Breaking News

ಅಪಘಾತಕ್ಕೀಡಾಗಿ ಅನಾಮಧೇಯ ವ್ಯಕ್ತಿ ಸಾವು

Written by 
Published: 07 January 2018
56 times Last modified on Sunday, 07 January 2018 12:52

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಜ.07;

ವರದಿ : ಬಸವರಾಜ್ ಪೂಜಾರ್

ಇಕ್ಕಿಂಗೆರೆ ಬಳಿ ಅಪಘಾತಕ್ಕೀಡಾಗಿ ಅನಾಮಧೇಯ ವ್ಯಕ್ತಿ ಸಾವಿಗೀಡಾಗಿದ್ದಾರೆ.

ಅರಸೀಕೆರೆ ರಸ್ತೆ ಇಕ್ಕಿಂಗೆರೆ ಬಳಿ, ಜ.05ರಂದು ಅಪಘಾತಕ್ಕೀಡಾಗಿದ್ದ ಅನಾಮಧೇಯ ವ್ಯಕ್ತಿಯೋರ್ವ ತೀರ್ವ ರಕ್ತಸ್ರಾವದಿಂದಾಗಿ ಚಿಗಟೇರಿ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾನೆ. ಅಪಘಾತಕ್ಕೀಡಾಗಿ ಸಾವನ್ನಪ್ಪಿದ ದುರ್ದೈವಿ ಬಗ್ಗೆ ಇದುವರೆಗೂ ಯಾವುದೇ ಗುರುತು ಸಿಕ್ಕಿಲ್ಲ. ವ್ಯಕ್ತಿಯ ಶವ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿದ್ದು, ಸoಬಂಧಪಟ್ಟವರು ಅರಸೀಕೆರೆ ಪೊಲೀಸ್ ಠಾಣೆಯನ್ನು ಸoಪರ್ಕಿಸಬೇಕೆಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ನಡೆದ ಘಟನೆ : 

ಜ.05ರಂದು ರಾತ್ರಿ, ಹರಪನಹಳ್ಳಿ ತಾಲೂಕಿನ ಅರಸೀಕೆರೆ ರಸ್ತೆ ಇಕ್ಕಿಂಗೆರೆ ಬಳಿ ದ್ವಿಚಕ್ರ ವಾಹನ ಗುದ್ದಿ ವ್ಯಕ್ತಿಯೊಬ್ಬ ತೀರ್ವ ಗಾಯಗೊಂಡಿದ್ದರು. ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ, ಸ್ಥಳಕ್ಕಾಗಮಿಸಿದ ಪೊಲೀಸರು, ಅಪಘಾತಕ್ಕೀಡಾದ ವ್ಯಕ್ತಿಯನ್ನು ಅರಸೀಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆಗೆ ಒಳಪಡಿಸಿ, ನಂತರ ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ತೀರ್ವ ರಕ್ತಸ್ರಾವವಾದ ಪರಿಣಾಮ ಇಂದು ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4274364
Today
Yesterday
This Week
Last Week
This Month
Last Month
All days
799
15484
100092
4062809
305459
395132
4274364
Your IP: 54.167.126.106
2018-01-20 01:17