Breaking News

ಸಿ.ಎಂ.ಸಿದ್ದರಾಮಯ್ಯ ಒಬ್ಬ ಕಮಿಷನ್ ಏಜೆಂಟ್ - ಬಿ.ಎಸ್.ವೈ.ಆರೋಪ

Written by 
Published: 07 January 2018
35 times Last modified on Sunday, 07 January 2018 16:55

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಜ.07;

ವರದಿ : ಟಿ.ಗಣೇಶ್

ಸಿ.ಎಂ.ಸಿದ್ದರಾಮಯ್ಯ ಒಬ್ಬ ಕಮಿಷನ್ ಏಜೆಂಟ್ ಎಂದು ಬಿ.ಎಸ್.ವೈ.ಆರೋಪಿಸಿದರು.

ಜ.05ರಂದು ನಗರದಲ್ಲಿ ನಡೆದ ಬಿಜೆಪಿ 155ನೇ ಪರಿವರ್ತನಾ ಯಾತ್ರೆ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, 2ಲಕ್ಷ ಕೋಟಿ ಹಣ, 14ನೇ ಹಣಕಾಸು ಯೋಜನೆ ಹಣ, 86 ಲಕ್ಷ ಕೋಟಿ ಬಜೆಟ್ ಇದ್ದರೂ ಸಹ ಈ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ನಂಬಿಕೆ ದ್ರೋಹ ಮಾಡಿದ್ದಾರೆ. ವಿಶ್ವಾಸ ದ್ರೋಹ  ಮಾಡಿದ್ದಾರೆ. ಎಸ್ಟೀಮೇಟ್ ಮಾಡುವಲ್ಲಿಯೂ ಕೂಡ ಶೇಕಡ 30% ಹೆಚ್ಚಿನ ಹಣ ನೊಂದಣಿ ಮಾಡಿದ್ದಾರೆ. 3 ಕೋಟಿ ಇದ್ದಲ್ಲಿ 4 ಕೋಟಿ ಮಾಡಿ ಗುತ್ತಿಗೆದಾರರಿಂದ ಕಮಿಷನ್ ಹಣ ಪಡೆಯುತ್ತಿದ್ದಾರೆ. ಎಂದು ಸಿ.ಎಂ.ಸಿದ್ದರಾಮಯ್ಯ ಮತ್ತು ಅವರ ಸರ್ಕಾರದ ವಿರುದ್ದ ಗುಡುಗಿದರು.

ಕಾಮಗಾರಿಯನ್ನು ಕಳಪೆ ಮಾಡಿಸಿ ಅದರಲ್ಲಿಯೂ ಕಮಿಷನ್ ಪಡೆಯುತ್ತಿದ್ದಾರೆ. ಸಿ.ಎಂ.ಸಿದ್ದರಾಮಯ್ಯ ಅವರು ಒಬ್ಬ ಕಮಿಷನ್ ಏಜೆಂಟ್ ಎಂದು ಆರೋಪಿಸಿದರು. ರಾಜ್ಯದ ಮುಖ್ಯಮಂತ್ರಿಯವರೆ, ಈ ರೀತಿ ಕಮಿಷನ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು. ಸಿದ್ದರಾಮಯ್ಯ ನವರ ಮೇಲೆ 67 ಕೇಸುಗಳಿವೆ ಅವನ್ನೆಲ್ಲಾ ಮುಚ್ಚಿ ಹಾಕುವ ಕೆಲಸವನ್ನು ಮಾಡಿದ್ದಾರೆ. ನಾವು ಅಧಿಕಾರಕ್ಕೆ ಬಂದು 24 ಗಂಟೆಗಳಲ್ಲಿ ಸಿ.ಎಂ.ಸಿದ್ದರಾಮಯ್ಯ ಅವರ ಮೇಲಿನ ಕೇಸುಗಳ ಮರುತನಿಖೆ ನಡೆಸುತ್ತೇನೆ ಎಂದರು.

ಬಿಜೆಪಿ ಸರ್ಕಾರ ಆಡಳಿತದ ಅವಧಿಯಲ್ಲಿ ಬೆಂಗಳೂರು ಗಾರ್ಡನ್ ಸಿಟಿ ಎಂದು ಪ್ರಕ್ಯಾತಿ ಪಡೆದಿತ್ತು. ಆದರೆ ಇಂದು ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಬೆಂಗಳೂರು ರೇಫ್ ಸಿಟಿ, ಮತ್ತು ಕೈಂ ಸಿಟಿ ಎಂದು ಪ್ರಕ್ಯಾತವಾಗಿದೆ ಎಂದು ಹೇಳಿದರು.

ದೇಶದಲ್ಲಿ ನಮ್ಮ ರಾಜ್ಯ ಭ್ರಷ್ಟಾಚಾರದಲ್ಲಿ ನಂಬರ್-1 ಅತ್ಯಾಚಾರದಲ್ಲಿ ನಂಬರ್-02 ಎಂದು ಪ್ರಕ್ಯಾತಿ ಪಡೆದಿದೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ 24 ಹಿಂದುಗಳ ಹತ್ಯೆಯಾಗಿದೆ. 3215 ರೈತರ ಆತ್ಮಹತ್ಯೆ ಹೀಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಿ.ಎಂ.ಸಿದ್ದರಾಮಯ್ಯ ಅವರು ವಿಫಲರಾಗಿದ್ದಾರೆಂದು ವಿವರಿಸಿದರು.

ಕೋಟಿ ರೂ ಹಣವನ್ನು ಮೀಸಲಿಡುವುದಾಗಿ ತಿಳಿಸಿದರು. ಸುಳ್ಳುಭರವಸೆಗಳನ್ನು ನೀಡುವ ದಿವಾಳಿ ಸರ್ಕಾರ ಸಿ.ಎಂ.ಸಿದ್ದರಾಮಯ್ಯನ ಸರ್ಕಾರ. ಬೆಂಗಳೂರಿನಲ್ಲಿ ಮೂಲೆಯ ನಿವೇಶನಗಳನ್ನು ಒತ್ತೆಯಿಟ್ಟು 975 ಕೋಟಿ ಸಾಲ ಪಡೆದಿದೆ. ಮೈಸೂರಿನ ಟಿಬಿಡೆಟ್ ಕಡೆಯಿಂದ ಠೇವಣೆ ಇಟ್ಟಂತ ಹಣವನ್ನು 1400 ಕೋಟಿ ಹಣ ಸಹಕಾರಿ ಸಂಘಗಳ ರೈತರ ಸಾಲವನ್ನು ಮಾಡುತ್ತೇವೆ ಎಂದು ಒತ್ತಾಯ ಪೂರ್ವಕವಾಗಿ ಪಡೆದಿದ್ದಾರೆ.

ಆದರೆ ಪ್ರತಿ ಜಿಲ್ಲೆಗಳಿಗೆ ಹೋಗಿ ನೂರು, ಇನ್ನೂರು ಕೋಟಿ ರೂಗಳ ಯೋಜನೆಗಳನ್ನು ನೀಡುತ್ತೇನೆ ಎಂದು ಜನರಿಗೆ  ಸುಳ್ಳು ಭರವಸೆಗಳನ್ನು ನೀಡುತ್ತಿರುವುದು, ಎಷ್ಟು ಸರಿ ಎಂದು ಪ್ರಶ್ನಿಸಿದರು.. ಒಂದು ಇಲಾಖೆಯಲ್ಲಿಯೂ ಪೂರ್ಣ ಕೆಲಸ ಮಾಡಿಲ್ಲ. ಹಣಕಾಸು ಸಂಪೂರ್ಣ ಕ್ರೂಡಿಕರಿಸುವಲ್ಲಿ ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಕೃಷ್ಣಾನದಿಯ ಆಣೆಕಟ್ಟನ್ನು 519 ಅಡಿಯಿಂದ 524 ಅಡಿಗೆ ವಿಸ್ತರಿಸುವೆ. ನೀರಾವರಿಗೆ ಪ್ರಥಮ ಆಧ್ಯತೆ - ಬಿ.ಎಸ್.ವೈ ಭರವಸೆ :-

ಪರಿವರ್ತನೆ ಯಾತ್ರೆಗೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ ಅವರನ್ನು ಸಮಾರಂಭದಲ್ಲಿ ಭಾಗವಹಿಸಿ ತುಂಗಭಧ್ರ ರೈತ ಸಂಘದ ಅಧ್ಯಕ್ಷರು ಮತ್ತು ಮುಖಂಡರು ಕೃಷ್ಣಾನದಿ, ತುಂಗಭದ್ರಾ ನದಿ ಜೋಡಣೆಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಅವರ ಮನವಿಗೆ ಪ್ರತಿಕ್ರಯಿಸಿದ ಯಡಿಯೂರಪ್ಪ, ಈಗಿರುವ ಕೃಷ್ಣಾನದಿ ಆಣೆಕಟ್ಟು 519 ಅಡಿಗಳಿದ್ದು ಅದನ್ನು 524 ಅಡಿಗಳಿಗೆ ವಿಸ್ತರಿಸುತ್ತೇವೆ. 110 ಕಿ.ಮಿ.ಉದ್ದದ ಪೈಪ್ ಲೈನ್‍ಗಳನ್ನು ಹಾಕಿ ಪೈಪ್ ಮುಖಾಂತರ ನೀರನ್ನು ತರಲಾಗುತ್ತದೆ. ಇದಕ್ಕೆ ಒಂದು ಸಾವಿರ ಕೋಟಿ ಹಣ ಖರ್ಚು ಆಗಬಹುದು. ಈ ಯೋಜನೆಯಿಂದ ಹೈದ್ರಾಭಾದ ಕರ್ನಾಟಕದ 6 ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಮತ್ತು ರೈತರಿಗೆ 2 ರಿಂದ 3 ಬೆಳೆಗೆ ಸಂಪೂರ್ಣ ನೀರನ್ನು ಒದಗಿಸುತ್ತೇನೆ ಎಂದರು.

ಈ ಸಂಧರ್ಭದಲ್ಲಿ ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಸಂಸದ ಶ್ರೀರಾಮುಲು, ಕಂಪ್ಲಿ ಶಾಸಕ ಸುರೇಶ್‍ಬಾಬು, ಜಗದೀಶ್ ಶೆಟ್ಟರ್, ರಾಜ್ಯ ಬಿಜೆಪಿ ಉಸ್ತುವಾರಿ ಮುರಿಳಿಧರ್, ರವಿಕುಮಾರ್, ಮೃತ್ಯುಂಜಯ್ಯ, ಇತರ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250579
Today
Yesterday
This Week
Last Week
This Month
Last Month
All days
9986
16742
76307
4062809
281674
395132
4250579
Your IP: 54.234.190.237
2018-01-18 16:03