Breaking News

ಗುರುವಾಕ್ಯ ಮೀರಲ್ಲ ಗುರು ಪಾದ ಬಿಡಲ್ಲ : ಗವಿಶ್ರೀಗಳು

Written by 

 

 

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಡಿ.01;

ವರದಿ : ಕೋಗಳಿ ಶೇಖರ್ 

ಗುರುವಾಕ್ಯ ಮೀರಲ್ಲ ಗುರು ಪಾದ ಬಿಡಲ್ಲ: ಕಲ್ಬಂಡೆಯ ನಾಡು, ಬಂಗಾರಗಟ್ಟಿ ಇದು  ಉಪ್ಪಾರಗಟ್ಟಿ : ಅಭಿನವ ಗವಿಶ್ರೀ.

ಹಗರಿಬೊಮ್ಮನಹಳ್ಳಿ ತಾಲೂಕಿನ ಉಪ್ಪಾರಗಟ್ಟಿಯಲ್ಲಿ ಶ್ರೀ ಶಂಕರಲಿಂಗೇಶ್ವರಸ್ವಾಮಿ ಕಾರ್ತಿಕೋತ್ಸವದ ಪ್ರಯುಕ್ತ ಬುಧವಾರ  ಕೊಪ್ಪಳದ ಅಭಿನವಶ್ರೀಗಳು, ಭಕ್ತರನ್ನು ಉದ್ದೇಶಸಿ ಆಶೀರ್ವಚನ ನೀಡಿದರು. ಪುರಾಣದ ಹನ್ನೊಂದನೇ ಕೊನೆಯ ದಿನದ ಗುರುವಾರ  ಡಾ.ಹಿರೇಶಾಂತವೀರ ಮಹಾಸ್ವಾಮಿಗಳು ಹಾಗೂ ಸೋಮಶಂಕರ ಸ್ವಾಮಿಗಳು ಸಮ್ಮುಖದಲ್ಲಿ ಪುರಾಣ ಮಹಾಮಂಗಲ ನೆರವೇರಿತು.


ಹನ್ನೊಂದು ದಿನಗಳ ಶ್ರೀ ಗವಿಸಿದ್ದೇಶ್ವರರ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೇವೇ ಸಲ್ಲಿಸಿದ ಕಲಾವಿದರಾದ ಪಂಚಾಕ್ಷರಿ ಶಾಸ್ತ್ರಿ ಆಕಾಶವಾಣಿ ಕಲಾವಿದರು ಮತ್ತು ತಬಲ ಚತುರ ಬಸವರಾಜ ವೀರೇಶ್ವರ ಪುಣ್ಯಾಶ್ರಮ ಗದಗ ಇವರಿಗೆ ಗ್ರಾಮದ ಭಕ್ತಾಧಿಗಳು  ಗೌರವಿಸಿ ಸನ್ಮಾನಿಸಿದರು.

ಈ ವೇಳೆ ಗವಿಶ್ರೀಗಳು ಮಾತನಾಡಿ, ವಿಸ್ತಾರವಾದ ಕೆರೆಯ ನೀರಿನ ಅಲೆಗಳ ಕಲರವ ಗಗನದಾಂಗಳದಲ್ಲಿ ಹಕ್ಕಿಯ ಹಾರಾಟ, ಅಚ್ಚ ಹಸಿರಿನ ಗಿಡಮರಗಳ ಆ ನೋಟ, ಕೆರೆಯ ತೀರದಲ್ಲಿರುವ ಗುಡ್ಡದ ಕಲ್ಲು ಬಂಡೆಯ ಮೇಲೆ ಜನ್ಮ ತಾಳಿದ ಸುತ್ತಹಳ್ಳಿಗಳಿಗೆ ಮುತ್ತಿನ ರತ್ನದಂತೆ ಹೋಳೆಯುವ ಈ ಬಂಗಾರಗಟ್ಟಿ ಇದು ಉಪ್ಪಾರಗಟ್ಟಿ. ಇಲ್ಲಿ  ಶ್ರೀ ಶಂಕರಲಿಂಗೇಶ್ವರಸ್ವಾಮಿ ಕೃಪೆಯಿಂದ, ಸಾಧುಸಂತರ  ಮಹಾ ಪವಾಡ ಪುಣ್ಯಪುರುಷರ ಶ್ರೀಗಳು ಪಾದಸ್ಪರ್ಷಿಸಿದ, ಧಾರ್ಮಿಕ ದೈವತ್ವದ ನಂಬಿಕೆಯ ನಂಟಿನ ನೆಲೆಗಟ್ಟಿದ ಬಂಗಾರಗಟ್ಟಿಯಲ್ಲಿ  ಗುರುವಾಕ್ಯ ಪಾಲನೆ  ಮಾಡಿದ ಗಟ್ಟಿ ಊರು, ಇದು ಉಪ್ಪಾರಗಟ್ಟಿ ಎಂದರು.

ಇಲ್ಲಿ ಎಲ್ಲಾ ಸಮುದಾಯವು  ಉಂಟು, ಈ ಆಧುನಿಕ ಸಮಾಜದಲ್ಲಿ ಸಾಮಾನ್ಯವಾಗಿ ಹಾಗೂ ವಿಶೇಷವಾಗಿ ಧಾರ್ಮಿಕತೆಯ ಬಾಂಧವ್ಯದ ಬದುಕಿನಲ್ಲಿ ಜಾತಿ ಭೇಧವೆನ್ನದೆ ಎಲ್ಲರು ಸಮಾನರು. ಇದು ಐತಿಹಾಸಿಕ ಧಾರ್ಮಿಕ  ಸಂಸ್ಕೃತಿಯ ದೈವತ್ವದ ನೆಲೆಗಟ್ಟು.   ಇಲ್ಲಿ ಸರ್ವ ಸಮುದಾಯದ ಸಮನ್ವಯ, ಬಾಂಧವ್ಯದ ಬದುಕಿನಲ್ಲಿ ಆರಾಧ್ಯ ದೇವರು ಅಂದರೆ ಶ್ರೀ ಶಂಕರಲಿಂಗೇಶ್ವರ. ಈ ಭಾಗದ ಸುತ್ತಮುತ್ತಲಿನ ಹಳ್ಳಿಯ ಭಕ್ತರ ಅಂತರಾಳದಲ್ಲಿ ಗಟ್ಟಿಯಾಗಿ ನೆಲೆಸಿರುವ ಪ್ರಭುದ್ಧ ನಂಬಿಕೆ ಮತ್ತು ಪವಾಡ ಪುರುಷ ಶ್ರೀ ಶಂಕರಲಿಂಗೇಶ್ವರಸ್ವಾಮಿ.


ಈ ಎಲ್ಲಾ ವಿಶಿಷ್ಟತೆಗೆ ಶ್ರೀ ಶಂಕರಲಿಂಗೇಶ್ವರಸ್ವಾಮಿ ಮತ್ತು ಶ್ರೀ ಮಾದೂರು ಮಾಸ್ತೆಮ್ಮ ದೇವಿಯ ಮಹಿಮೆಯ ಇತಿಹಾಸವಿದೆ ಎನ್ನುತ್ತಾರೆ ಈ ಗ್ರಾಮದ ಜನರು  ಮತ್ತು ಶ್ರೀ ಶಂಕರಲಿಂಗೇಶ್ವರಸ್ವಾಮಿ ಟ್ರಸ್ಟ್ ಉಪ್ಪಾರಗಟ್ಟಿಯ ಪದಾಧಿಕಾರಿಗಳು. ಏತ್ಮಧ್ಯ ನೂತನ ದೇವಾಲಯದ ಸುಮಾರು ಮೂತ್ತದ ಹಣವ್ಯಯ ಮಾಡಿ ನಿರ್ಮಾಣದ ಕಾರ್ಯ ಮುಕ್ತಾಯದ ಹಂತದಲ್ಲಿದೆ. ಪುರಾಣ ಮಹಾಮಂಗಲ ಕಾರ್ಯಕ್ರಮದಲ್ಲಿ ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷರು, ಸದಸ್ಯರು. ಮತ್ತು ಕಾರ್ಯದರ್ಶಿಗಳು ಹಾಗೂ ಗ್ರಾಮದ ಸಮಸ್ತ ಭಕ್ತರು ಭಾಗವಹಿಸಿ ಧಾರ್ಮಿಕ ಕಾರ್ಯಕ್ಕೆ ಕಳೆತಂದಿದ್ದರು.

 

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770805
Today
Yesterday
This Week
Last Week
This Month
Last Month
All days
5977
14978
20955
3647859
197032
189062
3770805
Your IP: 54.221.76.68
2017-12-18 08:51