Breaking News

ಬೆಳೆ ಹಾನಿ : ರೈತರಿಂದ ರಸ್ತೆ ತಡೆ 

Written by 
Published: 03 October 2017
65 times Last modified on Wednesday, 04 October 2017 04:56

ಕೆ.ಎನ್.ಪಿ.ವಾರ್ತೆ, ದಾವಣಗೆರೆ, ಅ.04;

ವರದಿ : ಬಸವರಾಜ್ ಪೂಜಾರ್

ಹರಪನಹಳ್ಳಿ ತಾಲ್ಲೂಕಿನ ಕಂಬತ್ತಳ್ಳಿ ಕ್ರಾಸ್ನಲ್ಲಿ ರೈತ ಸಂಘಟನೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳಿಂದ ರಸ್ತೆ ಬಂದ್ ನಡೆಯಿತು.

ಹರಪನಹಳ್ಳಿ ತಾಲೂಕಿನ ಅನೇಕ ಭಾಗಗಳಲ್ಲಿ ರೈತರ ಪ್ರಮುಖ ಫಸಲಾದ ಮೆಕ್ಕೆಜೋಳವನ್ನು ತಿಂದು ರೈತರನ್ನು ಸಾಲಗಾರರನ್ನಾಗಿ ಮಾಡುತ್ತಿರುವ ಸೈನಿಕ ಅಥವಾ  ಲದ್ದಿಹುಳುಗಳಿಂದ ಬಾಧಿತರಾದ ರೈತರು ಪರಿಹಾರ ಕೋರಿ ನಿನ್ನೆ ರಸ್ತೆ ತಡೆ ನಡೆಸಿ, ಅಧಿಕಾರಿಗಳ ಗಮನಕ್ಕೆ ತoದು ಸೂಕ್ತ ಕ್ರಮಕ್ಕೆ ಮನವಿಯನ್ನು ಸಲ್ಲಿಸಿದರು.

ಜೂನ್ ಮೊದಲ ವಾರದಲ್ಲಿ ವಾಡಿಕೆಯಂತೆ ಮಳೆಯಾಗದಿದ್ದರೂ ಸಹ ರೈತರು ದೇವರ ಮೇಲಿನ ನಂಬಿಕೆಯಿಂದ ಬಿತ್ತನೆ  ಕಾರ್ಯವನ್ನು ಮಾಡಿದ್ದರು. ನಂತರ ಸುಮಾರು ಎರಡು ತಿಂಗಳುಗಳ ಕಾಲ ಮಳೆ ಬರದೆ ಇರುವುದರಿoದ  ರೈತರು ಸಂಕಷ್ಟಕ್ಕೆ ಈಡಾಗಿದ್ದು ಮತ್ತೆ ಮಧ್ಯದಲ್ಲಿ ಮೂರರಿಂದ ನಾಲ್ಕು ದಿನ ಅಲ್ಪಸ್ವಲ್ಪ ಮಳೆಯಾದ ಕಾರಣ ರೈತರು ಬಿತ್ತಿದ ಮೆಕ್ಕೆಜೋಳವನ್ನು ತೆಗೆದು ಮತ್ತೆ ಬಿತ್ತಿದ್ದರು. 

ಕಳೆದ ಒಂದು ವಾರದಿಂದ ಸತತ ಸುರಿಯುತ್ತಿರುವ ಮಳೆಯಿಂದ ರೈತರ ಮುಖದಲ್ಲಿ ಸಂತಸ ಮನೆ ಮಾಡಿತ್ತು. ಆದರೆ ಈ ಸಂತಸ ಬಹಳ ದಿನ  ಉಳಿಯದೆ ಮತ್ತೆ ರೈತರನ್ನು  ಸಂಕಷ್ಟಕ್ಕೀಡು ಮಾಡಿದೆ. ಲದ್ದಿಹುಳುಗಳು ಸುಮಾರು ಒಂದು ದಿನಕ್ಕೆ ನಾಲ್ಕರಿಂದ ಐದು ಎಕರೆ ಭೂಮಿಯಲ್ಲಿನ  ಮೆಕ್ಕೆಜೋಳ ಹಾಗೂ ಇತರ ಬೆಳೆಗಳನ್ನು ತಿಂದು ಹೊಲ ಖಾಲಿ ಮಾಡಿರುವುದರಿಂದ  ರೈತನಿಗೆ ಬೆಳೆಯೂ ಇಲ್ಲ ಹಾಗೂ ದನಕರುಗಳಿಗೆ ಮೇವು ಇಲ್ಲದಂಥ ಪರಿಸ್ಥಿತಿಯಾಗಿದೆ.

ಇದರಿಂದ ಭಯಗೊಂಡ ರೈತರು ಇಂದು ಸರ್ಕಾರ ಪರಿಹಾರ ನೀಡಬೇಕು ಎಂದು  ಕಂಬತ್ತಳ್ಳಿ ಕ್ರಾಸ್ನಲ್ಲಿ ರಸ್ತೆ ತಡೆ  ನಡೆಸಿ ತಹಸೀಲ್ದಾರರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ ಗುರುಬಸವರಾಜ್,  ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ರೈತರಿಗೆ ಭರವಸೆ ನೀಡಿದರು.

ತಹಶೀಲ್ದಾರರು ರೈತರಿಗೆ ಭರವಸೆ ನೀಡಿದ ನಂತರವೇ ರೈತರು ರಸ್ತೆ ತಡೆಯನ್ನು ಹಿಂದಕ್ಕೆ ತೆಗೆದುಕೊಂಡರು. ಒಟ್ಟಿನಲ್ಲಿ ಒಂದಲ್ಲ ಒಂದು ಸಂಕಷ್ಟಕ್ಕೆ ಈಡಾಗುತ್ತಿರುವ ರೈತರಿಗೆ ಯಾವುದೇ ತರಹದ ತೊಂದರೆಗಳು ಆಗದಂತಹ ಕ್ರಮಗಳನ್ನು  ಕೈಗೊಳ್ಳಬೇಕು ಎನ್ನುವುದು ರೈತರ ಬೇಡಿಕೆಯಾಗಿದೆ.

ಈ ವೇಳೆ ರೈತ ಸಂಘ ಹಾಗೂ ಹಸೀರು ಸೇನೆ  ರಾಜ್ಯಾಧ್ಯಕ್ಷರಾದ ಮಹೇಶ್ವರಸ್ವಾಮಿ  ಹಾಗೂ ರೈತ ಸಂಘದ  ಮುಖಂಡರಾದ ಹೊಸಹಳ್ಳಿ ಮಹೇಶ್, ಮರುಳ ಸಿದ್ದಪ್ಪ, ದೇವರಾಜ್, ಪ್ರಗತಿಪರ ಸಂಘಟನೆಗಳ ಮುಖ್ಯಸ್ಥರಾದ ಗುಡಿಹಳ್ಳಿ ಹಾಲೇಶ್, ರೇಣುಕಮ್ಮ ಹಾಗೂ ವಿವಿಧ ಊರುಗಳಿಂದ ಬಂದಿದ್ದ ಎಲ್ಲ ರೈತರು ಭಾಗವಹಿಸಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770867
Today
Yesterday
This Week
Last Week
This Month
Last Month
All days
6039
14978
21017
3647859
197094
189062
3770867
Your IP: 54.221.76.68
2017-12-18 08:57