Breaking News

ಗಿರಿಜನ ಉತ್ಸವ -2017

Written by 
Published: 23 November 2017
91 times Last modified on Thursday, 23 November 2017 15:01

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ನ.23;

ವರದಿ : ಟಿ.ಗಣೇಶ್

ನ.26ರಂದು ವಿವಿಧ ಬಗೆಯ 17ಜನಪದ ಕಲಾ ತಂಡಗಳಿಂದ ಗಿರಿಜನ ಉತ್ಸವ -2017 ನಡೆಯಲಿದೆ.

ಕಾರ್ಮಿಕ, ಕೌಶಲ್ಯಾಭಿವೃದ್ಧಿ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸಂತೋಷ್ ಲಾಡ್ ಅವರಿಂದ ಚಾಲನೆ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ಸಹಾಯಕ ನಿರ್ಧೇಶಕ ಬಿ.ನಾಗರಾಜ ತಿಳಿಸಿದರು.

ಇಂದು ನಗರದ ಎಸ್.ಎನ್.ಪೇಟೆಯ ರಾಘವೇಂದ್ರಸ್ವಾಮಿ ದೇವಸ್ಥಾನದ ಹತ್ತಿರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಗಿರಿಜನ ಉತ್ಸವ 2017ರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಗಿರಿಜನ ಉಪಯೋಜನೆಯಡಿ ಜರುಗಿಸಲಾಗುತ್ತಿದೆ.

ಇದರಲ್ಲಿ ಒಟ್ಟು 17 ಜನಪದ ಕಲಾತಂಡಗಳು ಭಾಗವಹಿಸಲಿವೆ. ನವಂರ್ 26ರಂದು ಮಧ್ಯಾನ 3ಗಂಟೆಗೆ ಜಾನಪದ ವಾಹಿನಿ (ಜಾನಪದ ಕಲಾತಂಡಗಳ ಮೆರವಣಿಗೆ). ಈ ಮೆರವಣಿಗೆಯಲ್ಲಿ ಒಟ್ಟು 8 ಜಾನಪದ ಕಲಾತಂಡಗಳು ಭಾಗವಹಿಸುತ್ತವೆ.  ಮಹಿಳಾ ಡೊಳ್ಳು ಕುಣಿತ, ಸೋಮನಕುಣಿತ, ಗಾರಡಿ ಗೊಂಬೆ, ಜಗ್ಗಲಿಗಿ, ಕೋಲಾಟ,ಕೀಲುಕುದುರೆ, ಡೊಳ್ಳುಕುಣಿತ, ತಾಷರಂಡೋಲ್, ಈ ಎಲ್ಲಾ ಕಲಾತಂಡಗಳಿಂದ ನಗರದ ಸಾಂಸ್ಕೃತಿಕ ಸಮುಚ್ಚಯದಿಂದ ಡಾ.ರಾಜ್ ಕುಮಾರ ರಸ್ತೆಯ ಮಾರ್ಗವಾಗಿ,ರಾಯಲ್ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ ಪೋಲಿಸ್ ಠಾಣೆ, ತೇರು ಬೀದಿ, ಜೈನ್ ಮಾರ್ಕೆಟ್, ಮೋತಿವೃತ್ತ, ದಿಂದ ಡಾ,, ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ಮೆರವಣಿಗೆ ನಡೆಯಲಿದೆ.

ರಂಗಮಂದಿರದ ಆವರಣದಲ್ಲಿ ಬಳ್ಳಾರಿ ಜಿಲ್ಲೆಯ ಕುರುಗೋಡಿನ ನಂದೀಶ್ ಕುಮಾರ್, ಹೊಸಪೇಟೆಯ ರಾಮಪುರದ ಬಿ.ಪುರುಷೋತ್ತಮ ಅವರಿಂದ ಚಿತ್ರಕಲಾ ಪ್ರದರ್ಶನ ಇರುತ್ತದೆ. ಮತ್ತು ಸಂಜೆ 5:30ಕ್ಕೆ ವೇದಿಕೆಯ ಮೇಲೆ 9 ಕಲಾ ತಂಡಗಳಿಂದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಹಕ್ಕಿಪಿಕ್ಕಿ ನೃತ್ಯ, ರಿವಾಯತ್ ಪದಗಳು, ಸಮೂಹ ನೃತ್ಯ, ರಂಗಗೀತೆಗಳು, ಜಾನಪದ ನೃತ್ಯ, ಸುಗಮ ಸಂಗೀತ, ಸಂಪ್ರದಾಯ ಗೀತೆಗಳು, ಹಾಗೂ ಹಾಸ್ಯ ನಾಟಕ ''ಜನ ಮರಳೋ ಜಾತ್ರೆ ಮರಳೋ,, ಸೀತಾ ಅಪಹರಣ ಬಯಲಾಟ ಸನ್ನಿವೇಶಗಳು ನಡೆಯಲಿವೆ ಎಂದು ಬಿ.ನಾಗರಾಜ ವಿವರಿಸಿದರು.

ನ.30ರಂದು ರಂಗಭೂಮಿ ಮತ್ತು ತೊಗಲು ಗೊಂಬೆ :

ನ.30ರಂದು ರಂಗಭೂಮಿ ಮತ್ತು ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಅವರ ಜೀವನ ಸಾಧನೆ ಕುರಿತು ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಡೂರಿನ ಹಿರಿಯ ಚಿತ್ರಕಲಾವಿದ ನಾಡೋಜ ಡಾ,ವಿ.ಟಿ.ಕಾಳೆ.ನೆರವೇರಿಸಲಿದ್ದಾರೆ. ಬಳ್ಳಾರಿಯ ಹಿರಿಯ ರಂಗಭೂಮಿ ಕಲಾವಿಧರು ನಾಡೋಜ ಡಾ.ಸುಭದ್ರಮ್ಮ ಮನ್ಸೂರ್,ಅಧ್ಯಕ್ಷತೆ ವಹಿಸಲಿದ್ದಾರೆ.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಶ್ರೀ ಮಾತ ಮಂಜಮ್ಮ ಜೋಗತಿ, ಸಿ ನಾರಾಯಣಪ್ಪ, ಡಾ,ಎಸ್.ಜೆ.ವಿ.ಮಹಿಪಾಲ್, ಪ್ರೋ.ಕೆ.ಹೆಚ್.ಹರಿಕುಮಾರ್, ಜೆ.ಅನಿಲ್ ಕುಮಾರ್, ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ. ಹಾಗೂ "ಜೀವನ ಮತ್ತು ಸಾಧನೆ" ಕುರಿತು ವಿಚಾರ ಸಂಕಿರಣ ನಡೆಯಲಿದೆ. ಟಿ.ಕೆ.ಗಂಗಾಧರ ಪತ್ತಾರ್,ಹಾಗೂ ಎ.ಎಂ.ಜಯಶ್ರೀ ಸಾಹಿತಿಗಳು ಬಳ್ಳಾರಿ ಇವರು ರಂಗಭೂಮಿ ಮತ್ತು ತೊಗಲುಗೊಂಬೆ ಕಲಾಕ್ಷೇತ್ರದ ಕೊಡುಗೆಗಳು ವಿಷಯವಾಗಿ ಮಾತನಾಡಲಿದ್ದಾರೆ.

ಸಂವಾದ :- ಬಳ್ಳಾರಿಯ ಬಿ.ವೀಣಾಕುಮಾರಿ,ಕೆ.ಪಂಪಾಪತಿ(ಸಾರಥಿ) ಸಿ.ಮಂಜುನಾಥ್, ಶಶಿಧರ ಮೇಟಿ, ಮತ್ತು ಸಂಡೂರಿನ ಕೆ.ವಿ.ಕಾಳೆ.ಇವರಿಂದ ಸಂವಾದ ನಡೆಯಲಿದೆ. ನಂತರ ಹೊಸಪೇಟೆಯ ಜೀವನ್ ಸಾಬ್ ವಾಲಿಕರ್ ಅವರಿಂದ ಜಾನಪದ ಗೀತೆಗಳು, ನಡೆಯಲಿದೆ ಎಂದು ಹೇಳಿದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770768
Today
Yesterday
This Week
Last Week
This Month
Last Month
All days
5940
14978
20918
3647859
196995
189062
3770768
Your IP: 54.221.76.68
2017-12-18 08:47