Breaking News

ಗವಿಮಠ ಜಾತ್ರೆಗೆ ರೊಟ್ಟಿ ಸೇವೆ

Written by 
Published: 02 January 2018
43 times Last modified on Tuesday, 02 January 2018 08:57

ಕೆ.ಎನ್.ಪಿ.ವಾರ್ತೆ,ನವಲಿ,ಜ.02;

ವರದಿ : ನವಲಿ ಸ್ವಾಮಿ

ಕೊಪ್ಪಳ ಶ್ರೀ ಗವಿಮಠ ಜಾತ್ರೆಗೆ ರೊಟ್ಟಿ ಸೇವೆ ಸಲ್ಲಿಸಲಾಯಿತು.

ನಗರದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಮಹಾದಾಸೋಹಕ್ಕೆ ಧವಸ, ಧಾನ್ಯಗಳು ಶ್ರೀಗವಿಮಠಕ್ಕೆ ಹರಿದುಬರುತ್ತಲಿವೆ. ಅಂತೆಯೇ, ನವಲಿ ಗ್ರಾಮದ ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ್  ಯುವಕ  ಸಂಘದ ವತಿಯಿಂದ ನಾಳೆ ಜರಗುವ ಸುಪ್ರಸಿದ್ದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ 2000 ಸಾವಿರ ರೊಟ್ಟಿ ಸೇವೆಯನ್ನು ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷರಾದ ಶ್ರೀ ಹುಲಗಪ್ಪ ಭೋವಿ, ಕಾರ್ಯದರ್ಶಿ ಸಿದ್ದರಾಮೇಶ ಭೋವಿ ಪೂಜೆ ಸಲ್ಲಿಸುವ ಮುಖಾಂತರ ಸಂಗ್ರಹಗೊಂಡ ರೊಟ್ಟಿಗಳನ್ನು ಶ್ರೀಮಠಕ್ಕೆ ಕಳುಹಿಸಿಕೊಟ್ಟರು. ಬಳಿಕ ಮಾತನಾಡಿದ ಅವರು, ಪ್ರತಿ ವರ್ಷ ನಮ್ಮ ಸಂಘದ ವತಿಯಿಂದ ಸಾದ್ಯವಾದಷ್ಟು ಶ್ರೀ ಗವಿಮಠದ ಜಾತ್ರಾ ದಾಸೋಹಕ್ಕೆ ಸಮರ್ಪಣೆ ಮಾಡುತ್ತೇವೆ. ಶ್ರೀ ಗವಿಸಿದ್ದೇಶ್ವರನ ಆರ್ಶೀವಾದ ಸದಾ ನಮ್ಮೂರಿಗೆ ಇರಲಿ ಎಂದರು.

ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಪಂಚಯ್ಯ ಸ್ವಾಮಿ, ಜಡಿಯಪ್ಪ ಮುಕ್ಖುಂದಿ, ಪಿ ಡಿ ನಾಯ್ಕ, ಭೀಮಣ್ಣ ನರಹರಿ, ಪ್ಯಾಟೆಪ್ಪ ನಾಯಕ, ರಾಮಣ್ಣ ಬಜಾರ್ ಮತ್ತು ಭೋವಿ (ವಡ್ಡರ ) ಯುವಕ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250495
Today
Yesterday
This Week
Last Week
This Month
Last Month
All days
9902
16742
76223
4062809
281590
395132
4250495
Your IP: 54.234.190.237
2018-01-18 15:58