Breaking News

ಡಾ.ಅನ್ನಪೂರ್ಣಮ್ಮ ರವರ ವರದಿ ಜಾರಿಗೆ ತರುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ

Written by 
Published: 09 October 2017
53 times Last modified on Monday, 09 October 2017 15:55

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಅ.09;

ಮಡಿವಾಳ ಸಮಾಜದ ವತಿಯಿಂದ ಡಾ.ಅನ್ನಪೂರ್ಣಮ್ಮ ರವರ ವರದಿ ಜಾರಿಗೆ ತರುವಂತೆ ಆಗ್ರಹಿಸಿ ಇಂದು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಗಂಗಾವತಿ ನಗರದಲ್ಲಿಂದು ತಾಲ್ಲೂಕಿನ ಶ್ರೀ ಮಡಿವಾಳ ಮಾಚಿದೇವ ವಿಶ್ವಸ್ಥ ಮಂಡಳಿ ಟ್ರಸ್ಟ್ (ರಿ) ವತಿಯಿಂದ ಮಡಿವಾಳ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಡಾ.ಅನ್ನಪೂರ್ಣಮ್ಮ ರವರ ವರದಿ ಜಾರಿಗೆ ತರುವಂತೆ ಆಗ್ರಹಿಸಿ ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು  ಸಮಾಜದ ಮುಖಂಡರು ಹಾಗೂ ವೆಂಕಟಗಿರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ರುದ್ರಪ್ಪ ಆರಾಳರವರು ತಿಳಿಸಿದರು.

ಪ್ರತಿಭಟನಾ ಮೆರವಣಿಗೆಯು ನಗರದ ಶ್ರೀ ಮಡಿವಾಳ ಮಾಚಿದೇವ ದೇವಸ್ಥಾನದಿಂದ  ಶ್ರೀ ಕೃಷ್ಣ ದೇವರಾಯ ವೃತ್ತದವರೆಗೆ ಸಾಗಿತು. ತಾಲೂಕಿನ ಉಪ ತಹಸೀಲ್ದಾರರಿಗೆ ಡಾ.ಅನ್ನಪೂರ್ಣಮ್ಮ ರವರ ವರದಿ ಜಾರಿಗೆ ತರುವಂತೆ ಮನವಿ ಸಲ್ಲಿಸಿದರು. ಈ ವೇಳೆ ತಾಲೂಕು ಅಧ್ಯಕ್ಷ  ಶೇಖರಯ್ಯ ಸ್ವಾಮಿ, ಕಾರ್ಯದರ್ಶಿ ರಮೇಶ, ಮುಖಂಡರಾದ ನಾಗಣ್ಣ, ಬಸವರಾಜ ಹೇರೂರು, ಪಂಪಣ್ಣ ಮರುಕುಂಬಿ, ಹುಚ್ಚಪ್ಪ ನಿವೃತ್ತ ಪೋಲಿಸ್, ನಟರಾಜ ನವಲಿ ನಿವೃತ್ತ ಪೋಲಿಸ್ ಹಾಗೂ ಮಡಿವಾಳ ಸಮಾಜದ ಹಿರಿಯರು,   ಮತ್ತು ಸಮಾಜದ ಮುಖಂಡರು ಭಾಗವಹಿಸಿದ್ದರು.

shivakumar h

There is will There is way 

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770939
Today
Yesterday
This Week
Last Week
This Month
Last Month
All days
6111
14978
21089
3647859
197166
189062
3770939
Your IP: 54.221.76.68
2017-12-18 09:02