Breaking News

ಗವಿಸಿದ್ಧೇಶ್ವರ ಸ್ವಾಮಿಯ ಶಿಶುನಾಮಕರಣ

Written by 
Published: 24 November 2017
175 times Last modified on Friday, 24 November 2017 10:14

ಕೆ.ಎನ್.ಪಿ.ವಾರ್ತೆ,ಹಗರಿಬೊಮ್ಮನಹಳ್ಳಿ,ನ.24;

ವರದಿ : ಕೋಗಳಿ ಶೇಖರ

ಉಪ್ಪಾರಗಟ್ಟಿಯಲ್ಲಿ ಶಂಕರಲಿಂಗೇಶ್ವರ ಕಾರ್ತಿಕೋತ್ಸವದ ಪ್ರಯುಕ್ತ ಗವಿಸಿದ್ದೇಶ್ವರ ಸ್ವಾಮಿಯ ಸತತ ಹನ್ನೊಂದು ದಿನದ ಪುರಾಣ ಕಾರ್ಯಕ್ರಮದ ಮೂರನೇ ದಿನವಾದ ಮಂಗಳವಾರ ಗವಿಸಿದ್ದೇಶ್ವರ ಸ್ವಾಮಿಗೆ “ಗುಡದಯ್ಯ” ಎಂದು ಶಿಶುನಾಮಕರಣ ಮಾಡಲಾಯಿತು.

ಗವಿಸಿದ್ದೇಶ್ವರರ ಶಿಶುನಾಮಕರಣದ ಈ ಧಾರ್ಮಿಕ ಪುರಾಣ ಕಾರ್ಯಕ್ರಮ್ಮಕ್ಕೆ ಸೋಮಶಂಕರಸ್ವಾಮಿಗಳು (ಗವಿಸಿದ್ದೇಶ್ವರ ಶಾಖಾಮಠ ಕಡ್ಲಬಾಳು) ಭಾಗವಹಿಸಿ, ಧರ್ಮವೇ ಜಗದಿಮೂಲ, ಧರ್ಮವೇ ಜೀವನದ ಸೂತ್ರ, ನಮ್ಮಯ ಬಾಳಿನ ಬೆಳಕು ಹಲವು ಮಾತೇನು ನೀನು ಒಲಿದ ಪಾದವನಿಟ್ಟ ನೆಲವೇ ಸುಕ್ಷೇತ್ರ, ಜಲವೇ ಪಾವನ ತೀರ್ಥ ಸುಲಭ ಎಂದು ಶ್ರೀಗುರುವೇ ಕೃಪೆಯಾಗು ಎಂದರು.

ಬಡವ ಮತ್ತು ಶ್ರೀಮಂತನ ಜೀವದಲ್ಲಿ ಸುಖ ಮತ್ತು ಬಡವನ ಕಷ್ಟದ ಹಾದಿಯನ್ನು ಮತ್ತು ನೀತಿಯನ್ನು ಒಂದು ಗುಬ್ಬಿಯ ಗೂಡುಕಟ್ಟುವ ಕಥೆಯ ಗುಬ್ಬಿ ಮತ್ತು ಶೀಮಂತನ ಸಂಭಾಷಣೆಯಲ್ಲಿ, ಯಾರು ದುಡಿದು ತಿನ್ನುತ್ತಾರೋ ಅದು ಶಾಶ್ವತವಾಗಿರುತ್ತದೆ. ಯಾರು ಕಾಯಕ ಮಾಡ್ತಾರೊ ಅವರಿಗೆ ಸುಖ ಇರುತ್ತೆ, ಎಂದು ಹೇಳಿದರು. ಇದು ಕೋಳಿಸಾಕದ ಊರು ಮತ್ತು ಯಾರಾದರು ಕುಡಿದು ಊರಿಗೆ ಬಂದ್ರೇ ಗ್ರಾಮದೊಳಗೆ ಬರುವುದಿಲ್ಲ, ಬಂದ್ರು ದೇವರ ಕಟ್ಟೆ ಹತ್ತುವುದಿಲ್ಲ.

ಒಂದು ಬಂಗಾರಗಟ್ಟಿಯಲ್ಲಿ ಉಪ್ಪಾರಗಟ್ಟಿ ಇದೆ. ಗುಡ್ಡಜ್ಜರ ವಾಣಿಗೆ ಗುರುವಾಕ್ಯವನ್ನ ಭಕ್ತಿಯಿಂದ ಪಾಲಿಸುವ ಊರು ಬಂಗಾರಗಟ್ಟಿ ಇದು ಉಪ್ಪಾರಗಟ್ಟಿ ಎಂದು ಹೆಮ್ಮೆಯಿಂದ ಸಂದೇಶ ಸಾರಿದರು. ಈ ಗ್ರಾಮಕ್ಕೆ ಬಂದಿದಕ್ಕೆ ಹಂಡೇ ಹಾಲುಕುಡಿದಂಗಾಗಿದೆ. ತವರಮನಿಗೆ ಬಂದಂಗಾಗಿದೆ ಎಂದು ಸಂತೋಷದಿಂದ ನುಡಿದು, ಹನ್ನೆರಡನೇ ಶತಮಾನದ ಬಸವಣ್ಣ, ಅಲ್ಲಮಪ್ರಭುಗಳು ಬಾಡಲಾರದ ಹೂವುಗಳಾಗಿದ್ದರು. ಸಮಾಜದಲ್ಲಿ ಉತ್ತಮರ ಸಂಘ ಹೆಜ್ಜೇನು ಸವಿದಂತೆ, ದುರ್ಜನರ ಸಂಘ ಬಚ್ಛಲ ಹೇಸಿಗೆ ಸವಿದಂತೆ.

ತಾಯಿಂದಿರಿಗೆ, ಹಿರಿಯರಿಗೆ ಸದ್ಗುಣಗಳಿಂದ ಪ್ರೀತಿ ಗೌರವ ನೀಡುವಲ್ಲಿ ನಡದರೆ ನಿಮ್ಮ ಬಾಳು ಬಂಗಾರವಾಗುತ್ತೆ. ಇದೇ ರೀತಿ ಗುರುವಿನ ವಾಕ್ಯಪಾಲನೆ ಮಾಡುವ ಉಪ್ಪಾರಗಟ್ಟಿ ಬಿಟ್ರೇ ಊರು ಮತ್ತೊಂದಿಲ್ಲ ಎಂದು ಹೇಳಿದರು. ಈ ವೇಳೆ ಗವಿಸಿದ್ದೇಶ್ವರನ ಶಿಶುನಾಮಕರಣಕ್ಕೆ ಗ್ರಾಮದಲ್ಲಿನ ಎಲ್ಲ ತಾಯಂದಿರು ಆಗಮಿಸಿ, ತೊಟ್ಟಿಲು ತೂಗಿ ಗುಡದಯ್ಯ ಗುಡದಯ್ಯ ಗುಡದಯ್ಯ ಎಂದು ಮೂರು ಬಾರಿ ಹೇಳಿ ನಾಮಕರಿಸಿದರು.

ಇದು ಗವಿಸಿದ್ದೇಶನ ತೊಟ್ಟಿಲಲ್ಲಿ ಇಟ್ಟ ಮೂಲ ಹೆಸರು ಗುಡದಯ್ಯ. ಬಣ್ಣದ ಉಡುಗೆಗಳು, ಎಲ್ಲರಿಗೂ ಗುಗ್ರಿ ಹಂಚಿ, ಇತರೆ ಬೇಕಾಗುವ ಕೊಡುಗೆಗಳನ್ನು ತಂದು ಗವಿಸಿದ್ದೇಶನ ತೊಟ್ಟಿಲಿಗೆ ಭಕ್ತಿಯಿಂದ ಅರ್ಪಿಸಿ, ಎಲ್ಲಾ ಸಾಂಪ್ರದಾಯಕ ಕಾರ್ಯಕ್ರಮ ಮಾಡಿದರು. ಈ ವೇಳೆ ಗ್ರಾಮದ ಭಕ್ತ ಸಮುದಾಯ ಮತ್ತು ಶಂಕರಲಿಂಗೇಶ್ವರ ಟ್ರಸ್ಟ್ ಉಪ್ಪಾರಗಟ್ಟಿ ಭಾಗವಹಿಸಿದ್ದರು.  

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770770
Today
Yesterday
This Week
Last Week
This Month
Last Month
All days
5942
14978
20920
3647859
196997
189062
3770770
Your IP: 54.221.76.68
2017-12-18 08:47