Breaking News

ಗವಿಮಠದ ಅಜ್ಜನ ಜಾತ್ರೆಗೆ ಪ್ರಸಾದ ದಾಸೋಹ ಸೇವೆ 

Written by 
Published: 02 January 2018
264 times Last modified on Tuesday, 02 January 2018 09:38

ಕೆ.ಎನ್.ಪಿ.ವಾರ್ತೆ,ಹಗರಿಬೊಮ್ಮನಹಳ್ಳಿ,ಜ.02;

ವರದಿ : ಕೋಗಳಿ ಶೇಖರ್ 

ಶ್ರೀ ಕ್ಷೇತ್ರ ಕೊಪ್ಪಳ ಗವಿಸಿದ್ದೇಶ್ವರ ಸ್ವಾಮಿಯ ಜಾತ್ರೆಯ ಪ್ರಯುಕ್ತ , ಉಪ್ಪಾರಗಟ್ಟಿಯ ಭಕ್ತ ಸಮೂಹ ನಿನ್ನೆ ಶ್ರೀ ಮಠಕ್ಕೆ ಪ್ರಸಾದ ದಾಸೋಹ ಸೇವೆಯನ್ನು ಸಲ್ಲಿಸಿದರು. 

ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ತಾಲೂಕಿನ ಉಪ್ಪಾರಗಟ್ಟಿ ಭಕ್ತ ಸಮೂಹವು, ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಸಂಸ್ಥಾನ ಗವಿಮಠದ ಸಾನಿಧ್ಯಕ್ಕೆ, ಸುಮಾರು ಎಂಟು ವರ್ಷಗಳಿಂದ ತಮ್ಮ ಹರಕೆಯನ್ನು ಪಾದಯಾತ್ರೆಯ ಮೂಲಕ ಭಕ್ತಿ ಪೂರ್ವಕವಾದ ಸೇವೆಯನ್ನು ಸಲ್ಲಿಸುತ್ತ ಬಂದಿದ್ದು, ಪ್ರತಿ ವರ್ಷದಂತೆ ಈ ವರ್ಷವು ಗ್ರಾಮದ ಸಕಲಭಕ್ತರಿಂದ ಸುಮಾರು ಎರಡು ಕ್ವಿಂಟಲ್ ಶೇಂಗಾಪುಡಿ, ಹನ್ನೊಂದು ಸಾವಿರ ರೊಟ್ಟಿ, ವಿವಿಧ ತರಕಾರಿಗಳು ಸೇರಿದಂತೆ ಪ್ರಸಾದಕ್ಕ ಬೇಕಾಗುವಂತಹ ಅಡುಗೆ ಪದಾರ್ಥಗಳನ್ನು ಗವಿಮಠಕ್ಕೆ ಕೊಡಲಾಯಿತು.

ಗ್ರಾಮದಲ್ಲಿನ ತಾಯಂದಿರು ಜೋಳದರೊಟ್ಟಿ, ಪುಡಿಗಳನ್ನು ಮನೆಗಳಲ್ಲಿ ತಯಾರಿಸಿ, ತಮ್ಮ ಸೇವೆಯನ್ನು ಪಾದಯಾತ್ರೆಯ ಮೂಲಕ ಅರ್ಪಿಸಿದರು.

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250485
Today
Yesterday
This Week
Last Week
This Month
Last Month
All days
9892
16742
76213
4062809
281580
395132
4250485
Your IP: 54.234.190.237
2018-01-18 15:58