Breaking News

ಎರಡನೇ ದಿನ ಪೂರೈಸಿದ 2ನೇ ಉಚಿತ ರಂಗ ತರಬೇತಿ ಶಿಬಿರ

Written by 
Published: 21 November 2017
37 times Last modified on Tuesday, 21 November 2017 15:35

ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.21;

ಎರಡನೇ ದಿನ ಯಶಸ್ವಿಯಾಗಿ ಪೂರೈಸಿದ 2ನೇ ಉಚಿತ ರಂಗ ತರಬೇತಿ ಶಿಬಿರ.

ನಗರದ ಎಪಿಎಂಸಿ ಯ ರೈತ ಮಾರಾಟ ಭವನದಲ್ಲಿ ದೀಪ ಸಮಾಜ ಸೇವ ಕೇಂದ್ರದ ಏರ್ಪಡಿಸಿದ್ದ 2ನೇ ಉಚಿತ ರಂಗ ತರಬೇತಿ ಶಿಬಿರವು ಎರಡನೇ ದಿನವಾದ ಇಂದು ಬೆಳಿಗ್ಗೆ 7.30 ರಿಂದಲೇ ತರಬೇತಿ ಪ್ರಾರಂಭವಾಯಿತು. ಶಿಬಿರಾರ್ಥಿಗಳಿಗೆ ಧ್ವನಿ ಏರಿಳಿತಗಳು, ದೇಹ ಚಲನೆ, ಭಾಷೆ, ಸ್ಪಾಟ್ ಇಂಪ್ರ್ಯೂವೈಜೇಷನ್ ಬಗ್ಗೆ ತಿಳಿಸಲಾಯಿತು. ಒಂದು ಪರಿಕರವನ್ನು ಬೇರೆ ಬೇರೆ ರೀತಿಯಲ್ಲಿ ಬಳಸುವ ಕ್ರಿಯೆಯ ಕುರಿತು ಪ್ರಯೋಗಾತ್ಮಕವಾಗಿ ತರಬೇತಿ ನೀಡಲಾಯಿತು ಮಕ್ಕಳಿಂದ ಉತ್ತಮ  ಪ್ರತಿಕ್ರಿಯೆ ವ್ಯಕ್ತವಾಯಿತು.

ನಂತರ ಶಿಬಿರಾರ್ಥಿಗಳಿಗೆ ಪಿ.ಯು.ಸಿ. ಪಠ್ಯದ ಪಿ.ಲಂಕೇಶರ  “ಮುಟ್ಟಿಸಿಕೊಂಡವನು” ನಾಟಕದ ತಾಲೀಮು ನಡೆಸಲಾಯಿತು. ಜೊತೆಗೆ ರಮೇಶ ಗಬ್ಬೂರು ರವರು ರಂಗ ಗೀತೆಗಳನ್ನು ಹಾಡುವ ಬಬೆ ಕುರಿತು ಮಕ್ಕಳಿಗೆ ತರಬೇತಿ ನೀಡಿದರು. ಮತ್ತು ನಾಟಕಕ್ಕೆ ಬೇಕಾಗಿರುವ ಗೀತೆಗಳಿಗೆ ರಾಗ ಸಂಯೋಜನೆ ಮಾಡಿದರು. ರಾಗ ಸಂಯೋಜನೆ ಮೂಲಕ ಶಿಬಿರಾರ್ಥಿಗಳಿಗೆ ಭಾವಾಭಿವ್ಯಕ್ತಿಯನ್ನು ಮೂಡಿಸುವ ಕ್ರಿಯೆ ಬಹಳ ಅದ್ಬುತವಾಗಿ ಮೂಡಿ ಬಂತು.

ಈ ವೇಳೇ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ತೂನ ಹಾಗೂ ಕಾರ್ಯದರ್ಶಿ ಲಾವಣ್ಯ ಮಲಪನಗುಡಿ ಮುಂತಾದವರು ಉಪಸ್ಥಿತರಿದ್ದರು

 

R.K. Toona

"ಸತ್ಯದ ಹುಡುಕಾಟದಲಿ"

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770795
Today
Yesterday
This Week
Last Week
This Month
Last Month
All days
5967
14978
20945
3647859
197022
189062
3770795
Your IP: 54.221.76.68
2017-12-18 08:50