Breaking News

ಬಡವರಿಗೆ ಅನಿಲಭಾಗ್ಯ

Written by 

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಅ.09;

ಅನಿಲಭಾಗ್ಯ ಯೋಜನೆಯನ್ನು ಡಿ.01ರಿಂದ  ಜಾರಿಗೊಳಿಸಲು ರಾಜ್ಯಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ,ಇಂದು ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸಭೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ರೂಪಿಸಿರುವ ಉಜ್ವಲ್ ಯೋಜನೆಯಡಿ ಬಡವರಿಗೆ ಉಚಿತವಾಗಿ ಅನಿಲ ಸಂಪರ್ಕ ಕಲ್ಪಿಸುತ್ತಿದೆ. ಆದರೆ ಆ ಯೋಜನೆ ರಾಜ್ಯದ ಎಲ್ಲರಿಗೂ ತಲುಪುವುದಿಲ್ಲ. ಕರ್ನಾಟಕದಲ್ಲಿ ಅತಿ ಹೆಚ್ಚು ಕುಟುಂಬಗಳಿವೆ.

ಹೀಗಾಗಿ ಬಹಳಷ್ಟು ಮಂದಿ ಸೌಲಭ್ಯ ವಂಚಿತರಾಗುವುದನ್ನು ತಪ್ಪಿಸಲು ಅನಿಲಭಾಗ್ಯ ಯೋಜನೆ ರೂಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದರು. ಪ್ರತಿ ಫಲಾನುಭವಿಗಳಿಗೆ 4,440 ರೂ. ಖರ್ಚು ಮಾಡಿದರೆ ಸಿಲಿಂಡರ್ ಜೊತೆಗೆ ಸ್ಟೌವ್, ಗ್ಯಾಸ್ ರೆಗ್ಯುಲೇಟರ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಜೊತೆಗೆ 2 ತಿಂಗಳು ಉಚಿತವಾಗಿ ಗ್ಯಾಸ್ ಮರುಪೂರ್ಣ(ರೀ ಫಿಲ್ಲಿಂಗ್) ಗೊಳಿಸಲಾಗುವುದು. ಗ್ರಾಮೀಣ ಭಾಗದವರಿಗೆ ಅನಿಲ ಸಂಪರ್ಕ ಇದ್ದರೂ ಕೂಡ ಒಂದು ಲೀಟರ್ ಸೀಮೆಎಣ್ಣೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3750190
Today
Yesterday
This Week
Last Week
This Month
Last Month
All days
340
13442
102331
3588738
176417
189062
3750190
Your IP: 23.22.136.56
2017-12-17 00:33