Breaking News

ಬೆಸ್ಕಾಂ ನ ಜಗದೀಶಪ್ಪ ಮನೆ ಮೇಲೆ ಎಸಿಬಿ ದಾಳಿ

Written by 
Published: 05 January 2018
40 times Last modified on Friday, 05 January 2018 06:31

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಜ.05;

ವರದಿ : ಮಹಮ್ಮದ್ ಅಬ್ದುಲ್ ರಖೀಬ್

ಬೆಸ್ಕಾಂ ನ ಜಗದೀಶಪ್ಪ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ.

ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಅಧಿಕಾರಿಗಳು ನಿನ್ನೆ ಬೆಸ್ಕಾಂ ನ ಎಇಇ ಜಗದೀಶಪ್ಪ ಎಂಬುವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಅದಾಯ ಮೀರಿದ ಆಸ್ತಿ ಗಳಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಎಸಿಬಿ ಅಧಿಕಾರಿಗಳು ಜಗದೀಶಪ್ಪ ಅವರ ಮನೆ ಮೇಲೆ ದಾಳಿ ಮಾಡಿದ್ದು, ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಎಸಿಬಿ ಎಸ್ಪಿ ವಂಶಿಕೃಷ್ಣ ಹಾಗೂ ಡಿಎಸ್ಪಿ ವಾಸುದೇವ ರಾವ್ ನೇತೃತ್ವದಲ್ಲಿ ದಾಳಿ ನಡೆದಿದೆ.

ಜಗದೀಶಪ್ಪ ಅವರು, ದಾವಣಗೆರೆಯ ಶಿವಕುಮಾರ ಬಡಾವಣೆಯ ಮನೆ, ದಾವಣಗೆರೆಯ ಮೂರು ಮನೆಗಳು, ಧಾರವಾಡದಲ್ಲಿರುವ ಎರಡು ಸೈಟ್, ತುಮಕೂರಿನ 1 ಸೈಟ್, ಬೆಂಗಳೂರು 1 ಸೈಟ್, ಹೊಸದುರ್ಗ ತಾಲೂಕು ಚಿಕ್ಕಮ್ಮನಹಳ್ಳಿಯಲ್ಲಿನ 5 ಎಕರೆ ಜಮೀನು, ಹೊಳಲ್ಕೆರೆ ತಾಲೂಕು ಚಿಕ್ಕಜಾಜೂರಿನಲ್ಲಿ 20 ಎಕರೆ ಜಮೀನು, ಸೇರಿದಂತೆ ಕೋಟ್ಯಾಂತರ ಆಸ್ತಿಯನ್ನು ಹೊಂದಿದ್ದಾರೆ. 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4274336
Today
Yesterday
This Week
Last Week
This Month
Last Month
All days
771
15484
100064
4062809
305431
395132
4274336
Your IP: 54.167.126.106
2018-01-20 01:14