Breaking News

ಬೈಕ್ ನಿಂದ ಬಿದ್ದು ಓರ್ವ ಸಾವು

Written by 
Published: 09 January 2018
130 times Last modified on Tuesday, 09 January 2018 15:45

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಜ.09;

ವರದಿ : ಕೋಗಳಿ ಶೇಖರ್

ಬೈಕ್ ನಿಂದ ಬಿದ್ದು ಓರ್ವ ಸಾವನ್ನಪ್ಪಿರುವ ಘಟನೆ ಮುಂಡರಗಿಯಲ್ಲಿ ನಡೆದಿದೆ.

ದ್ವಿಚಕ್ರ ವಾಹನದಲ್ಲಿ ಹೋಗುವಾಗ ಹಾವು ನೋಡಿ ಭಯಭೀತರಾಗಿ ಬೈಕ್ ನಿಂದ ಬಿದ್ದು, ಒಬ್ಬರು ಗಾಯಗೊಂಡಿದ್ದು, ಇನ್ನೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಿನ್ನೆ ಮುಂಡರಗಿ ತಾಲೂಕಿನಲ್ಲಿ ನಡೆದಿದೆ.  

ಬೈಕ್ ಸವಾರರು ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದವರಾಗಿದ್ದು, ಇಬ್ಬರು ತಂದೆ, ಮಗ ಎಂದು ತಿಳಿದುಬಂದಿದೆ. ಎತ್ತು ಖರೀದಿ ಮಾಡಬೇಕಾಗಿ ಮುಂಡರಗಿಯಿಂದ ಹಡಗಲಿಗೆ ಹೋಗುವಾಗ ಕೊರ್ಲಹಳ್ಳಿ ಮಾತಾ ಡಾಬಾ ಬಳಿ ರಸ್ತೆಯ ಮೇಲೆ ಹಾವು ಹರಿದು ಹೋಗುವದನ್ನು ನೋಡಿ ಭಯಭೀತರಾಗಿ ಮಾರ್ಗ ಮಧ್ಯ ಈ ಅವಗಢ ಸಂಭವಿಸಿದೆ.

ಈ ದುರ್ಘಟನೆಯಲ್ಲಿ ಮರೆಗೌಡ ದೊಡ್ಡ ಮೈಲಾರಗೌಡ (60) ಮೃತಪಟ್ಟಿದ್ದು, ಇವರ ಮಗ  ಹನುಮನಗೌಡ (23) ಎಂಬವರು ಗಾಯಗೊಂಡಿದ್ದಾರೆ. ಇವರನ್ನು  ಹತ್ತಿರದ ತಾಲೂಕು ಸರ್ಕಾರಿ  ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಯಿತು. ಈ ಕುರಿತು ಮುಂಡರಗಿ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250529
Today
Yesterday
This Week
Last Week
This Month
Last Month
All days
9936
16742
76257
4062809
281624
395132
4250529
Your IP: 54.234.190.237
2018-01-18 16:00