭಾರಿ ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕದವರೇ ಆ ತಂಡದಲ್ಲಿ ಇರಬೇಕು ಎಂದರು.

ಅಂಧ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿ:- ರಾಜ್ಯ ಸರ್ಕಾರವು ಮುಂದೆ ಬಂದು ಕ್ರೀಡೆಯಲ್ಲಿ ಭಾಗವಹಿಸಿದ ಅಂಧ ಕ್ರೀಡಾಪಟುಗಳಿಗೆ ಸರ್ಕಾರಿ ಕಚೇರಿಗಳಲ್ಲಿ ನೌಕರಿಯನ್ನು ಕೊಡಬೇಕೆಂದು ಇದೇ ವೇದಿಕೆಯ ಮೂಲಕ ಮನವಿ ಮಾಡಿದರು. ಮತ್ತು ಸಧ್ಯದಲ್ಲೆ ಅಂಧರ ಸ್ಕೂಲ್ ಟೋರ್ನಮೆಂಟ್ ಮಾಡಲು ಇಚ್ಚಿಸಿದ್ದೇನೆ ಎಂದರು. ಪ್ರತಿ ಜಿಲ್ಲೆಯಿಂದಲೂ ಒಂದು ತಂಡ ಭಾಗವಹಿಸಬೇಕು ಎಂದು ಹೇಳಿದರು.

ಕ್ರಿಕೇಟ್ ಮೂಲಕ ಎಲ್ಲಾ ಅಂಧರು ಸ್ವಾವಲಂಬಿಗಳಾಗಬೇಕು. ಸರ್ಕಾರದಿಂದ ಕೆಲಸಗಳನ್ನು ಪಡೆಯಬೇಕು. ಪೆನ್ಷನ್ ಹಣಪಡೆಯುವ ಆಲೋಚನೆ ಮಾಡದೆ. ಟ್ಯಾಕ್ಸ್ ಪೇಯರ್(ತೆರಿಗೆಕಟ್ಟುವವರು) ಆಗಬೇಕು. ಹಾಗಿದ್ದರೆ ಸಮಾಜ ನಿಮಗೆ ಗೌರವವಾಗಿ ಕಾಣುತ್ತದೆ ಎಂದು ಅಂಧರಲ್ಲಿರುವ ಆತ್ಮಬಲವನ್ನು ಬಡಿದೆಬ್ಬಿಸಿದರು.

ಈ ಕಾರ್ಯಕ್ರಮದ ಸಂಯೋಜಕರು ಮತ್ತು ಆಯೋಜಕರಾಗಿರುವಂತಹ ಬಳ್ಳಾರಿ ರೆಡ್ ಕ್ರಾಸ್ ಸಂಸ್ಥೆ, ಸಮರ್ತನಾ ಟ್ರಸ್ಟ್, ಇತರ ಸಂಘಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆರ್.ಚೇತನ್, ಡಾ|| ಬಿಕೆ.ಎಸ್.ಮೂರ್ತಿ, ಡಾ|| ಪ್ರಬಂಜನ್, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ. ಶಕೀಭ್, ಪೋಲಾರಾಧಕೃಷ್ಣ, ರವಿಂಧ್ರ ಬೈಲಿಹಾಲ್, ಶ್ರೀಮತಿ ಸಾಧನಾಹಿರೇಮಠ್, ಡಾ||ಮಿತೇಶ್‍ಕಾಂತರೀಯ, ಅಧ್ಯಕ್ಷರು ಮತ್ತು ಸಂಯೋಜಕರು ಸಮರ್ಥನಾಟ್ರಸ್ಟ್, ಮತ್ತು ವಿವಿಧ ಜಿಲ್ಲೆಗಳಿಂದ ಆಗಮಿಸಿದ ಅಂಧ ಕ್ರೀಡಾಪಟುಗಳ ತಂಡದವರು ಭಾಗವಹಿಸಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3750256
Today
Yesterday
This Week
Last Week
This Month
Last Month
All days
406
13442
102397
3588738
176483
189062
3750256
Your IP: 23.22.136.56
2017-12-17 00:37