Breaking News

ಚಿಲ್ಲರೆ ಮಾರಾಟ ನಿಷೇಧಿಸಿ ಸರ್ಕಾರಿ ಆದೇಶ

Written by 
Published: 29 September 2017
45 times Last modified on Friday, 29 September 2017 17:59

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಸೆ.29;

ಇನ್ಮುಂದೆ ಸಿಗರೇಟ್, ಬೀಡಿ, ಚೂಯಿಂಗ್, ತಂಬಾಕು ಮುಂತಾದವುಗಳ ಬಿಡಿ ಬಿಡಿ ಮಾರಾಟವನ್ನು ನಿಷೇಧಿಸಬೇಕು ಎಂದು ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಈ ಹಿಂದೆ ಸುಪ್ರೀಂ ಕೋರ್ಟ್ ಆದೇಶದನ್ವಯ ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಚೂಯಿಂಗ್ ಟೊಬ್ಯಾಕೋಗಳ ಮೇಲೆ ನಿಷೇಧ ಹೇರಿತ್ತು. ಈ ಕ್ರಮಗಳಿಂದಾಗಿ ಈಗಾಗಲೇ ಧೂಮಪಾನಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಖೆ ಮೂಲಗಳು ತಿಳಿಸಿವೆ. ಆದರೂ ತಂಬಾಕು ಉತ್ಪನ್ನಗಳ ಲೂಸ್ ಮಾರಾಟದಿಂದಾಗಿ ಧೂಮಪಾನಿಗಳು ಅಂಗಡಿಗಳಿಂದ ಒಂದೆರಡು ಸಿಗರೇಟುಗಳನ್ನು ತೆಗೆದುಕೊಂಡು ಅಭ್ಯಾಸದೊಂದಿಗೆ ಮುಂದುವರೆಸಿರುವ ಕಾರಣ ದುರಭಾಭ್ಯಾಸ ಇನ್ನೂ ಮುಂದುವರೆದಿದೆ.

ಆದ್ದರಿಂದ ಆರೋಗ್ಯ ಸ್ವಯಂಸೇವಕರು, ಗ್ರಂಥಿಶಾಸ್ತ್ರಜ್ಞರು ಮತ್ತು ಇತರರು ಆರೋಗ್ಯದ ಹಿತದೃಷ್ಟಿಯಿಂದ ಸಿಗರೇಟ್, ಬೀಡಿ ಮತ್ತು ಚೂಯಿಂಗ್ ತಂಬಾಕು ಉತ್ಪನ್ನಗಳ ಬಿಡಿ ಮಾರಾಟ ನಿಷೇಧ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಂತದ್ದೊಂದು ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.

ಆದ್ದರಿಂದ ಸಿಗರೇಟ್ ಮತ್ತು ಇಅತರೆ ತಂಬಾಕು ಉತ್ಪನ್ನಗಳ ಕಾಯ್ದೆ 2003ರ ಸೆಕ್ಷನ್ (3), (8) ಮತ್ತು (9) ರ ಪ್ರಕಾರ ಉಲ್ಲಂಘನೆಯೆಂದು ಪರಿಗಣಿಸಿ ಕರ್ನಾಟಕ ರಾಜ್ಯದಲ್ಲಿ ಬಿಡಿ ಬಿಡಿಯಾಗಿ ಮಾರಾಟ ಮಾಡುತ್ತಿರುವ ಸಿಗರೇಟು, ಬೀಡಿ ಹಾಗೂ ಜಗಿಯುವ ತಂಬಾಕು ಉತ್ಪನ್ನಗಳನ್ನು ಈ ಕೂಡಲೇ ಜಾರಿಗೆ ಬರುವಂತೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಕಾನೂನನ್ನು ಉಲ್ಲಂಘಿಸಿದ ಯಾವುದೇ ವ್ಯಕ್ತಿಯ ಕಾಯ್ದೆ 2003ರ ಕಲಂ (20)ರ ಅಡಿಯಲ್ಲಿ ದಂಡನೆಗೆ ಒಳಗಾಗುತ್ತಾರೆ ಎಂದು ಆದೇಶಿಸಿದೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3750201
Today
Yesterday
This Week
Last Week
This Month
Last Month
All days
351
13442
102342
3588738
176428
189062
3750201
Your IP: 23.22.136.56
2017-12-17 00:34