Breaking News

ಬಯಲು ಶೌಚಮುಕ್ತ ಜಿಲ್ಲೆ ಮಾಡಲು ಪಣತೊಟ್ಟ ಸಿಇಒ

Written by 
Published: 07 October 2017
106 times Last modified on Saturday, 07 October 2017 09:10

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಅ.07;

ವರದಿ : ಬಸವರಾಜ್ ಪೂಜಾರ್

ಜಿಲ್ಲಾ ಪಂಚಾಯತ್ ಸಿಇಒ ಅಸ್ವತಿ, ಬಯಲು ಶೌಚಮುಕ್ತ ಜಿಲ್ಲೆ ಮಾಡಲು ಪಣ ತೊಟ್ಟಿದ್ದಾರೆ.

ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗ, ಚಟ್ನಿಹಳ್ಳಿ, ಚೆನ್ನಪುರಕ್ಕೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ  ಭೇಟಿ ನೀಡಿ, ನಿನ್ನೆ ಪರಿಶೀಲನೆ ನಡೆಸಿದರು. ಈ ವೇಳೆ ಶೌಚಾಲಯ ಕಟ್ಟಿಸಿಕೊಂಡವರಿಗೆ  ಸರಕಾರ ಕೊಡುವ ಹಣವನ್ನು ಬೇಗ  ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

ಉಚ್ಚಂಗಿದುರ್ಗ,ಚಟ್ನಿಹಳ್ಳಿ, ಚೆನ್ನಪುರಕ್ಕೆ ಬೆಳೆಗ್ಗೆಯೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜನರ ಬಾಗಿಲಿಗೆ ಬಂದು ಶೌಚಾಲಯ ಕಟ್ಟಿಸಿಕೊಳ್ಳಿ ಎಂದು ಹಳ್ಳಿಯ ಜನರಿಗೆ ಮನವರಿಕೆ ಮಾಡಿದರು. ಜಿಲ್ಲಾ ಪಂಚಾಯತ್ ಸಿಇಓ ಅಸ್ವತಿ ಬೆಳೆಗ್ಗೆ 8ಗಂಟೆಗೆ ಹಳ್ಳಿಗೆ ಬಂದಿದ್ದರಿoದ ಕೆಲವರು ಆಶ್ಚರ್ಯಗೊಂಡರು. ಇನ್ನೂ ಕೆಲವು ಜನರು ಸಂತೋಷದಿಂದ ಹಳ್ಳಿಗೆ ಭೇಟಿ ನೀಡಿದ ಮೊದಲ ಸಿಇಓ ಎಂದು ಖುಷಿಯಿoದ ಬರ ಮಾಡಿಕೊಂಡರು.

ಅಲ್ಲದೆ ಸರಕಾರಿ ಪದವಿ ಪೂರ್ವ ಕಾಲೇಜು ಎನ್.ಎಸ್.ಎಸ್ ವಿದ್ಯಾರ್ಥಿಗಳ ನೆರವಿನಿoದ ಹಲವು ಶೌಚಾಲಯ ನಿರ್ಮಿಸಲು ಉಚ್ಚoಗಿದುರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶೌಚಾಲಯದ ಗುoಡಿ ತೆಗೆಸಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಸಿಇಓ ಅಸ್ವತಿ, ತಾಲ್ಲೂಕ್ ಪಂಚಾಯತ್ ಇ.ಓ ತಿಪ್ಪೇಸ್ವಾಮಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ,ಸದಸ್ಯರು ಇದ್ದರು.

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770900
Today
Yesterday
This Week
Last Week
This Month
Last Month
All days
6072
14978
21050
3647859
197127
189062
3770900
Your IP: 54.221.76.68
2017-12-18 08:59