Breaking News

ಗವಿಸಿದ್ದೇಶ್ವರ ಪುರಾಣ ಕಾರ್ಯಕ್ರಮ

Written by 
Published: 20 November 2017
173 times Last modified on Monday, 20 November 2017 12:50

ಕೆ.ಎನ್.ಪಿ.ವಾರ್ತೆ,ಹಗರಿಬೊಮ್ಮನಹಳ್ಳಿ,ನ.20;

ವರದಿ : ಕೋಗಳಿ ಶೇಖರ್

ಗವಿಸದ್ದೇಶ್ವರ ಪುರಾಣ ಕಾರ್ಯಕ್ರಮ ನಿನ್ನೆ ನೆರವೇರಿತು.

ಹಗರಿಬೊಮ್ಮನಹಳ್ಳಿ ತಾಲೂಕಿನ ಉಪ್ಪಾರಗಟ್ಟಿ ಗ್ರಾಮದ ಶಂಕರಲಿಂಗೇಶ್ವರ ಸ್ವಾಮಿ ಕಾರ್ತಿಕೋತ್ಸವದ ನಿಮ್ಮಿತ್ಯ, ಗವಿಸದ್ದೇಶ್ವರ ಪುರಾಣ ಕಾರ್ಯಕ್ರಮವು, ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಮಠ ಕೊಪ್ಪಳ ಇವರ ಕೃಪಾ ಆಶೀರ್ವಾದದಿಂದ ನಿನ್ನೆ ಸಂಜೆ 7.30ಕ್ಕೆ ಶಂಕರಲಿಂಗಸ್ವಾಮಿ ಟ್ರಸ್ಟ್ ಉಪ್ಪಾರಗಟ್ಟಿ ಮತ್ತು ಗ್ರಾಮದ ಸದ್ಭಕ್ತ ಮಂಡಳಿಯವರ ಸಹಯೋಗದಲ್ಲಿ ಪುರಾಣ ಕಾರ್ಯಕ್ರಮ ಭಕ್ತಿಯಿಂದ ನೇರವೇರಿತು.

ಪುರಾಣ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ|| ಹಿರೇಶಾಂತವೀರ ಮಹಾಸ್ವಾಮಿಗಳು (ಗವಿಸಿದ್ದೇಶ್ವರ ಶಾಖಾ ಮಠ ಹೊವಿನ ಹಡಗಲಿ) ನೆರವೇರಿಸಿಕೊಟ್ಟರು. ನೆರೆದ ಭಕ್ತರಿಗೆ, ಹಾಗೂ ಗುರುಹಿರಿಯರಿಗೆ ಶರಣು ಶರಣಾರ್ಥಿಗಳನ್ನು ಹೇಳಿ ನಂತರ ಮಾತನಾಡಿದ ಅವರು, ಸಮಾಜದಲ್ಲಿ ಧರ್ಮವನ್ನು ಅಪ್ಪಿಕೊಂಡು ಮತ್ತು ಒಪ್ಪಿಕೊಂಡು, ಸತ್ಯವಂತನಾಗಿ, ನೀತಿವಂತನಾಗಿ, ಜ್ಞಾನವಂತನಾಗಿ ಬದಕನ್ನು ಸಾಗಿಸಬೇಕು. ಗುರುವಿನ ಅಪ್ಪಣೆಯನ್ನು ಪರಿಪಾಲನೆ ಮಾಡಿದಾಗ ಮಾತ್ರ ಮನಷ್ಯ ದೇವನಾಗಲು ಸಾಧ್ಯ. ಹಾಗೂ ಇತಿಹಾಸದಲ್ಲೇ ಕೋಳಿ ಸಾಕದ ಗ್ರಾಮ ಅಂದ್ರೇ ಉಪ್ಪಾರಗಟ್ಟಿ, ಕಾರಣ ಇಲ್ಲಿ ಗುರುವಿನ ಗುಣ ಅರಿತ ಭಕ್ತರ ಶ್ರದ್ಧೆ ಮತ್ತು ಕೊಪ್ಪಳ ಗುರುಶಾಂತವೀರ ಮಹಾಸ್ವಾಮಿಗಳ ಗುರು ಆಜ್ಞೆಯನ್ನು ಪರಿಪಾಲನೆ ಮಾಡಿದ ಗಟ್ಟಿ ಊರು ಇದಾಗಿದೆ ಎಂದರು.

ಏತಾನ್ಮಧ್ಯ ಶಿವಶಾಂತ ಮಹಸ್ವಾಮಿಗಳು, ಶಂಬುಲಿಂಗ ಮಹಾಸ್ವಾಮಿಗಳ, ಮಹಾಶಿವಯೋಗಿಗಳ ಹಾಗೂ ಶಿಶುನಾಳ ಶರೀಫರ ಮತ್ತು ಅಧುನಿಕ ಕಾಲದ ಸಕ್ಕರೆ ಕರಡೆಪ್ಪರ ಧರ್ಮ,ಭಕ್ತಿ, ಭಾವನೆಯನ್ನು, ಗುರು ಸೇವೆ, ಗುರುವಿನ ಮಹಿಮೆ, ಮತ್ತು ಪವಾಡ ಪುರುಷರ ನೆನದು ಭಕ್ತ ಸಮೂಹಕ್ಕೆ ಆಶೀರ್ವದಿಸಿದರು.

ಶಿವಲಿಂಗ ರುದ್ರಮುನಿ ಶಿವಾಚಾರ್ಯಸ್ವಾಮಿಗಳು ನವಲಿ ಹಿರೇಮಠ ಹಂಪಸಾಗರ ಹಾಗೂ ಮಹೇಶ್ವರ ಸ್ವಾಮಿಗಳು, ಪುಣ್ಯಕ್ಷೇತ್ರ ನಂದೀಪುರ ಪೂಜ್ಯರಿಂದ ಪುರಾಣಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ, ಭಕ್ತ ಸಮೂಹಕ್ಕೆ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ದೇವರಲ್ಲಿ ಭಕ್ತಿಯಿಂದ ಲೀನವಾದರೆ ದೇವರು ನಮ್ಮನ್ನು ಕೈ ಬಿಡುವುದಿಲ್ಲ. ಹಾಗೂ ಧಾರ್ಮಿಕವಾಗಿ ಹೇಗೆ ಬಾಳಿ ಬದುಕಬೇಕು ಎನ್ನುವದನ್ನು ಪ್ರವಚಿಸಿದರು.

ಈ ಗ್ರಾಮ ದೈವತ್ವದ ನೆಲೆಯ ಬೀಡಾಗಿದೆ. ಇಲ್ಲಿ ಶಂಕರಲಿಂಗ ಮಹಾಸ್ವಾಮಿಯ ದೇವಸ್ಥಾನ, ಆಂಜನೇಯ ಸ್ವಾಮಿ ಮತ್ತು ದುರ್ಗಾದೇವಿ ದೇವರ ಮಹಿಮೆ ಅಗಾಧವಾದ ನಂಬಿಕೆ ಮತ್ತು ಭಕ್ತಿ ಪ್ರೀತಿ ಪಾತ್ರರಾಗಿದ್ದಾರೆ. ಹಾಗಾಗಿ ಈ ದೇವಾಲಯಗಳು ಪ್ರಭಾವಿ. ಈ ಗ್ರಾಮದ ಜನತೆ ಇಟ್ಟಂತ ದೇವರ ಮೇಲಿನ ನಂಬಿಕೆ, ಸಮುದಾಯಗಳಲ್ಲಿ ಸಾಮಾಜಿಕ,ಧಾರ್ಮಿಕ,ರಾಜಕೀಯ ಸಮಸ್ಯೆಗಳು, ಗಲಾಟೆ ಗಲಭೆಗಳನ್ನು ಬಗೆಹರಿಸುವ “ನ್ಯಾಯ ಪೀಠ” ಅಂತ ಹೇಳಬಹುದು. ನ್ಯಾಯ ನೀಡಿದ ಬಳಿಕ ನ್ಯಾಯವನ್ನು ಯಾರಾದರು ನ್ಯಾಯ ತಿರಿಚಿದರೆ ಶಂಕರಲಿಂಗಸ್ವಾಮಿ ಕ್ಷಮಿಸುವುದಿಲ್ಲ ಎಂಬುದು ಭಯ ಭಕ್ತಿಯ ನಂಬಿಕೆ ಇಲ್ಲಿಯದಾಗಿದೆ.

ಇಲ್ಲಿಯ ಜನ ಯಾವುದೇ ಕಾರ್ಯ ನಡೆದರೆ ದೇವರಿಗೆ ಪ್ರಸಾದ ವಿನಿಯೋಗಿಸಿದ ಮೇಲೆ ಮುಂದಿನ ಕಾರ್ಯ ವೈಕರಿಗಳನ್ನು ಮಾಡುವರು. ಇಲ್ಲಿ ಜಾತಿ ಬೇಧವಿಲ್ಲ, ಎಲ್ಲರು ಒಂದೇ ಎಂಬ ಭಾವನೆ. ಗ್ರಾಮದ ಧಾರ್ಮಿಕ ಕಾರ್ಯಕ್ರಮಗಳನ್ನು, ಹಬ್ಬಹರಿದಿನಗಳನ್ನು ಭಕ್ತಿ ಭಾವದಿಂದ ಆಚರಿಸುವರು. ಜೊತೆಗೆ ನೂತನವಾಗಿ ಶಂಕರಲಿಂಗಸ್ವಾಮಿ ದೇವಸ್ಥಾನ ಜೀರ್ಣೋದ್ಧಾರದ ಕಾರ್ಯ ಭಕ್ತರ ದೇಣಿಗೆಯ ಸಹಾಯದ ಮೂಲಕ ನಡೆಯುತ್ತದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಶಂಕರಲಿಂಗ ಟ್ರಸ್ಟ್ ಉಪ್ಪಾರಗಟ್ಟಿ ಇವರು ನಡೆಸಿಕೊಂಡು ಬರುತ್ತಾರೆ. ಜೊತೆಗೆ ಗ್ರಾಮದ ಎಲ್ಲ ಭಕ್ತಸಮುದಾಯವು ಭಾಗವಹಿಸುತ್ತದೆ ಎಂದು ಸುದ್ದಿ ಮೂಲಗಳಿಂದ ತಿಳದು ಬಂದಿದೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770802
Today
Yesterday
This Week
Last Week
This Month
Last Month
All days
5974
14978
20952
3647859
197029
189062
3770802
Your IP: 54.221.76.68
2017-12-18 08:50