Breaking News

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ

Written by 
Published: 14 October 2017
95 times Last modified on Sunday, 15 October 2017 07:32

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಅ.14;

ವರದಿ : ವೀರೇಶ ಆಲೂರು

ಆಹಾರ ದಾಸ್ತಾನು  ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ.

ನಿನ್ನೆ ಆಹಾರ ಇಲಾಖೆಗೆ ಸೇರಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿರುವ ಘಟನೆ  ತಾಲೂಕಿನ ಹಣವಾಳ ಗ್ರಾಮದ ಸಮೀಪದಲ್ಲಿ ಜರುಗಿದೆ. ಹಣವಾಳ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಅಕ್ಕಿ ಮೂಟೆಗಳನ್ನು ಹೊತ್ತುಯ್ಯುತ್ತಿದ್ದ ಲಾರಿ ಹಣವಾಳ - ಗಂಗಾವತಿಗೆ ಮಾರ್ಗದ ರಸ್ತೆ ದುರಸ್ಥಿಯಾಗಿದ್ದರಿಂದ ಗದ್ದೆಗೆ ಉರುಳಿತು. ಇದರಿಂದ ಬಡವರ ಮನೆ ಸೇರಬೇಕಿದ್ದ ಅಕ್ಕಿ ಕೆಸರು ಗದ್ದೆ ಪಾಲಾದವು. ಈ ಘಟನೆ ಶನಿವಾರ ಸಂಜೆ ಸಂಭವಿಸಿದೆ. ಘಟನೆಯಿಂದ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರು ನಡೆದುಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿನ ರಸ್ತೆಗಳು ದುರಸ್ತಿಯಾಗಿ ಅಪಘಾತಗಳಿಗೆ ಆಹ್ವಾನ ನೀಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇವರು ಎಚ್ಚೆತ್ತುಕೊಳ್ಳಲು ಇನ್ನು ಅದೆಷ್ಟು ಅಪಘಾತಗಳು ಜರುಗಬೇಕೋ...? ಎಂದು ನಿತ್ಯ ಅದೇ ರಸ್ತೆ ಮಾರ್ಗವಾಗಿ ಸಂಚರಿಸುವವರು ತಮ್ಮ ಅಳಲನ್ನು ಕೆ.ಎನ್.ಪಿ. ವರದಿಗಾರರೊಂದಿಗೆ ತೋಡಿಕೊಂಡರು.

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4274294
Today
Yesterday
This Week
Last Week
This Month
Last Month
All days
729
15484
100022
4062809
305389
395132
4274294
Your IP: 54.167.126.106
2018-01-20 01:11