Breaking News

ಗ್ರಾ.ಪಂ ನೂತನ ಅಧ್ಯಕ್ಷರಾಗಿ ಸುಧಾ ಬೈರೇಗೌಡ ಮತ್ತು ಉಪಾಧ್ಯಕ್ಷರಾಗಿ ರಾಮನಾಯ್ಕ್ ಆಯ್ಕೆ

Written by 
Published: 10 December 2017
168 times Last modified on Sunday, 10 December 2017 06:56

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಡಿ.10;

ವರದಿ : ಬಸವರಾಜ್ ಪೂಜಾರ್

ಗ್ರಾ.ಪಂ ನೂತನ ಅಧ್ಯಕ್ಷರಾಗಿ ಸುಧಾ ಬೈರೇಗೌಡ ಮತ್ತು ಉಪಾಧ್ಯಕ್ಷರಾಗಿ ರಾಮನಾಯ್ಕ್ ಆಯ್ಕೆಯಾಗಿದ್ದಾರೆ.

ಹರಪನಹಳ್ಳಿ ತಾಲ್ಲೂಕಿನ ಚಟ್ನಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ವ್ಯಯಕ್ತಿಕ ಹಾಗೂ ಅನಾರೋಗ್ಯದ ಕಾರಣ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜೀನಾಮೆಯಿಂದ ತೆರವುಗೊಂಡಿದ್ದ ಚಟ್ನಹಳ್ಳಿ ಗ್ರಾ.ಪಂ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ಗ್ರಾ.ಪಂ ನೂತನ ಅಧ್ಯಕ್ಷರಾಗಿ ಸುಧಾ ಬೈರೇಗೌಡ ಮತ್ತು ಉಪಾಧ್ಯಕ್ಷರಾಗಿ ರಾಮನಾಯ್ಕ್ ಆಯ್ಕೆಯಾದರು.  

ಎರಡು ಸ್ಥಾನಕ್ಕೂ ಇಂದು ಚುನಾವಣೆ ನಡೆಯಬೇಕಿತ್ತು ಅದರೆ ಉಪಾಧ್ಯಕ್ಷರ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಉಪಾದ್ಯಕ್ಷರ ಅಯ್ಕೆಗೆ ಚುನಾವಣೆ ನಡೆಯಲಿಲ್ಲ. ಅದ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸುಧಾ ಬೈರೇಗೌಡ ಹಾಗೂ ಕಾಂಗ್ರೆಸ್ ನಿಂದ ಸುಶೀಲಮ್ಮ ನಾಮಪತ್ರ ಸಲ್ಲಿಸಿದ್ದರು. ಗ್ರಾಮ ಪಂಚಾಯತ್ನಲ್ಲಿ ಒಟ್ಟು 20ಸದಸ್ಯರು ಇದ್ದು, 15ಜನ ಸದಸ್ಯರು ಸುಧಾ ಬೈರೇಗೌಡರಿಗೆ ಓಟು ನೀಡಿದರೆ, 5 ಜನ ಸದಸ್ಯರು ಸುಶೀಲಮ್ಮನಿಗೆ ಓಟು ನೀಡಿದರು. ಅಲ್ಲದೆ ಉಪಾಧ್ಯಕ್ಷರ ಆಯ್ಕೆಗೆ ಒಬ್ಬರೇ ನಾಮಪತ್ರ ಸಲಿಸಿದ್ದ ಕಾರಣ ರಾಮನಾಯ್ಕ ಎನ್ನುವರು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಶ್ರೀಮತಿ ಸುಧಾ ಬೈರೇಗೌಡರು 15ಮತಗಳನ್ನು ಗಳಿಸಿ ಗ್ರಾಮ ಪಂಚಾಯತ್ ಅದ್ಯಕ್ಷರಾಗಿ ಅಯ್ಕೆಯಾದರು ಎಂದು ಹರಪನಹಳ್ಳಿಯ ಕಾರ್ಯಪಾಲಕ ಆಭಿಯಂತರಾದ ಹಾಗೂ ಚುನಾವಣಾ ಅಧಿಕಾರಿಯಾದ ಎಸ್.ಪ್ರಭಾಕರ ತಿಳಿಸಿದರು. 

ಈ ವೇಳೆ ಜಿಲ್ಲಾ ಪಂಚಾಯತ್ ಸದಸ್ಯರಾದ ರಶ್ಮಿ ರಾಜಪ್ಪ, ದಾವಣಗೆರೆ ಜಿಲ್ಲೆಯ ಜನಪ್ರಿಯ ಸಂಸದರಾದ ಜಿ.ಎಂ.ಸಿದ್ದೇಶ ಹಾಗೂ ಜಗಳೂರಿನ ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರಪ್ಪ ಹಾಗೂ ಜಿಲ್ಲಾ ಬಿಜೆಪಿ ಆದ್ಯಕ್ಷರಾದ ಯಶವಂತರಾವ್ ಜಾದವ್  ನೂತನ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರು ಹಾಗೂ ಪಣಿಯಪುರ ನಿಂಗರಾಜು, ಸುರೇಶ್ , ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250331
Today
Yesterday
This Week
Last Week
This Month
Last Month
All days
9738
16742
76059
4062809
281426
395132
4250331
Your IP: 54.234.190.237
2018-01-18 15:48