Breaking News

ಡಿ.16ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ

Written by 
Published: 14 December 2017
53 times Last modified on Thursday, 14 December 2017 08:32

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಡಿ.14;

ವರದಿ : ಮಹಮ್ಮದ್ ಅಬ್ದುಲ್ ರಖೀಬ್ 

ಡಿ.16ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಪ್ರೇರಣಾ ಸಮಾಜ ಸೇವಾ ಸಂಸ್ಥೆ( ಚರ್ಚ ) ಹಾಗೂ ಹಿರಿಯ ನಾಗರಿಕರ ಸಂಘ, ಆಲ್ ಫಾತಿಮ ಸಂಸ್ಥೆ, ಲಯನ್ಸ್ ಮತ್ತು ಲಯನೆಸ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಜಗಳೂರು ಪಟ್ಟಣದ ಪ್ರೇರಣಾ ಚರ್ಚ ಆವರಣದಲ್ಲಿ ಇದೇ ಡಿಸೆಂಬರ್ 16ರಂದು ಬೆಳಗ್ಗೆ 9:30ಕ್ಕೆ "ಉಚಿತ ಆರೋಗ್ಯ ತಪಾಸಣಾ ಶಿಬಿರ" ವನ್ನು ಹಮ್ಮಿಕೊಳ್ಳಲಾಗುವುದು ಎಂದು ಫಾದರ್ ವಿಲಿಯಂ ಮಿರಾಂದ ನಿನ್ನೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಶಿಬಿರದಲ್ಲಿ ಮಧುಮೇಹ ,ಹೃದಯ, ಕೀಲುಮೂಳೆ, ಸ್ತೀರೋಗ ಮತ್ತು ದಂತ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುತ್ತದೆ. ಇನ್ನೂ ವಿಶೇಷವಾಗಿ ಮಹಿಳೆಯರಿಗೆ ಉಚಿತವಾಗಿ ಪ್ಯಾಪ್ಸಮಿಯರ್ ತಪಾಸಣೆ ಮಾಡಲಾಗುತ್ತದೆ. ಮತ್ತು ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಗನುಸಾರ ಮಂಗಳೂರು ಯೇನಪೋಯ ಆಸ್ಪತ್ರೆಗೆ  ಹೋಗಬಹುದಾಗಿದೆ. ಹೋಗುವವರಿಗೆ ಯೇನಪೋಯ ಆಸ್ಪತ್ರೆ ವತಿಯಿಂದ ಗ್ರೀನ್ ಕಾರ್ಡ್ ಕೊಡಲಾಗುತ್ತದೆ. ಇದನ್ನು ಪಡೆದವರಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ, ರಕ್ತ ತಪಾಸಣೆ, ಹಾಸಿಗೆ, ಮತ್ತು ಊಟದ ವ್ಯವಸ್ಥೆ ಮಾಡಲಾಗುತ್ತದೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಜೆ.ಎನ್. ವಿಠಲ್ ಶ್ರೇಷ್ಠ , ಉಪಾಧ್ಯಕ್ಷ ಮಹದೇವಗೌಡ, ಸಹಕಾರ್ಯದರ್ಶಿ ಎಸ್.ಹೆಚ್. ಶಿವಣ್ಣ ಶ್ರೇಷ್ಠ, ಖಜಂಚಿ ತಿಮ್ಮಣ್ಣ , ಸದಸ್ಯರಾದ ಉಬೇದುಲ್ಲಾ , ರಂಗಣ್ಣ , ಚಂದ್ರಪ್ಪ , ಮತ್ತು ಆಲ್ ಫಾತಿಮ ಸಂಸ್ಥೆ ಕಾರ್ಯದರ್ಶಿ ಶಾಹೀನ ಬೇಗಂ, ನಿರ್ದೇಶಕ ಶಂಶುದ್ದೀನ್  ಹಾಜರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4274354
Today
Yesterday
This Week
Last Week
This Month
Last Month
All days
789
15484
100082
4062809
305449
395132
4274354
Your IP: 54.167.126.106
2018-01-20 01:16