Breaking News

ಬೆಳಗೆರೆ ವಿರುದ್ಧ ಅರೆಸ್ಟ್ ವಾರೆಂಟ್

Written by 
Published: 14 December 2017
54 times Last modified on Thursday, 14 December 2017 10:34

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಡಿ.14;

ಪತ್ರಕರ್ತ ರವಿ ಬೆಳಗೆರೆ ಅವರಿಗೆ ಸುಪಾರಿ ಕೇಸಿನಲ್ಲಿ ಮದ್ಯಂತರ ಷರತ್ತುಬದ್ಧ ಜಾಮೀನು ದೊರೆತ ಬೆನ್ನಲ್ಲೇ ಮತ್ತೊಂದು ಸಂಕಷ್ಟ ಎದುರಾಗಿದೆ.

7ವರ್ಷಗಳ ಹಿಂದೆ ದಾಖಲಾಗಿದ್ದ ಮಾನಹಾನಿ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದ್ದು, ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನಿಂದ ರವಿ ಬೆಳಗೆರೆ ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿದೆ. ಏಳು ವರ್ಷಗಳಿಂದ ವಿಚಾರಣೆಗಾಗಿ ಕೋರ್ಟ್ ಮೆಟ್ಟಿಲೇರದ ಕಾರಣ, ರವಿ ಬೆಳಗೆರೆ ಅವರನ್ನು ಕೋರ್ಟಿಗೆ ಹಾಜರುಪಡಿಸುವಂತೆ ನಿರ್ದೇಶಿಸಲಾಗಿದೆ ಎಂಬ ಮಾಹಿತಿ ಮಾಧ್ಯಮಗಳಿಂದ ಲಭ್ಯವಾಗಿದೆ.

ನಡೆದ ಘಟನೆ :

ಸಂಜಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿರುವ ಮಹಿಳೆಯೊಬ್ಬರ ವಿರುದ್ಧ ಏಳು ವರ್ಷಗಳ ಹಿಂದೆ ರವಿ ಬೆಳಗೆರೆ  ಅವರ 'ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಇದರ ವಿರುದ್ಧ ಕೆರಳಿದ್ದ ಆ ಮಹಿಳೆ, ಮಾನನಷ್ಟ ಮೊಕದ್ದಮೆ ಹೂಡಿದ್ದರು. ಕಳೆದ ಏಳು ವರ್ಷಗಳಿಂದ ವಿಚಾರಣೆ ಜಾರಿಯಲ್ಲಿದ್ದು, ಒಮ್ಮೆ ಕೂಡಾ ರವಿ ಬೆಳಗೆರೆ ಅವರು ವಿಚಾರಣೆಗೆ ಹಾಜರಾಗಿಲ್ಲ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250414
Today
Yesterday
This Week
Last Week
This Month
Last Month
All days
9821
16742
76142
4062809
281509
395132
4250414
Your IP: 54.234.190.237
2018-01-18 15:54