Breaking News

ದಲಿತರ ಬೃಹತ್ ಪ್ರತಿಭಟನೆ ಮುಂಡರಗಿ ಬಂದ್

Written by 
Published: 09 January 2018
218 times Last modified on Wednesday, 10 January 2018 11:50

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಜ.10;

ವರದಿ : ಕೋಗಳಿ ಶೇಖರ್

ಜೀವಂತ ದಹನಕ್ಕೆ ದಲಿತ ಶಾಂತವ್ವ ಬಲಿ : ಸಿಪಿಐ ಅಧಿಕಾರಿ ಎಂ.ವೈ ನಡುವಿನಮನಿ ಅವರನ್ನು ಅಮಾನತ್ತುಗೊಳಿಸಿ, ದಲಿತ ಮಹಿಳೆಗೆ ನ್ಯಾಯಕೊಡಿ. 

ತಾಲೂಕಿನ ಶಿಂಗಟಾಲೂರು ದಲಿತ ಮಹಿಳೆ ಶಾಂತವ್ವ ಎಂಬ ಮಹಿಳೆಯನ್ನು ಪ್ರಕಾಶ ಮುಂಡವಾಡ ಇತರರು ಬೆಂಕಿ ಹಚ್ಚಿದ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು, ಪ್ರಕರಣ ತಿರುಚಿ ಆರೋಪಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಎಫ್.ಐ.ಆರ್ ದಾಖಲಿಸಿದ ಸಿಪಿಐ ಮಂಜುನಾಥ ನಡುವಿನಮನಿ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿ, ದಲಿತ ಸಂಘಟನೆಗಳು ಸೋಮವಾರ ಮುಂಡರಗಿ ಬಂದ್ ಗೆ ಕರೆ ನೀಡಿದ್ದವು.

ಚುನಾವಣೆಯ ಸಂದರ್ಭದಲ್ಲಿ ವೋಟ್‍ಬ್ಯಾಂಕ್ ಉದ್ದೇಶಕ್ಕೆ ದಲಿತರನ್ನು ಬಳಿಸಿಕೊಳ್ಳುವ ರಾಜಕೀಯ ವ್ಯಕ್ತಿಗಳು, ಇಂದು ದಲಿತರನ್ನು ನಿರ್ಲಕ್ಷಿಸುವದು ಖಂಡನೀಯ ಎಂದು ದಲಿತ ಸಂಘಟನೆಗಳು ಪ್ರತಿಭಟನೆಯ ವೇಳೆ ಸರ್ಕಾರ ಮತ್ತು ಪೋಲೀಸ್ ಅಧಿಕಾರಿಗಳ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಿಯ ರಾಜಕಾರಣಿಗಳು ಹಾಗೂ ಜಿಲ್ಲಾಧಿಕಾರಿಗಳು ಶಾಂತವ್ವನ ಕುಟುಂಬಕ್ಕೆ ಸಾಂತ್ವನ ಹೇಳದೆ ನಿರ್ಲಕ್ಷ ತೋರಿರುವುದು ಖಂಡನೀಯ. ಮಂಗಳೂರು ದೀಪಕ್ ರಾವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾವ್ ಕುಟುಂಬಕ್ಕೆ ಸರ್ಕಾರದಿಂದ ಹಣಕಾಸಿನ ನೆರವು ದೊರೆತಿದೆ. ಅದೇ ರೀತಿ ಹಲ್ಲೆಗೊಳಗಾದ ಮಾದರ ಶಾಂತವ್ವನ ಕುಟುಂಬಕ್ಕೆ 25ಲಕ್ಷ ರೂ.ನೀಡಿ, ಸರ್ಕಾರಿ ಉದ್ಯೋಗ ನೀಡಬೇಕು. ಜೊತೆಗೆ ಮುಖ್ಯಮಂತ್ರಿ ಅನುದಾನದಲ್ಲಿ ಸಿಗುವಂತಹ ಸೌಲಭ್ಯ ಸಿಗುವಂತಾಗಬೇಕು.

ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಮನವಿಯನ್ನು ಜಿಲ್ಲಾಧಿಕಾರಿಗಳೇ ಬಂದು ಸ್ವೀಕರಿಸಬೇಕು, ಅಲ್ಲಿಯವರಿಗೆ ಹೋರಾಟ ನಿಲ್ಲುವುದಿಲ್ಲ ಎಂದು ಮಾದಿಗರ ಸಮಾಜದ ರಾಜ್ಯ ಅಧ್ಯಕ್ಷರಾದ ಮೋಹನ್ ಅಲಮೇಕರ್ ಪಟ್ಟು ಹಿಡಿದರು. ಪರಿಸ್ಥಿತಿಗೆ ಮಣಿದ ಜಿಲ್ಲಾಧಿಕಾರಿಗಳು ಮನವಿಯನ್ನು ಸ್ವೀಕರಿಸಿದರು. 

ಶಿಂಗಟಾಲೂರು ಮಾದರ ಶಾಂತವ್ವನ ಸಜೀವ ದಹನಕ್ಕೆ ಕಾರಣರಾದವರನ್ನು ಕೂಡಲೇ ಬಂಧಿಸಿ, ಸುಳ್ಳು ಎಫ್.ಐ.ಆರ್ ಸೃಷ್ಠಿಸಿ ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ ಮುಂಡರಗಿ ಪೋಲೀಸ್ ಠಾಣೆಯ ಸಿಪಿಐ ಮಂಜುನಾಥ ನಡುವಿನಮನಿ ಅವರನ್ನು ಅಮಾನತ್ತು ಮಾಡಬೇಕು ಮತ್ತು ಶಾಂತವ್ವನ ಕುಟುಂಬಕ್ಕೆ ಕಾನೂನಾತ್ಮಕ ನ್ಯಾಯ ಪರಿಹಾರವನ್ನು ದೊರಕಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮುಂಡರಗಿಯಲ್ಲಿ ನಡೆದ ದಲಿತರ ಬೃಹತ್ ಪ್ರತಿಭಟನೆ ಯಶಸ್ವಿಯಾಯಿತು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250544
Today
Yesterday
This Week
Last Week
This Month
Last Month
All days
9951
16742
76272
4062809
281639
395132
4250544
Your IP: 54.234.190.237
2018-01-18 16:01