Breaking News

ಅಂತರ್ ವಿಭಾಗೀಯ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ

Written by 
Published: 27 September 2017
28 times Last modified on Wednesday, 27 September 2017 15:39

ವರದಿ : ಟಿ.ಗಣೇಶ್

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಸೆ.27;

2017-18ನೇ ಸಾಲಿನ ಅಂತರ್ ವಿಭಾಗೀಯ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭವು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಆವರಣದಲ್ಲಿ ಇಂದು ಜರುಗಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಂಗಾಯಣ ಧಾರವಾಡ ನಿರ್ದೇಶಕರಾದ ಡಾ.ಪ್ರಕಾಶ್ ಗರುಡ, ಕಲೆಗೆ ಯಾವುದೇ ಜಾತಿಬೇದವಿಲ್ಲ. ಎಲ್ಲಾ ಗುಂಪಿನವರು ಕಲೆಗಳಲ್ಲಿ ತಮ್ಮದೇ ಆದ ಸ್ಥಾನಮಾನ ಪಡೆದಿದ್ದಾರೆ. ಈ ಕಲೆಯಲ್ಲಿ ಒಂದೆ ಗುಂಪಿನವರು ಇರುವುದಿಲ್ಲ. ಒಂದು ರಂಗಭೂಮಿಕೆಯಲ್ಲಿ ಒಬ್ಬ ಬಣ್ಣ ಹಾಕುವವನು ಇಲ್ಲದಿದ್ದರೆ ಕೆಲಸವಾಗುವುದಿಲ್ಲ.

ಆದರೆ ಆ ಬಣ್ಣ ಹಾಕುವವನು ಯಾವ ಕುಲದವನು ಎಂದು ಯಾರು ಆಲೋಚಿಸುವುದಿಲ್ಲ. ಇಲ್ಲಿ ಎಲ್ಲರ ಸಹಕಾರದಿಂದ ಕಲೆ ಪ್ರಾರಂಭವಾಗಿರುತ್ತದೆ. ಇಲ್ಲಿ ಎಲ್ಲರ ಸಹಕಾರ ಬಹಳ ಮುಖ್ಯ ಎಂದರು. ಒಬ್ಬ ಎಲೆಕ್ಟ್ರೀಷನ್ ನಿಂದ ಹಿಡಿದು ಪ್ರತಿಯೊಬ್ಬರ ಸಹಕಾರ ವಿಲ್ಲದಿದ್ದರೆ ನಮ್ಮ ಕಲೆ ಅರ್ಧಕ್ಕೆ ನಿಂತು ಹೋಗುತ್ತದೆ. ಇದರಲ್ಲಿ ಯಾವುದೇ ಜಾತಿ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.

ಕಲೆಗೆ ಯಾವುದೇ ರೀತಿಯ ಕೋಮಿನ ಮಿತಿ ಇರುವುದಿಲ್ಲ. ರಾಘವರ , ಜೋಳದರಾಶಿ ದೊಡ್ಡನ ಗೌಡರಂತಹ ಮೇರು ನಟರು ಆಗಿಹೋದ ಈ ನೆಲದಲ್ಲಿ ನಡೆದಾಡುವುದು ನಮ್ಮ ಪುಣ್ಯ ಎಂದರು. ಕಲೆ ಕೇವಲ ನೋಡುವುದಷ್ಟೆ ಅಲ್ಲ ಸಾಕ್ಷಾತ್ಕಾರಗೊಳ್ಳಬೇಕು ಹಾಗೂ ಕೇವಲ ಒಂದೇ ದಿನ ತಾಲೀಮು ನಡೆಸಿ ಪ್ರದರ್ಶಿಸುವುದು ಪರಿಣಾಮಕಾರಿಯಾಗಿರುವುದಿಲ್ಲ, ಕಲೆ ಸತತವಾದ ಮತ್ತು ನಿರಂತರವಾದ ಪ್ರಕ್ರಿಯೆ ಎಂದರು.

ನೂರಾರು ನಾಟಕಗಳು, ಪದ್ಯಗಳು, ಪಠ್ಯದಲ್ಲಿ ಅಳವಡಿಸಲಾಗಿರುತ್ತವೆ. ಅವುಗಳನ್ನ ಪ್ರತಿನಿತ್ಯ ಪ್ರದರ್ಶನಗೊಳಿಸುವುದರ ಮೂಲಕ ನಮ್ಮ ಕಲೆಯನ್ನು ಉಳಿಸಬಹುದಾಗಿದೆ. ಮೌಖಿಕ ಸಾಹಿತ್ಯ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಇಂತಹ ಯುವಜನೋತ್ಸವಗಳು ಪರಿಣಾಮಕಾರಿಯಾಗಿ ಆಚರಣೆಗೊಳ್ಳಬೇಕಾಗಿದೆ ಎಂದು ಕರೆಕೊಟ್ಟರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಘವೆಂದ್ರ ಗುಂಡಿ ತಮ್ಮ 18 ವರ್ಷದ ಹಿಂದಿನ ವಿದ್ಯಾರ್ಥಿ ಜೀವನವನ್ನ ನೆನಪು ಮಾಡಿಕೊಳ್ಳುತ್ತಾ, ನಮಗೆ ರ್ಯಾಂಕ್ ಪಡೆದವರ ಹೆಸರು ನೆನಪಿರುವುದಿಲ್ಲ ಆದರೆ ಯಾರು ನಾಟಕಮಾಡಿದರು, ಯಾರು ಹಾಡನ್ನು ಹಾಡಿದರು  ಎಂಬುದು ಮಾತ್ರ ನೆನಪಿರುತ್ತದೆ ಎಂದರು. ಕಲೆ ಮನಷ್ಯನನ್ನಾಗಿ ಮಾಡುತ್ತದೆ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಪ್ರೊ. ಎಸ್ ಎ ಪಾಟೀಲ್ ಮಾತನಾಡುತ್ತಾ, ಕಲೆ ನಮ್ಮ ಜೀವನದ ಅವಿಭಾಜ್ಯ ಅಂಗ ನಾವು ಅದನ್ನು ಉಳಿಸಿ ಬೆಳೆಸಬೇಕಾದ್ದು ನಮ್ಮ ಕರ್ತವ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಎಂ.ಎಸ್.ಸುಭಾಷ್ ಮಾತನಾಡಿ ವಿಶ್ವವಿದ್ಯಾಲಯದಲ್ಲಿ ನಾಟಕದ ಅಥವಾ ಚಿತ್ರಕಲೆ ಪದವಿ ಅಥವಾ ಡಿಪ್ಲೋಮಾ ಕೋರ್ಸ್ ಆರಂಭಿಸಲು ನಾವು ತಯಾರಾಗಿದ್ದು ಮುಂದಿನ ದಿನಗಳಲ್ಲಿ ವಿವಿಯಲ್ಲಿ ತರಗತಿಗಳು ಆರಂಭವಾಗುತ್ತವೆ ಎಂದರು. ಆರಂಭಕ್ಕೆ ಸಾಂಸ್ಕೃತಿಕ ಸಂಯೋಜಕರಾದ ಪ್ರೊ. ಶಾಂತನಾಯ್ಕ್ ಪ್ರಾಸ್ಥಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ಸುರೇಶ್ ಉಪಸ್ಥಿತರಿದ್ದರು. ಡಾ.ವೀರೆಂದ್ರಕುಮಾರ್ ವಂದಿಸಿದರು.
 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3274021
Today
Yesterday
This Week
Last Week
This Month
Last Month
All days
2542
6468
22864
3222209
98511
263209
3274021
Your IP: 54.158.55.5
2017-10-18 09:19