Breaking News

ಡ್ರಾಪ್ ಕೊಡುವ ನೆಪವೊಡ್ಡಿ ಶಾಲಾಬಾಲಕಿ ಅಪಹರಣ

Written by 
Published: 05 January 2018
43 times Last modified on Friday, 05 January 2018 11:20

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಜ.05;

ವರದಿ : ಟಿ.ಗಣೇಶ

ಇತ್ತೀಚೆಗೆ ಆರು ವರ್ಷದ ಶಾಲಾ ಬಾಲಕಿಯನ್ನು ಅಪಹರಿಸಿದ ಘಟನೆ ನಡೆದಿದೆ.

ಡ್ರಾಪ್ ಕೊಡುವ ನೆಪ ಹೇಳಿ, ಅಪರಿಚಿತ ವ್ಯಕ್ತಿಯೊಬ್ಬ 6ವರ್ಷದ ಶಾಲಾ ಬಾಲಕಿಯನ್ನು ಅಪಹರಿಸಿದ್ದಾನೆ. ಈ ಘಟನೆ ಬಳ್ಳಾರಿ ತಾಲೂಕಿನ ಕಪಗಲ್ಲು ಗ್ರಾಮದಲ್ಲಿ ನಡೆದಿದೆ. ಆದರೆ ಬಾಲಕಿ ಯಾವುದೇ ತೊಂದರೆಗೊಳಗಾಗದೆ ಪೋಷಕರ ಮಡಿಲು ಸೇರಿದ್ದು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

 

 

ಘಟನೆ ವಿವರ :

ಬಳ್ಳಾರಿ ತಾಲೂಕಿನ ಸಿರಿವಾರ ಗ್ರಾಮದ ಜೀವನ್ ಮತ್ತು ಸುನೀತಾ ದಂಪತಿಯ 6ವರ್ಷದ ಬಾಲಕಿ ನಿಹಾರಿಕಾ, ಎರಡು ದಿನಗಳ ಹಿಂದೆ, ಕಪಗಲ್ ಗ್ರಾಮದಿಂದ ಸಿರಿವಾರಕ್ಕೆ ಶಾಲೆಯಿಂದ ಹಿಂದಿರುಗುವ ಸಂದರ್ಭದಲ್ಲಿ, ಡ್ರಾಪ್ ಕೊಡುವ ನೆಪದಲ್ಲಿ ಇಬ್ಬರು ಶಾಲಾ ಮಕ್ಕಳನ್ನು ಅಪರಿಚಿತ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನದ ಮೇಲೆ ಕೂರಿಸಿಕೊಂಡು ಹೋಗಿ, ಸ್ವಲ್ಪ ದೂರ ತೆರಳಿ, ಒಂದು ಮಗುವನ್ನು ವಾಹನದಿಂದ ಕೆಳಗಿಳಿಸಿ. ನಿಹಾರಿಕಳನ್ನು ಅಪಹರಿಸಿಕೊಂಡು ಪರಾರಿಯಾಗಿದ್ದ. ಮಕ್ಕಳನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದ ಚಿತ್ರ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. 

ಘಟನೆ ಸಂಭವಿಸಿದ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಕೂಡಲೆ ಪೋಲಿಸರ ಗಮನಕ್ಕೆ ಪ್ರಕರಣವನ್ನು ತಂದಿದ್ದಾರೆ. ಬಳ್ಳಾರಿಯ ಗ್ರಾಮೀಣ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದರಿಂದ ಗ್ರಾಮೀಣ ಠಾಣಾ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಕೂಡಲೇ ಪೋಷಕರಿಗೆ ಬಾಲಕಿ ಅಪಹರಣವಾಗಿರುವುದನ್ನು ಅವರ ಗಮನಕ್ಕೆ ತಂದಿದ್ದಾರೆ.

ಬಳ್ಳಾರಿಯ ಗ್ರಾಮಾಂತರ ಪ್ರದೇಶದಲ್ಲಿರುವ ಸಿರಿವಾರ ಗ್ರಾಮದ ಹತ್ತಿರವಿರುವ ಸುರಭಿ ಬಾರ್ ನ ಹತ್ತಿರ ಬಾಲಕಿ ಅಪಹರಣ ನಡೆದಿದ್ದು, ಅಪಹರಣಕಾರ ಬಾಲಕಿಯನ್ನು ಅಪಹರಿಸಿ ಆಂಧ್ರದ ಓಬಳಾಪುರಂ ಹತ್ತಿರ ಬಿಟ್ಟು ಹೋಗಿದ್ದಾನೆ. ಇದುವರೆಗೂ ಅಪಹರಣಕಾರನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಮತ್ತು ಘಟನೆ ಕಾರಣವು ತಿಳಿದುಬಂದಿಲ್ಲ.

ಆಂಧ್ರದ ಓಬಳಾಪುರಂ ಹತ್ತಿರ ಬಾಲಕಿಯಿರುವುದನ್ನು ಪತ್ತೆ ಹಚ್ಚಿದ ಪೋಲೀಸರು ಕೂಡಲೇ ಬಾಲಕಿಯನ್ನು ರಕ್ಷಿಸಿದ್ದು, ಬಾಲಕಿಯನ್ನು ವೈಧ್ಯಕೀಯ ಪರೀಕ್ಷೆಗೊಳಪಡಿಸಿದ ಬಳಿಕ ಪೋಷಕರಿಗೆ ಬಾಲಕಿಯನ್ನು ಒಪ್ಪಿಸಲಾಗಿದೆ ಎಂದು ಎಸ್.ಪಿ. ಆರ್.ಚೇತನ್ ಸುದ್ದಿಗಾರರಿಗೆ ಹೇಳಿದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250341
Today
Yesterday
This Week
Last Week
This Month
Last Month
All days
9748
16742
76069
4062809
281436
395132
4250341
Your IP: 54.234.190.237
2018-01-18 15:49