Breaking News

ಕಾಂಗ್ರೆಸ್ ಮುಖಂಡ ಪ್ರತಾಪ್ ರೆಡ್ಡಿ ಜೆ.ಡಿ.ಎಸ್. ಸೇರ್ಪಡೆ

Written by 
Published: 05 December 2017
77 times Last modified on Wednesday, 06 December 2017 04:55
ಕಾರ್ಯಕ್ರಮದಲ್ಲಿ ಜೆಡಿಎಸ್.ಮುಖಂಡ ಹೆಚ್.ಡಿ.ದೇವೇಗೌಡ ಹಾಗೂ ಪ್ರಮುಖ ಮುಖಂಡರು ಹಾಜರಿರುವುದು. ಕಾರ್ಯಕ್ರಮದಲ್ಲಿ ಜೆಡಿಎಸ್.ಮುಖಂಡ ಹೆಚ್.ಡಿ.ದೇವೇಗೌಡ ಹಾಗೂ ಪ್ರಮುಖ ಮುಖಂಡರು ಹಾಜರಿರುವುದು.

ಕೆ.ಎನ್.ಪಿ.ವಾರ್ತೆ,ಬಳ್ಳಾರಿ.ಡಿ.05;

ವರದಿ : ಟಿ.ಗಣೇಶ

ಕಾಂಗ್ರೆಸ್ ಮುಖಂಡ ಪ್ರತಾಪ್ ರೆಡ್ಡಿ ಜೆ.ಡಿ.ಎಸ್. ವರಿಷ್ಠ ಹೆಚ್.ಡಿ.ದೇವೆಗೌಡ ಅವರ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಯಾದರು.

ಜೆ.ಡಿ.ಎಸ್. ಪಕ್ಷದ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆಯಲ್ಲಿ ಇಂದು ಹಲವಾರು ಮುಖಂಡರು ಜೆ.ಡಿ.ಎಸ್. ವರಿಷ್ಠ ಹೆಚ್.ಡಿ.ದೇವೆಗೌಡ ಅವರ ನೇತೃತ್ವದಲ್ಲಿ ಜೆ.ಡಿ.ಎಸ್. ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಅವರಿಗೆ ಜೆ.ಡಿ.ಎಸ್. ಧ್ವಜ ನೀಡಿ ಹೆಚ್.ಡಿ.ದೇವೆಗೌಡರು ಪಕ್ಷಕ್ಕೆ ಬರಮಾಡಿಕೊಂಡರು. ಬಳ್ಳಾರಿಯ ಪ್ರಮುಖ ಕಾಂಗ್ರೆಸ್ ಮುಖಂಡ ಪ್ರತಾಪ್ ರೆಡ್ಡಿಯು ಸಹ ಇದೆ ವೇಳೆ ಜೆ.ಡಿ.ಎಸ್.ಪಕ್ಷಕ್ಕೆ ಸೇರ್ಪಡೆಯಾದರು.

ಮಂಗಳವಾರ ನಗರದ ಕಮ್ಮಾ ಭವನದಲ್ಲಿ ಕಾರ್ಯಕರ್ತರ ಮತ್ತು ಪಧಾದಿಕಾರಿಗಳ ಸಭೆ ನಡೆಸಿದ ಬಳಿಕ ಹಲವಾರು ಕಾರ್ಯಕರ್ತರನ್ನು ಪಕ್ಷಕ್ಕೆ ಸ್ವಾಗತಿಸಿದರು. ಸಭೆಯಲ್ಲಿ ಮಾತನಾಡಿದ ಜೆ.ಡಿ.ಎಸ್. ವರಿಷ್ಠ ದೇವೆಗೌಡ ನಾವು ಎಂದು ಜಾತಿ ರಾಜಕಾರಣ ಮಾಡಿಲ್ಲ. ಕುಟುಂಬ ರಾಜಕಾರಣ ಮಾಡಿಲ್ಲ, ನಮ್ಮ ಪಕ್ಷದಲ್ಲಿ ಎಲ್ಲಾ ಕುಲದವರು ಇದ್ದಾರೆ ಹಾಗೂ ಅವರು ನಮ್ಮ ಪಕ್ಷದಲ್ಲಿದ್ದಾಗ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದರು.

ಎಂ.ಪಿ.ಪ್ರಕಾಶ್ ಅವರು ನಮ್ಮ ಪಕ್ಷದಿಂದಲೆ ಉಪಮುಖ್ಯಮಂತ್ರಿಯಾಗಿದ್ದರು. ಅವರು ಲಿಂಗಾಯತ ಸಮುದಾಯದವರು. ಕುಟುಂಬ ರಾಜಕಾರಣ, ಅಪ್ಪ ಮಕ್ಕಳ ಪಕ್ಷ ಎಂದು ಲೇವಡಿ ಮಾಡಿರುವ, ಮಾಡುವವರು ಹಿಂದೆ ನಮ್ಮ ಪಕ್ಷದಿಂದ ಹಲವಾರು ಹುದ್ದೆಗಳನ್ನು ಅಲಂಕರಿಸಿದವರು. ಇಂದು ಬೇರೆಬೇರೆ ಕ್ಷೇತ್ರಗಳಲ್ಲಿ ತಮ್ಮದೇ ಆದ ಸೇವೆಗಳನ್ನು ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಜೆ.ಡಿ.ಎಸ್. ಪಕ್ಷವು ಅತಿ ದೂಡ್ಡ ಪಕ್ಷವಾಗಿ ಹೊರ ಹೊಮ್ಮುತ್ತದೆ. ಜೆ.ಡಿ.ಎಸ್. ಪಕ್ಷವು ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬರುತ್ತದೆ. ನಮ್ಮ ಪಕ್ಷ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಬಳ್ಳಾರಿ ಜೆ.ಡಿ.ಎಸ್. ಪಕ್ಷದ ಹಲವಾರು ಮುಖಂಡರು ಹಾಗೂ ಜೆಡಿಎಸ್ ಹಿರಿಯ ನಾಯಕ ಪಿ.ಜಿ.ಆರ್.ಸಿಂದ್ಯಾ ಉಪಸ್ಥಿತರಿದ್ದರು.

R.K. Toona

"ಸತ್ಯದ ಹುಡುಕಾಟದಲಿ"

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770679
Today
Yesterday
This Week
Last Week
This Month
Last Month
All days
5851
14978
20829
3647859
196906
189062
3770679
Your IP: 54.221.76.68
2017-12-18 08:40