Breaking News

ಇಬ್ಬರು ಶಂಕಿತ ಗೌರಿ ಹಂತಕರನ್ನು ವಶಕ್ಕೆ ಪಡೆದ ಪೊಲೀಸರು

Written by 

ಕೆ.ಎನ್.ಪಿ.ವಾರ್ತೆ,ಹುಬ್ಬಳ್ಳಿ, ಅ.1;

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಗೌರಿ ಹತ್ಯೆಗೆ ಬಳಸಲಾದ ಪಿಸ್ತೂಲ್ ವಿಜಯಪುರದಿಂದ ರವಾನೆಯಾಗಿದೆ ಎಂಬ ಮಾಹಿತಿ ದೊರೆತಿದ್ದು, ಗುಮ್ಮಟ್ಟನಗರಿಗೆ ದೌಡಾಯಿಸಿರುವ ಎಸ್‍ಐಟಿ ತಂಡದ ವಿಶೇಷ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಜಯಪುರದಿಂದ ಪಿಸ್ತೂಲ್ ರವಾನೆಯಾಗಿದೆ ಎಂಬ ಮಾಹಿತಿ ಬಹಿರಂಗಗೊಳ್ಳುತ್ತಿದ್ದಂತೆ ಹತ್ಯೆ ಹಿಂದೆ ಕಲಬುರ್ಗಿ ಹಂತಕರ ಕೈವಾಡವಿರಬಹುದೆಂಬ ಶಂಕೆ ತೀವ್ರಗೊಂಡಿದೆ.

ವಿಜಯಪುರದಲ್ಲಿ ಬೀಡು ಬಿಟ್ಟಿರುವ ಎಸ್‍ಐಟಿಯ ಒಂದು ತಂಡ ಪಿಸ್ತೂಲು ರವಾನೆಯಾದ ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕುತ್ತಿದೆ. ಬೆಂಗಳೂರು ಅಪರಾಧ ವಿಭಾಗದ ಡಿಸಿಪಿ ಜೀನೇಂದ್ರ ಖನಗಾವಿ ನೇತೃತ್ವದ ತಂಡ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದೆ. ಸೆ.5ರಂದು ಗೌರಿ ಲಂಕೇಶ್ ಹತ್ಯೆ ನಡೆದಿತ್ತು.


 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3750328
Today
Yesterday
This Week
Last Week
This Month
Last Month
All days
478
13442
102469
3588738
176555
189062
3750328
Your IP: 23.22.136.56
2017-12-17 00:40