Breaking News

ಹಾಡಹಗಲೇ ಯುವಕನ ಕೊಲೆ

Written by 
Published: 03 January 2018
59 times Last modified on Wednesday, 03 January 2018 12:26

ಕೆ.ಎನ್.ಪಿ.ವಾರ್ತೆ,ಮಂಗಳೂರು,ಜ.03;

ಹಾಡಹಗಲೇ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಂದು ಸಂಭವಿಸಿದೆ.

ನಗರದ ‌ಸುರತ್ಕಲ್‌ ಸಮೀಪದ ಕೃಷ್ಣಾಪುರದಲ್ಲಿ ಇಂದು ಮಧ್ಯಾಹ್ನ ಬೈಕಿನಲ್ಲಿ ಹೋಗುತ್ತಿದ್ದ ಯುವಕನೊಬ್ಬನನ್ನು ಕಾರಿನಲ್ಲಿ ಬೆನ್ನಟ್ಟಿ ಬಂದ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕಾಟಿಪಳ್ಳ ಕೈಕಂಬ ನಿವಾಸಿ ದೀಪಕ್ (32) ಕೊಲೆಯಾದ ಯುವಕ. 

ಮಜೀದ್ ಎಂಬ ಮಾಲೀಕರೊಬ್ಬರ ಮೊಬೈಲ್ ಏಜೆನ್ಸಿಯಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ ದೀಪಕ್, ತನ್ನ ಬೈಕ್‍ನಲ್ಲಿ ತೆರಳುವಾಗ ಸೂರತ್ಕಲ್ ಬಳಿಯ ಕಾಟಿಪಾಳ್ಯ ಸಮೀಪ ನಾಲ್ವರ ತಂಡವೊಂದು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಶವವನ್ನು ಎ.ಜೆ. ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಈ ಬಗ್ಗೆ ಸುರತ್ಕಲ್ ಮತ್ತು ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದಾರೆ.

ವರದಿಗಳಿಂದ ದೊರೆತ ಮಾಹಿತಿ ಪ್ರಕಾರ, ಮೃತ ದೀಪಕ್ ಮೊದಲು ಬಜರಂಗದಳದ ಕಾರ್ಯಕರ್ತನಾಗಿದ್ದು, ಬಿಜೆಪಿಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಈದ್ ಮಿಲಾದ್ ಸಮಯದಲ್ಲಿ ಕೃಷ್ಣಾಪುರದಲ್ಲಿ ದೀಪಕ್ ನೇತೃತ್ವದ ಹಿಂದೂ ಯುವಕರ ಗುಂಪು ಹಾಗೂ ಮುಸ್ಲಿಂ ಯುವಕರ‌ ಗುಂಪಿನ ನಡುವೆ ಬ್ಯಾನರ್ ಕಟ್ಟುವ ಸ್ಥಳದ ವಿಚಾರದಲ್ಲಿ ಗಲಾಟೆ ನಡೆದಿತ್ತು ಎಂಬ ಮಾಹಿತಿ ಪೊಲೀಸರ ಪ್ರಾಥಮಿಕ ಪರಿಶೀಲನೆ ವೇಳೆ ಲಭ್ಯವಾಗಿದೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4274357
Today
Yesterday
This Week
Last Week
This Month
Last Month
All days
792
15484
100085
4062809
305452
395132
4274357
Your IP: 54.167.126.106
2018-01-20 01:16