Breaking News

ಬಳ್ಳಾರಿಯಲ್ಲಿ ತೊಗರಿ ಕೇಂದ್ರ ಸ್ಥಾಪನೆಗೆ ಹಸಿರು ಸೇನೆ ಒತ್ತಾಯ

Written by 
Published: 04 January 2018
38 times Last modified on Thursday, 04 January 2018 14:24
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿರುವ ಚಿತ್ರ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿರುವ ಚಿತ್ರ.

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಜ.04;

ವರದಿ : ಟಿ.ಗಣೇಶ

ಬಳ್ಳಾರಿಯಲ್ಲಿಂದು ತೊಗರಿ ಕೇಂದ್ರ ಸ್ಥಾಪನೆಗೆ ರಾಜ್ಯ ರೈತ ಸಂಘದ ಹಸಿರು ಸೇನೆ ಒತ್ತಾಯಿಸಿದರು.

ಜಿಲ್ಲೆಯಲ್ಲಿ ತೊಗರಿ ಕೇಂದ್ರವನ್ನು ಸ್ಥಾಪಿಸಬೇಕೆಂದು ಕರ್ನಾಟಕ ರಾಜ್ಯ ರೈತರ ಸಂಘ ಹಸಿರು ಸೇನೆಯ ಜಿಲ್ಲಾ ಸಮಿತಿಯು ನಗರದ ಖಾಸಗಿ ಆಸ್ಪತ್ರೆಯಲ್ಲಿ ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

ಸುದ್ಧಿಗಾರರನ್ನು ಉದ್ದೇಶಿಸಿ ಹಸಿರು ಸೇನೆಯ ಜಿಲ್ಲಾ ಸಂಚಾಲಕ ಗೋಣಿಬಸಪ್ಪ ಮಾತನಾಡಿ, ಜಿಲ್ಲೆಯಲ್ಲಿ ತೊಗರಿ, ಮೆಕ್ಕೇಜೋಳ ಬೆಳೆದ ರೈತರು ಬೀದಿ ಪಾಲಾಗಿದ್ದಾರೆ. ಮೆಕ್ಕೇಜೋಳದ ಕನಿಷ್ಠ ಬೆಲೆ 1800/- ರೂಗಳಿಗೆ ಮತ್ತು ತೊಗರಿ ಕನಿಷ್ಠ ಬೆಲೆ ರೂ.6000/- ನಿಗಧಿಪಡಿಸಬೇಕು. ಮತ್ತು ಜಿಲ್ಲೆಯಲ್ಲಿ ತೊಗರಿ ಕೇಂದ್ರಗಳನ್ನು ತೆರೆಯಬೇಕು. ಅಲ್ಲದೇ ದೇಶಕ್ಕೆ ಅನ್ನ ನೀಡುವ ರೈತರ ಪರವಾಗಿ ಸರ್ಕಾರವು ನಿಲ್ಲಬೇಕು ಎಂದು ಗೋಣಿಬಸಪ್ಪ ಒತ್ತಾಯಿಸಿದರು.

ತುಂಗಭದ್ರ ಜಲಾಶಯ:

ಸತತ 3 ವರ್ಷಗಳಿಂದ ಜಲಾಶಯದಲ್ಲಿ ನೀರು ತುಂಬುತ್ತಿಲ್ಲ ಜಲಾಶಯವು 133 ಟಿ.ಎಂ.ಸಿ. ನೀರಿನ ಸಾಮಥ್ಯವನ್ನು ಹೊಂದಿದೆ. ಆದರೆ ಜಲಾಶಯ ಸರಿಯಾಗಿ ನೀರು ತುಂಬದೆ ಮೂರು ಜಿಲ್ಲೆಯ ರೈತರು ವರ್ಷಕ್ಕೆ ಒಂದೂ ಬೆಳೆ ಸರಿಯಾಗಿ ಬೆಳೆಯಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸ್ಥಿತಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಮೂರು ತಾಲೂಕಿಗೆ 2 1/2 ಟಿ.ಎಂ.ಸಿ. ನೀರನ್ನು ಹರಿಸುವಂತೆ ಜನವರಿ 2 ರಂದು ಮಂತ್ರಿಮಂಡಲ ತೀರ್ಮಾನ ಮಾಡಿದೆ. ಇದಕ್ಕಾಗಿ 2350 ಕೋಟಿ ರೂಗಳನ್ನು ತೆಗೆದಿರಿಸಲಾಗಿದೆ.

ಆದರೆ ಸರ್ಕಾರದ ತೀರ್ಮಾನಕ್ಕೆ ನಮ್ಮ ಅಭ್ಯಂತರವಿಲ್ಲ ಆದರೆ ಈಗಿರುವ ನೀರಿನಲ್ಲಿ ಮೂರು ಜಿಲ್ಲೆಗಳ ರೈತರು ತೊಂದರೆಗೆ ಒಳಗಾಗಿದ್ದಾರೆ. ಈಗಿರುವ ಜಲಾಶಯದಲ್ಲಿ 33 ಟಿ.ಎಂ.ಸಿ. ಹೂಳು ತುಂಬಿದೆ ಮೊದಲು ಹೂಳು ತೆಗೆಸಲಿ. ಒಂದುವೇಳೆ ಹಾಗೆಯೇ ನೀರು ಕೊಟ್ಟರೆ ಮೂರು ಜಿಲ್ಲೆಗಳ ರೈತರು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ನಾಗರಾಜ್ ಜಾಲಿಹಾಳ್, ಕೃಷ್ಣಪ್ಪ, ಹೊನ್ನೂರ ಸಾಬ್, ಈಶ್ವರಪ್ಪ, ನಾಗರಾಜ್ ಮುಂಡರಗಿ, ರಾಘವೇಂದ್ರ, ಎರಿಸ್ವಾಮಿ ಇತರ ರೈತರು ಹಾಜರಿದ್ದರು.

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250421
Today
Yesterday
This Week
Last Week
This Month
Last Month
All days
9828
16742
76149
4062809
281516
395132
4250421
Your IP: 54.234.190.237
2018-01-18 15:54